ಕಾರವಾರ(ಮೇ.09): ಮುಳ್ಳು ಹಂದಿ ಮೀನು (ಬಲೂನ್‌ ಫಿಶ್‌) ಕಾರವಾರದ ಕಡಲ ತೀರದಲ್ಲಿ ಗುರುವಾರ ಪತ್ತೆಯಾಗಿದೆ. ನಗರದ ಕೋಡಿಬಾಗದಲ್ಲಿನ ಸಾಗರ ದರ್ಶನ ಸಭಾಂಗಣದ ಹಿಂಭಾಗದಲ್ಲಿ ಸಿಕ್ಕಿದೆ. ವೈಜ್ಞಾನಿಕವಾಗಿ ಲಾಂಗ್‌ ಫೋಕ್ರ್ಯುಫೈನ್‌ ಫೀಶ್‌ ಎನ್ನುತ್ತಾರೆ.

ಈ ಮೀನಿಗೆ ಮೈ ತುಂಬಾ ಮುಳ್ಳುಗಳಿದ್ದು, ತನ್ನನ್ನು ಸ್ಪರ್ಶಿಸಲು ಯಾರಾದರು ಬಂದರೆ ಅಥವಾ ಅಪಾಯ ಎದುರಾಗಿದೆ ಎಂದರೆ ಕೂಡಲೇ ತನ್ನ ಮೈಯನ್ನು ಬಲೂನ್‌ ಮಾದರಿಯಲ್ಲಿ ಉಬ್ಬಿಸಿಕೊಳ್ಳುತ್ತದೆ. ಮುಳ್ಳು ನಂಜನ್ನು ಹೊಂದಿರುತ್ತದೆ. ಚುಚ್ಚಿದರೆ ನಂಜು ಆಗುತ್ತದೆ.

 

ಈ ಜಾತಿಯ ಕೆಲವು ಮೀನುಗಳಲ್ಲಿ ಸೆಪ್ಟಿಡೋರ್‌ ಟಾಕ್ಸಿನ್‌ ಎನ್ನುವ ವಿಷ ಇರುತ್ತದೆ. ಇದು ಸೈನೆಡ್‌ಗಿಂತ ಸಾವಿರ ಪಟ್ಟು ಪರಿಣಾಮಕಾರಿಯಾಗಿದೆ. ಚೀನಾದಲ್ಲಿ ಔಷಧಕ್ಕೆ ಈ ಮೀನಿನ ನಂಜನ್ನು ಬಳಕೆ ಮಾಡುವ ಉಲ್ಲೇಖ ಕೂಡಾ ಇದೆ.

ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ. ಶಿವಕುಮಾರ ಹರಗಿ, ಇದು ಚಿಪ್ಪಿಕಲ್ಲು, ಶೆಟ್ಲಿ ಚಾತಿಯ ಮೀನು ತಿನ್ನುತ್ತದೆ. ನೀರಿನಿಂದ ಹೊರಬಂದ ಮೇಲೂ ಬಹಳಷ್ಟುಹೊತ್ತು ಜೀವಂತವಾಗಿ ಇರುತ್ತದೆ. ಆದರೆ, ತಿನ್ನಲು ಯೋಗ್ಯವಲ್ಲ ಎನ್ನುತ್ತಾರೆ.