ಮಂಡ್ಯ(ಫೆ.08) ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಲಪಡಿಸಲು ಮಾಜಿ ಮುಖ್ಯಮಂತ್ರಿ ಎಸ್‌ಎಂ.ಕೃಷ್ಣ ಎಂಟ್ರಿ ಮಾಡಿಲಸಾಗಿದೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿರುವ ಎಸ್‌.ಎಂ.ಕೃಷ್ಣ ಪಾಲ್ಗೊಳ್ಳಲಿದ್ದು ಅವರ ನೇತೃತ್ವದಲ್ಲಿಯೇ ಸಭೆ ನಡೆಯಲಿದೆ.

ಮಂಡ್ಯ ನಗರದ ಬೆಂಗಳೂರು- ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಸಭೆ ನಡೆಯಲಿದ್ದು ಜಿಲ್ಲಾ ರಾಜಕಾರಣದ ಬಗ್ಗೆ ಚರ್ಚೆ ನಡೆಯಲಿದೆ.

ಸುಮಲತಾ ಗೌಡ್ತಿ ಅಲ್ಲ... ಹೇಳಿಕೆ ಎಚ್ಚಿಸಿದ ರಾದ್ಧಾಂತ

ಲೋಕಾ ಸಮರದಲ್ಲಿ ಎಸ್.ಎಂ. ಕೃಷ್ಣ ವರ್ಚಸ್ಸು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಬಿಜೆಪಿ ಕಾರ್ಯಕರ್ತರ ಸಭೆಯ ಮೂಲಕ ಮಂಡ್ಯದ ಸಂಪೂರ್ಣ ಉಸ್ತುವಾರಿಯನ್ನು ಎಸ್‌ಎಂಕೆ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಒಂದು ವೇಳೆ ಸುಮಲತಾ ಬಿಜೆಪಿ ಅಭ್ಯರ್ಥಿಯಾದರೂ ಎಸ್‌ಎಂಕೆ ಸಕ್ರಿಯಯವಾಗಿ ಕಾಣಿಸಿಕೊಳ್ಳಲಿದ್ದಾರೆ ಎಬ ಮಾತು ಕೇಳಿ ಬಂದಿದೆ.