Bengaluru Rural: ತಾಲೂಕು ಕಛೇರಿ ಮೇಲೆ ಲೋಕಾಯುಕ್ತಾ ದಾಳಿ ಬೆಚ್ಚಿ ಬಿದ್ದ ಸಿಬ್ಬಂದಿ
ಲೋಕಾಯುಕ್ತ ಸಂಸ್ಥೆಗೆ ಮತ್ತೆ ಅಧಿಕಾರ ಬಂದ ಮೇಲೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಬೆಂಗಳೂರು ಪೂರ್ವ ತಾಲೂಕು ಕಚೇರಿ ಮೇಲೆ ದಿಡೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಸಿ ಸಾರ್ವಜನಿಕ ಅಹವಾಲುಗಳನ್ನ ಆಲಿಸಿ ಅಧಿಕಾರಿಗಳಿಗೆ ಶಾಕ್ ನೀಡಿದರು.
ವರದಿ : ಟಿ.ಮಂಜುನಾಥ, ಹೆಬ್ಬಗೋಡಿ
ಕೆ.ಆರ್.ಪುರಂ (ಸೆ.27): ಲೋಕಾಯುಕ್ತ ಸಂಸ್ಥೆಗೆ ಮತ್ತೆ ಅಧಿಕಾರ ಸಿಕ್ಕಿದ್ದೇ ತಡ, ಮಿಂಚಿನ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ, ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಬೆಂಗಳೂರು ಪೂರ್ವ ತಾಲೂಕು ಕಚೇರಿ ಮೇಲೆ ಉಪ ಲೋಕಾಯುಕ್ತಾ ಫಣೀಂದ್ರ ಹಾಗೂ ಲೋಕಾಯುಕ್ತಾ ನ್ಯಾಯಮೂರ್ತಿ ಚಂದ್ರಶೇಖರ್ ದಿಡೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಸಿ ಸಾರ್ವಜನಿಕ ಅಹವಾಲುಗಳನ್ನ ಆಲಿಸಿ ಅಧಿಕಾರಿಗಳಿಗೆ ಶಾಕ್ ನೀಡಿದರು. ಕೆ.ಆರ್.ಪುರಂ ತಹಸೀಲ್ದಾರ್ ಕಛೇರಿ ಮೇಲೆ ಉಪಲೋಕಾಯುಕ್ತರು ಮತ್ತು ನ್ಯಾಯಮೂರ್ತಿಗಳು ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸಿದರು, ಈ ವೇಳೆ ಸಾರ್ವಜನಿಕರು ಅಧಿಕಾರಿಗಳ ಕಾರ್ಯವೈಖರಿ ಹಾಗೂ ಹಣದ ಬೇಡಿಕೆಗಳ ಬಗ್ಗೆ ದೂರುಗಳನ್ನು ನೀಡಿ ತಮ್ಮ ಅಳಲನ್ನು ತೋಡಿಕೊಂಡರು, ಇಲ್ಲಿ ಯಾವುದೇ ಕೆಲಸ ಆಗಬೇಕೆಂದರೂ ಹಣ ನೀಡಲೇ ಬೇಕು, ಮೊನ್ನೆಯಷ್ಟೆ ಖಾತಾ ತಿದ್ದುಪಡಿ ವಿಚಾರವಾಗಿ 10 ಸಾವಿರ ರೂ ಲಂಚ ನೀಡಿದ್ದೇನೆ ಎಂದು ಸಾರ್ವಜನಿಕರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರು ಪೂರ್ವ ತಾಲೂಕು ತಹಸಿಲ್ದಾರ್ ಕಚೇರಿಯಲ್ಲಿ ನಿಗಧಿತ ವೇಳೆಯಲ್ಲಿ ಯಾವುದೇ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ, ಖಾತಾ, ಭೂ ಪರಿವರ್ತನೆ ಮಾಡಲು ಹಣದ ಬೇಡಿಕೆ ಅಲ್ಲದೇ ಸಿಬ್ಬಂದಿಗಳ ಕೊರತೆ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕರಿಂದ ಬಂದಿದ್ದವು.
ಕಚೇರಿಯ ಎಲ್ಲಾ ವಿಭಾಗದ ಕಡತಗಳನ್ನು ಪರಿಶೀಲಿಸಲಾಗಿದ್ದು ಎಲ್ಲವನ್ನೂ ಲೋಕಾಯುಕ್ತರ ಮುಂದಿಡಲಾಗುವುದು, ತದನಂತರ ಲೋಕಾಯುಕ್ತರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಸಾಕಷ್ಟು ಬಾರಿ ದಾಳಿಗಳು ನಡೆದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪ್ರಯತ್ನಗಳು ನಡೆಯುತ್ತಲೇ ಇವೆ, ಮೂಲೆಗುಂಪಾಗಿದ್ದ ಲೋಕಾಯುಕ್ತಗೆ ಮತ್ತೆ ಬಲ ಬಂದಿದ್ದು ಮುಂದಿನ ದಿನಗಳನ್ನು ಭ್ರಷ್ಟರನ್ನ ಹೇಗೆ ಮಟ್ಟ ಹಾಕುತ್ತಾರೆ ಎಂದು ನೋಡಬೇಕಿದೆ.
ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತರ ದಿಢೀರ ಭೇಟಿ
ಚಡಚಣ: ಪಟ್ಟಣದ ಸರ್ಕಾರಿ ಸಮುದಾಯ ಅರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನವರ ಹಾಗೂ ಅವರ ತಂಡ ದಿಢೀರ್ ಭೇಟಿ ನೀಡಿ ಆಸ್ಪತ್ರೆಯನ್ನು ಪರಿಶೀಲಿಸಿದ ಘಟನೆ ಮಂಗಳವಾರ ನಡೆಯಿತು.
ಭೇಟಿ ನೀಡಿದ ಸಂದರ್ಭ ಆಸ್ಪತ್ರೆಯಲ್ಲಿ ಒಬ್ಬರು ವೈದ್ಯರು ಹಾಗೂ ಮೂವರು ಶಿಬ್ಬಂದಿ ಹೊರತುಪಡಿಸಿದರೆ ಯಾರೊಬ್ಬರೂ ವೈದ್ಯರು ಇಲ್ಲದಿರುವುದು ಹಾಗೂ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನಂತರ ವರದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಎಸ್.ಪಿ. ಅನಿತಾ ಹದ್ದನವರ, ಆಸ್ಪತ್ರೆಯಲ್ಲಿ 7 ಜನ ವೈದ್ಯರಿದ್ದಾರೆ. ಅದರಲ್ಲಿ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದವರು ಸಹಿ ಹಾಕಿ ಹೊರಗೆ ಹೋಗಿರುವುದು ಕಂಡುಬಂದಿದೆ. ಆಸ್ಪತ್ರೆ ಸ್ವಲ್ಪವೂ ಸ್ವಚ್ಛತೆಯಿಲ್ಲ. ಮಹಿಳಾ ಸೌಚಾಲಾಯ ಹಾಳುಬಿದ್ದು ಹಲವು ವರ್ಷಗಳು ಕಳೆದರೂ ಅದರ ದುರಸ್ತಿ ಮಾಡುವ ಸಾಮಾನ್ಯ ಯೋಚನೆಯನ್ನು ಸಹ ಅಧಿಕಾರಿಗಳು ಮಾಡಿಲ್ಲ. ಆಸ್ಪತ್ರೆಯಲ್ಲಿ ಔಷಧ ರಾಜಿಸ್ಟರ್ ಬರೆದಿಲ್ಲ.
ಸರ್ಕಾರದ ಸಂಬಳ ತೆಗೆದುಕೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಾಹಿಸಬೇಕಾದ ವೈದ್ಯ ಡಾ. ವಾಲಿ ಅವರು ಖಾಸಗಿ ಆಸ್ಪತ್ರೆ ನಡೆಸುತ್ತಿರುವುದು ಸರ್ಕಾರಕ್ಕೆ ಹಾಗೂ ಬಡ ರೋಗಿಗಳಿಗೆ ದ್ರೋಹ ಮಾಡುತ್ತಿರುವುದು ಕಂಡುಬಂದಿದೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗುತ್ತದೆ ಎಂದ ಅವರು, ಈ ವ್ಯವಸ್ಥೆ ಸುಧಾರಣೆ ಮಾಡುವುದು ಹಾಗೂ ಕಾರ್ಯನಿರ್ವಹಿಸದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಡಳಿತಾಧಿಕಾರಿ ಡಾ. ಜಾನ್ ಕಟವಟೆ ಅವರಿಗೆ ಸೂಚಿಸಿದರು.
ಲೋಕಾಯುಕ್ತ ಇದ್ದಿದ್ದರೆ ಅಂದೇ ಸಿದ್ದರಾಮಯ್ಯ ಜೈಲಿಗೆ ಹೋಗಿರುತ್ತಿದ್ದರು: ಕಟೀಲ್
ವೈದ್ಯರು ಸರಿಯಾಗಿ ಕಾರ್ಯನಿರ್ವಾಗಿಸದಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರ ದೂರಗಳ ಆಧಾರದ ಮೇಲೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದೇನೆ. ಜಿಲ್ಲಾ ವೈದ್ಯಾಧಿಕಾರಿಗಳ ಕ್ರಮಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುಲಾಗುವುದು ಹಾಗೂ ತಿಂಗಳಲ್ಲಿ ಒಂದು ಬಾರಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ ಹನಮಂತ ಶಿರಹಟ್ಟಿ, ಸಂತೋಷ ಅಮರಖೇಡ, ಎಮ….ಎಸ್. ತಗ್ಗೆಳ್ಳಿ, ವಾಸಿಮ… ಅಕ್ಕಲಕೋಟ ಇತರರು ಇದ್ದರು.