ಗ್ಯಾರಂಟಿಯಿಂದ ಲೋಕಸಭೆ ಚುನಾವಣೆ ಗೆಲವು ಅಸಾಧ್ಯ : ಸೂಲಿಬೆಲೆ

ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಸಾಧ್ಯ ಎಂದು ನಮೋ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Lok Sabha election victory is impossible For Congress  : Sulibele snr

  ಮಳವಳ್ಳಿ :  ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅಸಾಧ್ಯ ಎಂದು ನಮೋ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಕುಮಾರ ಸಮುದಾಯದಲ್ಲಿ ಯುವ ಬಿಗ್ರೇಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸುಭದ್ರ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಲು ಎಲ್ಲರೂ ಮುಂದಾಗಬೇಕು ಎಂದರು.

ರಾಜ್ಯದ ಮತದಾರರು ಪ್ರಜ್ಞಾವಂತರಾಗಿದ್ದು, ಗ್ಯಾರಂಟಿ ಯೋಜನೆ ನೀಡಿದ ಮಾತ್ರಕ್ಕೆ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ. ದೇಶ ಸೇವೆಗಾಗಿ ಸದಾ ದುಡಿಯುತ್ತಿರುವ ಮೋದಿ ಅವರನ್ನು ಕಳೆದುಕೊಳ್ಳಬಾರದು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಮೋದಿ ಅವರನ್ನು ಬೆಂಬಿಸುವ ಮೂಲಕ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳನ್ನು ರಾಜ್ಯದಿಂದ ಆಯ್ಕೆ ಮಾಡಬೇಕು ಎಂದರು.

ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಯುವಕರು ದೇಶ ಭಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಸುಭದ್ರ ಭಾರತ ನಿರ್ಮಾಣಕ್ಕೆ ಮೋದಿ ಅವರ ಜೊತೆ ಕೈ ಜೋಡಿಸಬೇಕು. 2024ರ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ನಮೋ ಬ್ರಿಗೇಡ್‌ನ ಯಾತ್ರೆ ಹಮ್ಮಿಕೊಂಡಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನು ಪಟ್ಟಣದ ಹೊರವಲಯದ ದಂಡಿನ ಮಾರಮ್ಮ ದೇವಸ್ಥಾನದಿಂದ ಬೈಕ್ ರ್‍ಯಾಲಿ ಮೂಲಕ ಪಟ್ಟಣಕ್ಕೆ ಕರೆ ತರಲಾಯಿತು. ನಂತರ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಅರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಜನರ ಹಿತಾಸಕ್ತಿ ಹತ್ತಿಕ್ಕುತ್ತಿದೆ

ಹಾಸನ(ಅ.01):  ಕಾಂಗ್ರೆಸ್‌ ಸರ್ಕಾರ ಬಂದ ದಿನದಿಂದ ತನ್ನನ್ನು ಪ್ರಶ್ನಿಸುವವರ ಮೇಲೆ ಅನೇಕ ಪ್ರಕರಣಗಳನ್ನು ಹಾಕಲಾಗುತ್ತಿರುವುದನ್ನು ನೋಡಿದರೆ ಇದು ಎಫ್‌.ಐ.ಆರ್‌. ಸರ್ಕಾರ ಎನ್ನುವುದು ಸ್ಪಷ್ಟವಾಗುತ್ತಿದೆ. ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವನ್ನು ಈ ಸರಕಾರ ಮಾಡುತ್ತಿದೆ ಎಂದು ವಾಗ್ಮಿ, ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿ ಬೇಸರ ವ್ಯಕ್ತಪಡಿಸಿದರು.

ನಮೋ ಬ್ರಿಗೇಡ್ ಮೂಲಕ ಸದೃಢ, ಸಮೃದ್ಧ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಎನ್ನುವ ಶೀರ್ಷಿಕೆಯಲ್ಲಿ ಶನಿವಾರ ನಗರಕ್ಕೆ ಬಂದ ಬೈಕ್‌ ರ್‍ಯಾಲಿಯನ್ನು ಕೆಲ ಸಮಯ ಹೇಮಾವತಿ ಪ್ರತಿಮೆ ಮುಂದೆ ನಿಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಮುಂದಿನ ಗುರಿ ಎಂದರೇ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ದೃಷ್ಠಿಕೋನವನ್ನು ಇಟ್ಟುಕೊಂಡು ನಾವುಗಳೆಲ್ಲಾ ರಾಜ್ಯಾದ್ಯಂತ ಪ್ರವಾಸವನ್ನು ಮಾಡುತ್ತಿದ್ದೇವೆ. ಇದರ ಉದ್ದೇಶ ಎನೆಂದರೇ ಜನಗಣಮನ ಬೆಸೆಯೋಣ ಎನ್ನುವ ಟೈಟಲ್‌ ನಲ್ಲಿ ಎಲ್ಲಾ ಭಾಗದ ಭಿನ್ನಭಿನ್ನ ಜನರನ್ನು ಒಂದು ಕಡೆ ಸೇರಿಸುವಂತಹ ಪ್ರಯತ್ನ ಮಾಡುತ್ತಿದ್ದೇವೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಕಾಣಬೇಕು ಎನ್ನುವ ಧ್ವನಿ ಕೇಳಿ ಬಂದಿದೆ ಎಂದರು.

ನೀರು ಬಿಡುವುದಿಲ್ಲ ಎಂದು ಹೇಳುವ ಧೈರ್ಯ ರಾಜ್ಯ ಸರ್ಕಾರಕ್ಕೆ ಇಲ್ಲ: ಸೂಲಿಬೆಲೆ

ಕಾವೇರಿ ವಿಚಾರಕ್ಕೆ ಬಂದರೇ ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದು, ಒಂದು ಇಡಿ ಅಲಯನ್ಸ್‌ ಅನ್ನು ಉಳಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಶಾಂತಿಯುತವಾಗಿ ಪ್ರಯತ್ನ ಪಡುತ್ತಿದ್ದಾರೆ. ಕನ್ನಡ ಜನತೆಗೆ ಗೊತ್ತಾಗದಂತೆ ಸುಪ್ರಿಂ ಕೋರ್ಟ್ ಹೇಳುವ ಮೊದಲೇ ನೀರನ್ನು ಬಿಡುವ ಪ್ರಯತ್ನ ಮಾಡಿರುವುದು ನಿಜಕ್ಕೂ ಅಕ್ಷ್ಯಮವಾದ ಅಪರಾಧ. ಮೊದಲೆ ಎಲ್ಲಾ ಪಕ್ಷದ ವಿಶ್ವಾಸಕ್ಕೆ ತೆಗೆದುಕೊಂಡು ನೀರನ್ನು ಬಿಡಬೇಕೊ ಬೇಡವೋ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ಅಲೆಯನ್ಸ್‌ ಉಳಿಸಿಕೊಳ್ಳಲು ಹೋಗಿ ಕನ್ನಡ ನಾಡಿನ ಜನರಿಗೆ ಮಾಡಿರುವ ಅನ್ಯಾಯ. ಕನ್ನಡಿಗರೂ ಅವರನ್ನು ಕ್ಷಮಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೂಗಳು ಜಾತ್ಯತೀತರಲ್ಲ ಎಂದು ಯಾರಾದರೂ ಹೇಳಿದರೇ ಅದು ಮೂರ್ಖತನವೇ! ಹಾಗೆ ನೋಡಿದರೇ ಅದು ಜಾತ್ಯತೀತರಾಗಿರುವುದು ಹಿಂದುಗಳೆ. ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಮೊದಲನೆ ಭಾಷಣದಲ್ಲಿ ಹೇಳಿರುವುದು ಹಿಂದೂ ಯಾವತ್ತು ಸಹಿಷ್ಣು ಆಗಲ್ಲ ಎಂದರೇ ಸಹಿಸಿಕೊಳ್ಳುವುದಿಲ್ಲ ಆದರೇ ಎಲ್ಲರನ್ನು ಒಪ್ಪಿಕೊಳ್ಳುತ್ತಾರೆ. ಇನ್ನು ಮೈತ್ರಿಗೆ ಸಂಬಂಧಪಟ್ಟಂತೆ ಹೇಳುವುದಾದರೇ ಒಟ್ಟಾರೆ ಎರಡು ಪಾರ್ಟಿಗಳ ಕ್ಯಾಲಿಕಿಕೇಷನ್‌ ಇರಬಹುದು, ಜೆಡಿಎಸ್ ಗೆ ಅತ್ಯಂತ ಕಡಿಮೆ ಮತಗಳು ಪರ್ಸಂಟೇಜ್‌ ಈ ಸಲ ಬಂದಿದೆ. ಈ ದೃಷ್ಠಿಯಿಂದ ಜೆಡಿಎಸ್‌ ಮತದಾರರು ಮತ್ತು ಬಿಜೆಪಿಯ ಮತದಾರರು ಉಳಿದುಕೊಂಡಿದ್ದಾರೆ ಅಂತಹವರು ಸೇರಿಕೊಂಡರೇ ಅರ್ಧ ಭಾಗದಷ್ಟು ಪರ್ಸಂಟೇಜ್‌ ಅವರಿಗೆ ಸಿಗುತ್ತದೆ. ಸಹಜವಾಗಿ ಕರ್ನಾಟಕದ ಅಷ್ಟು ಸೀಟುಗಳನ್ನು ಗೆಲ್ಲಲು ಸಾಧ್ಯವಾಗಬಹುದು ಎನ್ನುವ ಅವರ ಲೆಕ್ಕಚಾರ ಇರಬಹುದು ಎಂದು ಅಭಿಪ್ರಾಯಪಟ್ಟರು.

ನಾನು ಮಾಧ್ಯಮದಲ್ಲಿ ನೋಡಿರುವಂತೆ ಒಬ್ಬ ತರುಣನ ಬಂಧನ, ಸಾಹಿತಿಗಳ ಬಂಧನ, ಬಂಜಗೆರೆ ಜಯಪ್ರಕಾಶ್‌ ಅವರ ಹೆಸರನ್ನು ಕೂಡ ನೋಡಿದೆ. ಎಲ್ಲೊ ಒಂದು ಕಡೆ ವಿಚಾರವನ್ನು ತಿರುಗಿಸುವುದಕ್ಕೆ, ಮತ್ತೊಂದು ಕಡೆ ಈ ವಿಚಾರವನ್ನು ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. ಕಾಂಗ್ರೆಸ್‌ ಸರ್ಕಾರ ಬಂದ ದಿನದಿಂದ ಈ ತರಹದ ಪ್ರಕರಣಗಳು ಒಂದೆರಡಲ್ಲ ಹೆಚ್ಚು ಇದೆ ಅನಿಸುತ್ತದೆ. ಅವರು ಅನೇಕ ಎಫ್‌.ಐ.ಆರ್‌. ಹಾಕುವುದನ್ನು ನೋಡಿದರೇ ಇದು ಕಾಂಗ್ರೆಸ್‌ ಸರಕಾರವೊ ಎಫ್.ಐ.ಆರ್. ಸರಕಾರವೊ ಅಂತ ಕೇಳಬೇಕು ಎಂದು ಹೇಳಿದರು.

Latest Videos
Follow Us:
Download App:
  • android
  • ios