* ಕೋವಿಡ್‌ನಿಂದ ಮೃತಪಟ್ಟ ಮಹಾಂತೇಶ್‌ ಬೆಳದಡಿ * ಅಂತಿಮ ಸಂಸ್ಕಾರದ ವೇಳೆ ಕೋವಿಡ್‌ ನಿಯಮ ಉಲ್ಲಂಘಣೆ* ಗದಗ ನಗರದಲ್ಲಿ ನಡೆದ ಘಟನೆ

ಗದಗ(ಜೂ.06): ಕೊರೋನಾದಿಂದ ಮೃತಪಟ್ಟ ಕಾಂಗ್ರೆಸ್‌ ಮುಖಂಡನೋರ್ವನ ಅಂತಿಮ ಸಂಸ್ಕಾರದ ವೇಳೆ ಕೋವಿಡ್‌ ನಿಯಮ ಉಲ್ಲಂಘಿಸಿದ ಘಟನೆ ಶನಿವಾರ ನಡೆದಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್‌ ಜಿಲ್ಲಾ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ ಮಹಾಂತೇಶ್‌ ಬೆಳದಡಿ ಅಸ್ತಮಾ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದರು. 

ವ್ಯಾಕ್ಸಿನ್‌ ಹಾಕಿಸಿಕೊಳ್ಳದ ಕುಟುಂಬಕ್ಕಿಲ್ಲ ರೇಷನ್‌

ಶನಿವಾರ ನಗರದ ಗಂಗಾಪುರ ಪೇಟೆಯ ನಿವಾಸಕ್ಕೆ ಮೃತ ದೇಹ ಕರೆತಂದಿದ್ದ ಕುಟುಂಬಸ್ಥರು, ಅಲ್ಲಿಂದ ಹೊಂಬಳನಾಕಾ ಬಳಿಯ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಈ ವೇಳೆ ಲಾಕ್‌ಡೌನ್‌ ನಿಯಮ ಮೀರಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು ಎನ್ನಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ#ANCares #IndiaFightsCorona