Asianet Suvarna News Asianet Suvarna News

51 ಕೋಟಿ ತೆರಿಗೆ ಬಾಕಿ: ಬೆಂಗ್ಳೂರಿನ ಮಂತ್ರಿ ಮಾಲ್‌ಗೆ ಬೀಗ..!

ಮಂತ್ರಿ ಮಾಲ್‌ ಮಾಲೀಕರಿಗೆ ಮಾತ್ರವಲ್ಲ. ಮಾಲ್‌ ಒಳಗಡೆ ಇರುವ ಬಾಡಿಗೆ ಅಥವಾ ಸ್ವಾಧೀನದಲ್ಲಿರುವ ಸುಮಾರು 200ಕ್ಕೂ ಅಧಿಕ ಮಳಿಗೆದಾರರಿಗೂ ಬಿಬಿಎಂಪಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಬುಧವಾರ ಎಲ್ಲ ಮಳಿಗೆಗಳನ್ನು ಬಂದ್‌ ಮಾಡಿಸಿ ಮಾಲ್‌ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದೆ.

Lock to Mantri Mall Due to Tax Pending in Bengaluru grg
Author
First Published Dec 28, 2023, 6:19 AM IST

ಬೆಂಗಳೂರು(ಡಿ.28):  ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ನಗರದ ಸಂಪಿಗೆ ರಸ್ತೆಯಲ್ಲಿರುವ ಪ್ರತಿಷ್ಠಿತ ಮಂತ್ರಿ ಮಾಲ್‌ ಗೆ ಬುಧವಾರ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ.

ಮಂತ್ರಿ ಮಾಲ್‌ ಮಾಲೀಕರು ಕಳೆದ ಐದು ವರ್ಷದಿಂದ ಸುಮಾರು ₹51 ಕೋಟಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ. ಆಸ್ತಿ ತೆರಿಗೆ ಪಾವತಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಹಲವು ಬಾರಿ ನೋಟಿಸ್‌ ನೀಡಿದ್ದಾರೆ. ಆದರೆ ನೋಟಿಸ್‌ಗೆ ಮಂತ್ರಿ ಮಾಲ್‌ ಮಾಲೀಕರು ಯಾವುದೇ ಉತ್ತರ ನೀಡಿಲ್ಲ ಹಾಗೂ ಬಾಕಿ ಇರುವ ಆಸ್ತಿ ತೆರಿಗೆಯನ್ನೂ ಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಬಿಬಿಎಂಪಿಯ ಪಶ್ಚಿಮ ವಲಯದ ಕಂದಾಯ ವಿಭಾಗದ ಅಧಿಕಾರಿಗಳು ಇಡೀ ಮಾಲ್‌ಗೆ ಬೀಗ ಹಾಕಿ ಸೀಜ್‌ ಮಾಡಿದ್ದಾರೆ.

Bengaluru: ಮಂತ್ರಿ ಮಾಲ್‌ ಆಸ್ತಿ ಜಪ್ತಿಗೆ ಕೋರ್ಟ್ ತಡೆಯಾಜ್ಞೆ: ವಶಕ್ಕೆ ಪಡೆದಿದ್ದ ಚರಾಸ್ತಿ ವಾಪಸ್

ಎಲ್ಲ ಮಳಿಗೆಗಾರರಿಗೂ ನೋಟಿಸ್‌:

ಮಂತ್ರಿ ಮಾಲ್‌ ಮಾಲೀಕರಿಗೆ ಮಾತ್ರವಲ್ಲ. ಮಾಲ್‌ ಒಳಗಡೆ ಇರುವ ಬಾಡಿಗೆ ಅಥವಾ ಸ್ವಾಧೀನದಲ್ಲಿರುವ ಸುಮಾರು 200ಕ್ಕೂ ಅಧಿಕ ಮಳಿಗೆದಾರರಿಗೂ ಬಿಬಿಎಂಪಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಬುಧವಾರ ಎಲ್ಲ ಮಳಿಗೆಗಳನ್ನು ಬಂದ್‌ ಮಾಡಿಸಿ ಮಾಲ್‌ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದೆ.

ಬುಧವಾರ ಬಿಬಿಎಂಪಿ ಅಧಿಕಾರಿಗಳು ಮಾಲ್‌ ಸೀಜ್‌ ಮಾಡಲು ತೆರಳಿದ ಸಂದರ್ಭದಲ್ಲಿ ಮಾಲ್‌ನಲ್ಲಿ ಇದ್ದ ಎಲ್ಲ ಸಾರ್ವಜನಿಕರನ್ನು ಬಿಬಿಎಂಪಿ ಅಧಿಕಾರಿ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹಾಗೂ ಮಾರ್ಷಲ್‌ಗಳು ಹೊರಗೆ ಕಳುಹಿಸಿ ಬೀಗ ಹಾಕಿದರು.

ಟ್ಯಾಕ್ಸ್ ಕಟ್ಟಿಲ್ಲ ಮಂತ್ರಿಮಾಲ್, ಡೆಡ್‌ಲೈನ್‌ಗೂ ಡೋಂಟ್‌ಕೇರ್, ಬಿಬಿಎಂಪಿ ಮಾತ್ರ ಸೈಲೆಂಟ್!

ಬಾಕಿ ಪಾವತಿ ಸಂಬಂಧ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿಸುವುದು ಸರಿಯಲ್ಲ. ಬಿಬಿಎಂಪಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಏಕಾಏಕಿ ಬೀಗ ಹಾಕಿದ್ದಾರೆ ಎಂದು ಮಂತ್ರಿ ಮಾಲ್‌ ಮಾಲೀಕ ತಿಳಿಸಿದ್ದಾರೆ. 

500ಕ್ಕೂ ಅಧಿಕ ಆಸ್ತಿ ಸೀಜ್‌

ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರೆಸಿದ್ದು, ನೋಟಿಸ್‌ ಸಹ ನೀಡಿದ್ದಾರೆ. ಆದರೂ ಆಸ್ತಿ ತೆರಿಗೆ ಪಾವತಿಸದ ಕಟ್ಟಡಗಳನ್ನು ಸೀಜ್‌ ಮಾಡುವ ಕಾರ್ಯವನ್ನು ನಡೆಸುತ್ತಿದ್ದಾರೆ, ಬುಧವಾರ ನಗರದ ವಿವಿಧ ಕಡೆ ಸೀಜ್‌ ಮಾಡುವ ಕಾರ್ಯ ನಡೆಸಿದೆ. ಈವರೆಗೆ ನಗರದಲ್ಲಿ ಸುಮಾರು 500ಕ್ಕೂ ಅಧಿಕ ಆಸ್ತಿಗಳನ್ನು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಸೀಜ್‌ ಮಾಡಿದ್ದಾರೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios