ಬೀದರ್, (ಏ.19): ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ಸಂಚಾರಿ ಮಾಂಸ ಮಾರಾಟಕ್ಕೆ ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಅವರು ಚಾಲನೆ ನೀಡಿದರು.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಬೀದರ್ ಇವರಿಂದ ಸಂಚಾರಿ ಮಾಂಸ ಮಾರಾಟ ಮಳಿಗೆ ಯೋಜನೆಯಡಿ ಕೊಡಮಾಡಲಾದ ಸುಸಜ್ಜಿತ ವಾಹನದಲ್ಲಿ ಕುರಿ ಮತ್ತು ಮೇಕೆ ಮೌಂಸ ಮಾರಾಟದ ವಾಹನಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ ಗಂಗವಾರ ಅವರು ಚಾಲನೆ ನೀಡಿದರು.

ಕೊರೋನಾ ಲಾಕ್‌ಡೌನ್: ಮಾಂಸಪ್ರಿಯರಿಗೆ ಗುಡ್‌ನ್ಯೂಸ್

ಕೋವಿಡ್-19 ಲಾಕ್‌ಡೌನ್‌ನ ಈ ಅವಧಿಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಕುರಿ ಮತ್ತು ಮೇಕೆ ಮೌಂಸವನ್ನು ಯೋಗ್ಯ ಬೆಲೆಯಲ್ಲಿ ಒದಗಿಸಲು ಈ ಕ್ರಮದಿಂದಾಗಿ ಅನುಕೂಲವಾಗಲಿದೆ ಎಂದು ಇದೆ ವೇಳೆ ಸಿಇಓ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಗಮ ನಿಯಮಿತದ ಸಹಾಯಕ ನಿರ್ದೇಶಕರಾದ ಡಾ.ಸೋಮಶೇಖರ ಅವರು ಇದೆ ವೇಳೆ ಉಪಸ್ಥಿತರಿದ್ದರು.

ಕುರಿ ಮತ್ತು ಮೇಕೆ ಮೌಂಸವನ್ನು ಯೋಗ್ಯ ಬೆಲೆಗೆ ಖರೀಸುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹೆಚ್ಚಿನ ವಿವರಗಳಿಗಾಗಿ ಮಾರಾಟಗಾರರಾದ ಮಹೇಶ ತಂದೆ ರಮೇಶ ಅವರ ಮೊಬೈಲ್ ಸಂಖ್ಯೆ: 9035697922 ಸಂಪರ್ಕಿಸಬಹುದಾಗಿದೆ ಎಂದು ಅಧಿಕಾರಿ ಡಾ.ಸೋಮಶೇಖರ ಅವರು ಇದೆ ವೇಳೆ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.