ಚಾರ್ಮಾಡಿ ಘಾಟ್ ನಲ್ಲಿರುವ ದೇವರಿಗೆ ನಿತ್ಯ ಶಾಸ್ತ್ರೋಕ್ತ ಪೂಜೆಗೆ ಸ್ಥಳೀಯರ ಒತ್ತಾಯ
ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಸಂಪರ್ಕ ಸೇತುವೆ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಇರುವ ಅಣ್ಣಪ್ಪ ಸ್ವಾಮಿ ದೇಗುಲದಲ್ಲಿ ನಿತ್ಯ ಶಾಸ್ತ್ರೋಕ್ತ ಪೂಜೆ ನಡೆಯಲಿ ಎಂದು ಸ್ಥಳೀಯರ ಆಗ್ರಹ ಮಾಡಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.14): ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಸಂಪರ್ಕ ಸೇತುವೆ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಇರುವ ಅಣ್ಣಪ್ಪ ಸ್ವಾಮಿ ದೇಗುಲದಲ್ಲಿ ನಿತ್ಯ ಶಾಸ್ತ್ರೋಕ್ತ ಪೂಜೆ ನಡೆಯಲಿ ಎಂದು ಸ್ಥಳೀಯರ ಆಗ್ರಹ ಮಾಡಿದ್ದಾರೆ. ಐತಿಹಾಸಿಕ ಹಾಗೂ ಇತಿಹಾಸ ಪ್ರಸಿದ್ಧ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ನಿತ್ಯ ವೇಧ-ಮಂತ್ರಗಳಿಂದ ಪೂಜೆ ಆಗಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಮೂಲಭೂತ ಸೌಕರ್ಯಗಳ ಜೊತೆಗೆ ನಿತ್ಯ ಪೂಜೆಗೆ ಆಗ್ರಹ:
ಸರ್ಕಾರ, ಮುಜರಾಯಿ ತಹಶೀಲ್ದಾರ್ ಹಾಗೂ ಎಸಿ ಅವರಿಗೆ ಆಗ್ರಹಿಸಿರೋ ಸ್ಥಳಿಯರು ಚಾರ್ಮಾಡಿಯ ಅಣ್ಣಪ್ಪ ಸ್ವಾಮಿ ದೇಗುದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಆದರೆ, ವೇಧ-ಮಂತ್ರಗಳಿಂದ ಪೂಜೆ ನಡೆಯುತ್ತಿಲ್ಲ. ಇನ್ಮು ಮುಂದೆ ಸರ್ಕಾರ ಹಾಗೂ ಅಧಿಕಾರಿಗಳು ವೇಧ ಹಾಗೂ ಮಂತ್ರಗಳಿಂದ ಪೂಜೆಯಾಗುವಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಧರ್ಮಸ್ಥಳ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳಿವು..!
ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲ ಅಂದ್ರೆ ಈ ಭಾಗದಲ್ಲಿ ಓಡಾಡುವ ಪ್ರವಾಸಿಗರಿಗೆ ಭಕ್ತಿ-ಭಯ ಹಾಗೂ ಗೌರವ. ಈ ಭಾಗದಲ್ಲಿ ಸಂಚರಿಸುವ ಅನ್ಯಕೋಮಿನ ವಾಹನಹಳನ್ನ ಹೊರತು ಪಡಿಸಿ ಪ್ರತಿಯೊಂದು ವಾಹನಗಳು ನಿತ್ಯ ಇಲ್ಲಿ ಸಂಚರಿಸುವಾಗ ಇಲ್ಲಿ ನಿಲ್ಲಸಿ, ಪೂಜೆ ಮಾಡಿಸಿ, ಕಾಣಿಕೆ ಹಾಕಿಯೇ ಮುಂದೆ ಹೋಗೋದು. ಇಲ್ಲಿ ಕೈಮುಗಿದು, ಪೂಜೆ ಮಾಡಿಸಿಕೊಂಡು ಮುಂದೆ ಹೋದರೆ ಚಾರ್ಮಾಡಿ ಘಾಟಿಯಂತಹಾ ಅಪಾಯಕಾರಿ ಹಾಗೂ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಯಾವ ಅನಾಹುತವೂ ಸಂಭವಿಸೋದಿಲ್ಲ ಅನ್ನೋದು ಈ ಭಾಗದ ಪ್ರಯಾಣಿಕರ ನಂಬಿಕೆ. ಹಾಗಾಗಿ, ಈ ಭಾಗದಲ್ಲಿ ಸಂಚಾರ ಮಾಡುವ ಪ್ರತಿಯೊಂದು ವಾಹನಗಳು ಇಲ್ಲಿ ನಿಲ್ಲಿಸಿ ಪೂಜೆ ಮಾಡಿಸಿ, ಕೈ ಮುಗಿದು, ಕಾಣಿಕೆ ಹಾಕಿಯೇ ಮುಂದೆ ಹೋಗೋದು. ನಿತ್ಯ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಬಸ್ಗಳು ಕೂಡ.
ಚಾರ್ಮಾಡಿ ಘಾಟ್ ಭಯಾನಕತೆ ಸ್ವರೂಪ, ಸುಂದರ ಬೆಟ್ಟದ ಪ್ರಪಾತ ಕೊಲೆಯಾದ ಶವಗಳಿಗೆ ಆಶ್ರಯವೇ!
ಆದರೆ, ಮುಜರಾಯಿ ಇಲಾಖೆ ಒಳಪಡುವ ಈ ದೇಗುಲಕ್ಕೆ ನಿತ್ಯ ಸಾವಿರಾರು ರೂಪಾಯಿ ಆದಾಯವಿದೆ. ಆದರೆ, ಇಲ್ಲಿ ನಿತ್ಯ ಪೂಜೆ ನಡೆದರೂ ಕೂಡ ಮಾಮೂಲಿ ಪೂಜೆಯಂತೆ ನಡೆಯುತ್ತಿದೆ. ಇದೊಂದು ಐತಿಹಾಸಿಕ ಹಾಗೂ ಇತಿಹಾಸ ಪ್ರಸಿದ್ಧ ದೇವಾಲಯ. ಈ ಅಣ್ಣಪ್ಪಸ್ವಾಮಿಗೂ ಧರ್ಮಸ್ಥಳದ ಮಂಜುನಾಥ ಸ್ವಾಮಿಗೂ ಸಂಬಂಧವಿದೆ ಎಂಬ ಮಾತುಗಳು ಇವೆ. ಈ ಅಣ್ಣಪ್ಪ ಸ್ವಾಮಿ ಅತ್ಯಂತ ಶಕ್ತಿಶಾಲಿ ದೈವ ಕೂಡ. ಹಾಗಾಗಿ, ಇಲ್ಲಿಗೆ ನಿತ್ಯ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ವೇಧಮಂತ್ರ ಘೋಷಗಳೊಂದಿಗೆ ನಿತ್ಯ ಪೂಜೆ ನಡೆಯಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ