ಶಿವಮೊಗ್ಗ(ಆ.04): ನಗರದಲ್ಲಿ ಪುಡಿರೌಡಿಗಳು ಮತ್ತೆ ತಲೆ ಎತ್ತಿದಂತೆ ಕಾಣುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ರೀತಿಯಲ್ಲಿಯೇ ಶಿವಮೊಗ್ಗದಲ್ಲಿಯೂ ಪುಡಿ ರೌಡಿಗಳು ನಡು ರಸ್ತೆಯಲ್ಲಿ ಮಧ್ಯರಾತ್ರಿಯಲ್ಲಿ ಲಾಂಗ್‌ಗಳನ್ನು ಝಳಪಿಸುತ್ತಾ ಡಿಫರೆಂಟ್‌ ಆಗಿ ಬರ್ತ್‌ಡೇ ಆಚರಿಸಿದ ಘಟನೆ ನಡೆದಿದೆ.

ಜು. 21ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರೊಬ್ಬರು ಎಸ್‌ಪಿ ಅವರಿಗೆ ಮಾಹಿತಿ ನೀಡಿದ್ದು, ಇದು ಗೊತ್ತಾಗುತ್ತಿದ್ದಂತೆ ಪೊಲೀಸರು ಪುಡಿ ರೌಡಿಗಳ ಮೇಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಶುಕ್ರವಾರ 9 ಪುಡಿ ರೌಡಿಗಳನ್ನು ಬಂಧಿಸಿದ್ದಾರೆ.

ಎಣ್ಣೆ ಸಾಂಗ್‌ ಹಾಕಿ ಡ್ಯಾನ್ಸ್:

ಮಧ್ಯರಾತ್ರಿಯಲ್ಲಿ ನಶೆ ಏರಿಸಿಕೊಂಡು ನೃತ್ಯ ಮಾಡುತ್ತಾ, ಕೇಕ್‌ ಕತ್ತರಿಸಿ ಮುಖಕ್ಕೆ ಬಳಿದುಕೊಂಡು ಕುಣಿದಾಡಿದ್ದಾರೆ. ಜೊತೆಗೆ ಓರ್ವ ಕೈಯಲ್ಲಿ ಲಾಂಗ್‌ ಕಾಣುತ್ತಿದ್ದು, ಇದನ್ನು ಝಳಪಿಸುತ್ತಿದ್ದಾನೆ. ಇದರ ಜೊತೆಗೆ ಡಿಜೆ ಸೌಂಡಿನ ಎಫೆಕ್ಟ್ ಬೇರೆ. ಎಣ್ಣೆ ಸಾಂಗ್‌ ಹಾಕಿಕೊಂಡು ಜೋರಾಗಿ ಕೇಕೆ ಹಾಕಿ ಸಿಳ್ಳೆ ಹೊಡೆಯುತ್ತಾ ಪುಡಿ ರೌಡಿಗಳು ಕುಣಿದಿದ್ದಾರೆ.

ಸ್ಮಶಾನದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!

ಇವರ ಮಧ್ಯರಾತ್ರಿಯ ಬರ್ತ್‌ಡೇ ಶೋ ಗೆ ಸಭ್ಯ ನಾಗರಿಕರು ಹೌಹಾರಿ ಹೋಗಿದ್ದಾರೆ. ಇದು ನಡೆದಿದ್ದು, ನಗರದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್‌ ಸಮೀಪದ ಧರ್ಮರಾಯ ಕೇರಿ ರಸ್ತೆಯಲ್ಲಿ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಪುಡಿ ರೌಡಿಯೋರ್ವನ ಬರ್ತ್ಡೇ ಆಚರಣೆ ಎನ್ನಲಾಗಿದ್ದು, ಈ ಪಾರ್ಟಿಯಲ್ಲಿ ಶೋ ಕೊಟ್ಟ ಉಳಿದ ಆರೋಪಿಗಳ ವಿರುದ್ಧ ಕೋಟೆ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇವರೆಲ್ಲರನ್ನೂ ಜೈಲಿಗೆ ಕಳುಹಿಸಲಾಗಿದೆ.