ವಿಜಯಪುರ[ಜು.21]: ವಿಜಯಪುರದ ಯುವಕನೊಬ್ಬ ಬಾಗಲಕೋಟೆಯ ಸ್ಮಶಾನದಲ್ಲಿ ಕೇಕ್ ಕಟ್ ಮಾಡುವ ಮೂಲಕ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದ ಯುವಕ ಸುಖದೇವ ಕಟ್ಟಿಮನೀ(36), ಬಾಗಲಕೋಟೆ ಜಿಲ್ಲೆಯ ಬೀಳಗಿ ಸ್ಮಶಾನದಲ್ಲಿ ಸ್ನೇಹಿತರೊಂದಿಗೆ ಸೇರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾನೆ. ರುದ್ರಭೂಮಿಯಲ್ಲಿಯೇ ಕೇಕ್ ಕತ್ತರಿಸಿದ ಸುಖದೇವ ಕಟ್ಟಿಮನಿಗೆ ಸ್ನೇಹಿತರಯು ಸಾಥ್ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಗುತ್ತಿಗೆ ಶಿಕ್ಷಕನಾಗಿರುವ ದಲಿತ ಯುವಕ ಸುಖದೇವ ಕಟ್ಟಿಮನಿ ಡಿಎಸ್‌ಎಸ್‌ ಮುಖಂಡ ಕೂಡಾ ಹೌದು. ಈತ ತನ್ನ ಸಮಾಜಮುಖಿ ಕಾರ್ಯಕ್ರಮದಿಂದ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾನೆ