Tumakur : ಸ್ಥಳೀಯ ಆಕಾಂಕ್ಷಿಗಳಿಗೆ BJPಯಲ್ಲಿ ಟಿಕೆಟ್‌

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ತಾಲೂಕಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟಿತರಾಗಿ ಪಕ್ಷ ಸಡೃಢವಾಗಿ ಕಟ್ಟುವಂತೆ ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಕಾರ್ಯಕರ್ತರಿಗೆ ಕರೆ ನೀಡಿದರು.

Local Leaders Likely To get BJP Ticket in Tumakuru snr

  ಪಾವಗಡ (ನ.07): ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ತಾಲೂಕಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟಿತರಾಗಿ ಪಕ್ಷ ಸಡೃಢವಾಗಿ ಕಟ್ಟುವಂತೆ ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ಪಾವಗಡಕ್ಕೆ ಆಗಮಿಸಿದ್ದ ಜಿಲ್ಲಾಧ್ಯಕ್ಷ ಮಂಜುನಾಥ್‌ ನಗರದ ಬಿಜೆಪಿ (BJP)   ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಮಧುಗಿರಿಗೆ ಆಗಮಿಸುವ ವಿಚಾರವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪಾವಗಡ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ವರ್ಧಿಸುವ ಮಾಹಿತಿ ಹರಿದಾಡುತ್ತಿದ್ದು, ಈ ಬಗ್ಗೆ ಪಕ್ಷ ನಿರ್ಣಯದಂತೆ ಮುನ್ನಡೆಯಲಿದೆ. ಚುನಾವಣೆಯಲ್ಲಿ (Election)  ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡುವ ವಿಚಾರ ಪಕ್ಷದಲ್ಲಿ ಚರ್ಚೆಯಲ್ಲಿದ್ದು, ಸ್ಥಳೀಯ ಆಕಾಂಕ್ಷಿಗಳಿಗೆ ಪಕ್ಷದಲ್ಲಿ ಟಿಕೆಟ್‌ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಬೆಂಗಳೂರು, ತುಮಕೂರು ಇತರೆ ನಗರ ಪ್ರದೇಶಗಳಲಿದ್ದು ಓಡಾಡಿದರೆ ಸಾಲದು ಅಭ್ಯರ್ಥಿ ಆಕಾಂಕ್ಷಿಗಳು ಸ್ಥಳೀಯವಾಗಿದ್ದು ಜನಪರ ಸಮಸ್ಯೆಯಲ್ಲಿ ಸ್ಪಂದಿಸಿ ಕೆಲಸ ಮಾಡುವಂತೆ ಸೂಚಿಸಿದ ಅವರು, ಹಿರಿಯ ಮುಖಂಡರು ಮತ್ತು ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ. ಹೀಗಾಗಿ ಜನಪರ ಸೇವೆ ಹಾಗೂ ಪಕ್ಷ ಸಂಘಟನೆಯತ್ತ ಹೆಚ್ಚು ಆಸಕ್ತಿವಹಿಸುವಂತೆ ಕರೆ ನೀಡಿದರು.

ತಾಲೂಕು ಬಿಜೆಪಿ ವಕ್ತಾರ ಕಡಪಲಕರೆ ನವೀನ್‌ ಮಾತನಾಡಿ, ಈಗಿನ ಪರಿಸ್ಥಿತಿ ಜನಪರ ಸೇವೆ ಮತ್ತು ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಇಲ್ಲಿನ ವಿಧಾನ ಸಭೆ ಚುನಾವಣೆಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸ್ಪರ್ಧಿಸಿದರೆ, ಗೆಲುವು ಸುಲಭವಾಗಲಿದೆ ಹೀಗಾಗಿ ಕಾರ್ಯಕರ್ತರಿಂದ ಒತ್ತಡವೇರಿರುವುದಾಗಿ ತಿಳಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ರವಿಶಂಕರನಾಯಕ್‌, ಹಿರಿಯ ಮುಖಂಡರಾದ ಡಾ.ಜಿ.ವೆಂಕಟರಾಮಯ್ಯ ಪಕ್ಷ ಸಂಘಟನೆ ಕುರಿತು ಅನೇಕ ಸಲಹೆ ಸೂಚನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಪಾವಗಡ ರವಿ, ವಿಧಾನಸಭೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಕೃಷ್ಣನಾಯಕ್‌, ಶಿವಕುಮಾರ್‌ಸಾಕೇಲ್‌, ಕೊತ್ತೂರು ಎಸ್‌.ಹನುಮಂತರಾಯಪ್ಪ, ಮುಖಂಡರಾದ ಪಾಲನಾಯಕ್‌, ಜಿಲ್ಲಾ ಬಿಜೆಪಿ ಎಸ್‌ಸಿ ಘಟಕದ ಉಪಾಧ್ಯಕ್ಷ ಕಡಮಲಕುಂಟೆ ರಾಮಾಂಜಿನಪ್ಪ, ತಿಪ್ಪೇಸ್ವಾಮಿ, ಶಿವಲಿಂಗಪ್ಪ ಹಾಗೂ ಇತರರಿದ್ದರು.

ಗುಜರಾತ್ ಚುನಾವಣೆ ಭವಿಷ್ಯ

ತೆಲಂಗಾಣ(ಅ.31):  ಗುಜರಾತ್ ಚುನಾವಣೆಗೆ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಬಿಜೆಪಿ ತನ್ನ ಭದ್ರಕೋಟೆ ಬಲಪಡಿಸಿಕೊಳ್ಳಲು ಮುಂದಾಗಿದೆ. ಆಮ್ ಆದ್ಮಿ ಪಾರ್ಟಿ ಹೊಸ ಇತಿಹಾಸ ರಚಿಸಲು ಗುಜರಾತ್‌ನಲ್ಲಿ ಠಿಕಾಣಿ ಹೂಡಿದೆ. ಇತ್ತ ಕಾಂಗ್ರೆಸ್ ಗುಜರಾತ್ ಕಡೆ ಮುಖಮಾಡಿದ್ದು ಕಡಿಮೆ. ಆದರೆ ರಾಹುಲ್ ಗಾಂಧಿ ಗುಜರಾತ್ ಚುನಾವಣಾ ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣಗಳನ್ನು ನೀಡಿದ್ದಾರೆ. ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಆಮ್ ಆದ್ಮಿ ಪಾರ್ಟಿ ಅಬ್ಬರ ಏನಿದ್ದರೂ ಕೇವಲ ಜಾಹೀರಾತಿನಲ್ಲಿ ಮಾತ್ರ ಎಂದಿದ್ದಾರೆ. ಇತ್ತ ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್‌ಗೆ ಆಡಳಿತ ವಿರೋಧಿ ಅಲೆ ಇರುವುದರಿಂದ ಈ ಬಾರಿ ಕಾಂಗ್ರೆಸ್ ಸುಲಭವಾಗಿ ಗೆಲುವು ದಾಖಲಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ  ರಾಹುಲ್ ಗಾಂಧಿ ಈ ಭವಿಷ್ಯ ನುಡಿದಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿದ ಪಕ್ಷವಾಗಿದೆ.  ಗುಜರಾತ್‌ನಲ್ಲಿ ಈಗಾಲೇ ಕಾಂಗ್ರೆಸ್ ಬಲಿಷ್ಠವಾಗಿದೆ. ಆಮ್ ಆದ್ಮಿ ಪಾರ್ಟಿಯ ಎಲ್ಲಾ ಅಬ್ಬರ, ಘೋಷಣೆಗಳು ಕೇವಲ ಜಾಹೀರಾತಿಗೆ ಸೀಮಿತವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್‌ ಗಾಂಧಿ ಕಾಲಿಟ್ಟ ಕಡೆಯಲ್ಲ ಕಾಂಗ್ರೆಸ್‌ಗೆ ಸೋಲು: ನಳಿನ್‌ ಕುಮಾರ್‌ ಕಟೀಲ್‌

ಆಮ್ ಆದ್ಮಿ ಪಾರ್ಟಿಗೆ ಗುಜರಾತ್‌ನಲ್ಲಿ ಯಾವುದೇ ಬೆಂಬಲ ಇಲ್ಲ. ಆದರೆ ಜಾಹೀರಾತಿನಲ್ಲಿ ಅರವಿಂದ್ ಕೇಜ್ರಿವಾಲ್ ಅಬ್ಬರಿಸುತ್ತಿದ್ದಾರೆ. ಕೇವಲ ಗಾಳಿಯಲ್ಲಿ ಮಾತ್ರ ಆಪ್‌ಗೆ ಬೆಂಬಲ ಇದೆ. ಗ್ರೌಂಡ್‌ನಲ್ಲಿ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇತ್ತ ಬಿಜೆಪಿಗೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಘೋಷಣೆಗಳನ್ನು, ಭರವಸೆಗಳನ್ನು ಮಾತ್ರ ನೀಡುತ್ತಿದೆ. ನಿರುದ್ಯೋಗ ಸಮಸ್ಯೆ ನಿವಾರಣೆ, ಗುಜರಾತ್‌ನಲ್ಲಿ ನಿಜವಾದ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios