ಪುನರ್‌ಜನ್ಮ ಸಿಕ್ಕಲ್ಲೇ ಕೈಗೆ ಸಿಗದ ಸಿದ್ದು, ಸ್ಥಳೀಯ ಮುಖಂಡರದ್ದೇ ಕಾರುಬಾರು

ಚಾಮುಂಡೇಶ್ವರಿಯಲ್ಲಿ ಸೋಲು ಕಂಡ ನಂತರ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ಬದಾಮಿಯಾಗಿದೆ. ಅಂತಿಮ ಕ್ಷಣದಲ್ಲಿ ಬದಾಮಿಯಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಬಿಜೆಪಿಯ ಶ್ರೀರಾಮುಲು ವಿರುದ್ಧ ಜಯ ಸಾಧಿಸಿದ್ದರು. ಆದರೆ ಈಗ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

Local Congress Leaders denied to meet Siddaramaiah Badami

ಬಾಗಲಕೋಟೆ [ಡಿ.27]  ಬದಾಮಿಯಲ್ಲಿ ಸಿದ್ದರಾಮಯ್ಯನೊಂದಿಗೆ ಮಾತನಾಡೋಕೆ ಬಿಡದಕ್ಕೆ ಕೈ ಕಾರ್ಯಕರ್ತೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಸ್ತಕ ವಿತರಣೆ ಸಮಾರಂಭ ಮುಗಿಸಿ ತೆರಳುವಾಗ ಸಿದ್ದರಾಮಯ್ಯ ಭೇಟಿಗೆ ಕಾರ್ಯಕರ್ತೆ ಇಮಾಂಬಿ ಮುಂದಾಗಿದ್ದರು. ಆದರೆ ಸಿದ್ದರಾಮಯ್ಯ ಅವರೊಂದಿಗೆ ಸಮಸ್ಯೆ ಹೇಳಿಕೊಳ್ಳಲು ಬಿಡಲಿಲ್ಲ ಎಂದು ಸಿಟ್ಟಾಗಿದ್ದಾರೆ.

ಇವತ್ ಸಿಗ್ದಿದ್ರೆ ಅಷ್ಟೇ: ಸಿದ್ದರಾಮಯ್ಯ ಭೇಟಿಗೆ ಸಾನ್ವಿ ಹಠ!

‘ನಾವು ಯಾರನ್ನ ಕೇಳಬೇಕು.. ನಿಮ್ಮನ್ನು ಕೇಳಿದ್ರೆ ಏನು ಆಗುವುದಿದೆ...ಎಂದು ಸ್ಥಳೀಯ ಮುಖಂಡರಿಗೆ ಪ್ರಶ್ನೆ ಮಾಡಿದ್ದಾರೆ. ನಾವು ದುಡಿದಿದ್ದೀವಿ ಅವರನ್ನು ಕೇಳುವ ಹಕ್ಕಿದೆ’  ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಬದಾಮಿಯ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದ್ದ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾಜಿ ಸಿಎಂ, ಬದಾಮಿ ಶಾಸಕ ಸಿದ್ದರಾಮಯ್ಯ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios