ಮಲ್ಲಿಕಾರ್ಜುನ್ ಹೊಸಮನಿ

ಬಾದಾಮಿ(ಡಿ.19): ಬಾದಾಮಿಯಲ್ಲಿ ಮಾಜಿ ಸಿಎಂ‌  ಸಿದ್ದರಾಮಯ್ಯ ಭೇಟಿ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ. ಸಿದ್ದರಾಮಯ್ಯ ಭೇಟಿಗೆ ಮೂರು ವಷ೯ದ ಮಗುವೊಂದು ಹಠ ಹಿಡಿದಿದ್ದು, ಕೊನೆಗೆ ಖುದ್ದು ಸಿದ್ದರಾಮಯ್ಯ ಅವರೇ ಮಗುವನ್ನು ಕರೆಸಿ ಮಾತನಾಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಗೃಹ ಕಚೇರಿಗೆ ಮಗು ಸಾನ್ವಿಯೊಂದಿಗೆ ಬಂದಿದ್ದ ತಾಯಿ, ಮಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕೆಂದು ಹಠ ಹಿಡಿದಿದ್ದಾಳೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

"

ವಿಷಯ ತಿಳಿದ ಸಿದ್ದರಾಮಯ್ಯ ತಾಯಿ ಮತ್ತು ಮಗುವನ್ನು ಕರೆಸಿಕೊಂಡು ಮಾತನಾಡಿಸಿದ್ದಾರೆ. ಈ ವೇಳೆ ಮಗು ಸಾನ್ವಿಯ ಕೆನ್ನೆ ಸವರಿ ಮುದ್ದು ಮಾಡಿದ ಸಿದ್ದರಾಮಯ್ಯ, ಆಕೆಯೊಂದಿಗೆ ಕೆಲ ಕಾಲ ಸಂತೋಷವಾಗಿ ಕಾಲ ಕಳೆದರು.

ನೂರಾರು ಜನರ ಮಧ್ಯೆ ಮಗು ಸಾನ್ವಿಳನ್ನು ಕರೆದು ಮಾತನಾಡಿಸಿದ ಸಿದ್ದರಾಮಯ್ಯ ನಡೆಗೆ ನೆರೆದವರು ಹರ್ಷ ವ್ಯಕ್ತಪಡಿಸಿದರು. ಅಲ್ಲದೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಹಠ ಮಾಡುತ್ತಿದ್ದ ಸಾನ್ವಿಗೆ ಎಲ್ಲರೂ ಮುದ್ದು ಮಾಡಿ ಕಳುಹಿಸಿಕೊಟ್ಟರು.