ಅರಳದ ಕಮಲ, ಕೈ ಹಿಡಿಯದ ಮತದಾರ; ಅತಂತ್ರ ಸ್ಥಿತಿಯಲ್ಲಿ ಕೊಪ್ಪಳ
ನಗರ ಸ್ಥಳೀಯ ಚುನಾವಣಾ ಫಲಿತಾಂಶದಲ್ಲಿ ಕೊಪ್ಪಳ ಅತಂತ್ರ ಸ್ಥಿತಿ
ಕೊಪ್ಪಳ (ಸೆ. 03): ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಹೊರ ಬಿದ್ದಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲದ ಪ್ರದರ್ಶನ ತೋರಿಸಿದೆ. 2 ನಗರ ಸಭೆಯಲ್ಲಿ 1 ಕಾಂಗ್ರೆಸ್ ಗೆದ್ದರೆ ಇನ್ನೊಂದನ್ನು ಬಿಜೆಪಿ ಗೆದ್ದಿದೆ. ಕುಷ್ಟಗಿ ಪುರಸಭೆ ಕೈ ಪಾಲಾದರೆ ಯಲಬುರ್ಗಾ ಪಟ್ಟಣ ಪಂಚಾಯತಿ ಕಮಲದ ಪಾಲಾಗಿದೆ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಕೊಪ್ಪಳ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜೆಡಿಎಸ್ ಬೆಂಬಲ ಅಗತ್ಯವಿದೆ. ಕಾಂಗ್ರೆಸ್ 14 ಸ್ಥಾನಗಳನ್ನು ಪಡೆದರೆ ಬಿಜೆಪಿ 11 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಜೆಡಿಎಸ್ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.