Asianet Suvarna News Asianet Suvarna News

ಕಲಬುರಗಿ: ಎಲ್‌ಕೆಜಿ ವಿದ್ಯಾರ್ಥಿನಿಯನ್ನು ಬಸ್ಸಿಂದ ಇಳಿಸಿ ಕಂಡಕ್ಟರ್ ಅಮಾನವೀಯತೆ

ನನ್ನ ಹತ್ತಿರ ಪಾಸ್, ಆಧಾರ್‌ ಕಾರ್ಡ್‌ ಇಲ್ಲ ಎಂದಿದ್ದಕ್ಕೆ ಟಿಕೆಟ್‌ ತೆಗೆದುಕೊ ಎಂದಿದ್ದಕ್ಕೆ ವಿದ್ಯಾರ್ಥಿ ನನ್ನಲಿ ಹಣ ಇಲ್ಲ ಎಂದಾಗ ಬಸ್ಸಿನಿಂದ ಇಳಿಸಿ ಅಮಾನವೀಯವಾಗಿ ನಡೆದುಕೊಂಡ ನಿರ್ವಾಹಕ 

LKG Student was dropped from the Bus by the Conductor at Chittapur in Kalaburagi grg
Author
First Published Nov 7, 2023, 11:48 AM IST

ಚಿತ್ತಾಪುರ(ನ.07):  ಪಟ್ಟಣದ ಮಹಾದೇವಮ್ಮ ಪಾಟೀಲ್ ಮೆಮೊರಿಯಲ್ ಶಾಲೆಯಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿರುವ ದಂಡೊತಿ ಗ್ರಾಮ ವಿದ್ಯಾರ್ಥಿನಿ ಸಾನ್ವಿ ಬಸವರಾಜ ಎನ್ನುವ ಮಗುವನ್ನು ಶಾಲೆ ಬಿಟ್ಟ ನಂತರ ದಂಡೊತಿ ಊರಿಗೆ ಹೋಗುವಾಗ ಟಿಕೆಟ್ ಹಣ ನೀಡಿದರೆ ಮಾತ್ರ ಕರೆದುಕೊಂಡು ಹೋಗುವುದಾಗಿ ಹೇಳಿ ನಿರ್ವಾಹಕ ಬಸ್ಸಿನಿಂದ ಇಳಿಸಿದ ಘಟನೆ ನಡೆದಿದೆ.

ಸಾನ್ವಿ ಬಸವರಾಜ ನಿತ್ಯ ದಂಡೊತಿಯಿಂದ ಚಿತ್ತಾಪುರದಲ್ಲಿರುವ ಮಹಾದೇವಮ್ಮ ಪಾಟೀಲ್ ಮೆಮೋರಿಯಲ್ ಶಾಲೆಗೆ ಬರುತ್ತಾಳೆ. ಅಲ್ಲದೇ ದಿನಾಲೂ ತನ್ನ ಶಾಲೆ ಐಡಿ ಕಾರ್ಡ್‌ ತೋರಿಸಿ ಪ್ರಯಾಣಿಸುತ್ತಾಳೆ. ಆದರೆ ಸೋಮವಾರ ಸಂಜೆ ಶಾಲೆ ಬಿಟ್ಟ ನಂತರ ಊರಿಗೆ ತೆರಳಲು ಬಸ್ ನಿಲ್ದಾಣದಿಂದ ಕಲಬುರಗಿಗೆ ಹೋಗುವ ಕೆಎ-೩೨, ಎಫ್ ೨೬೪೭ ಬಸ್ಸಿನಲ್ಲಿ ಏರಿದಾಗ ನಿರ್ವಾಹಕ ಚಂದು ಸ್ವಾಮಿ ಎನ್ನುವವರು ಪಾಸ್‌, ಆಧಾರ್‌ ಕಾರ್ಡ್‌ ಎಲ್ಲಿ ಎಂದು ಕೇಳಿದ್ದಾರೆ. ಈ ವೇಳೆ ನನ್ನ ಹತ್ತಿರ ಪಾಸ್, ಆಧಾರ್‌ ಕಾರ್ಡ್‌ ಇಲ್ಲ ಎಂದಿದ್ದಕ್ಕೆ ಟಿಕೆಟ್‌ ತೆಗೆದುಕೊ ಎಂದಿದ್ದಕ್ಕೆ ವಿದ್ಯಾರ್ಥಿ ನನ್ನಲಿ ಹಣ ಇಲ್ಲ ಎಂದಾಗ ಬಸ್ಸಿನಿಂದ ಇಳಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾನೆ.

ಬಸ್ ಚಲಾಯಿಸುತ್ತಿದ್ದಾಗಲೇ ಹೃದಯಾಘಾತ: 40 ಪ್ರಯಾಣಿಕರ ಜೀವ ಕಾಪಾಡಿ ಪ್ರಾಣ ಬಿಟ್ಟ ಚಾಲಕ

ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ದಂಡೊತಿ ಗ್ರಾಮದ ಶಿವಕುಮಾರ ಎನ್ನುವ ವಿದ್ಯಾರ್ಥಿ ಅವಳ ಜೊತೆ ತಾನು ಇಳಿದು ಅವರ ಪೋಷಕರಿಗೆ ವಿಷಯ ತಿಳಿಸಿದ ಬಳಿಕ ಅವರು ಬಂದು ಮಗುವನ್ನು ಕರೆದುಕೊಂಡು ಹೋಗಿದ್ದಾರೆ.
ಪೋಷಕರು ಹೇಳುವ ಪ್ರಕಾರ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಒಂದನೇ ತರಗತಿಯಿಂದ ನೀಡುತ್ತಾರೆ. ಹಾಗಾಗಿ ಬಸ್ ಪಾಸ್ ತೆಗೆಸಿರುವುದಿಲ್ಲ. ಅವಳು ದಿನಾಲೂ ಶಾಲೆಯಲ್ಲಿ ನೀಡಿರುವ ಕಾರ್ಡ್‌ ತೋರಿಸಿ ಬರುತ್ತಿದ್ದಳು. ಇವತ್ತು ನಿರ್ವಾಹಕರು ಬಸ್‌ನಿಂದ ಮಗುವನ್ನು ಇಳಿಸಿರುವುದು ತುಂಬಾ ಬೇಜಾರಿನ ವಿಷಯವಾಗಿದೆ. ಮುಂದೆ ಯಾವ ಮಕ್ಕಳಿಗೂ ಈ ರೀತಿಯ ತೊಂದರೆ ಆಗದಂತೆ ಬಸ್ ಘಟಕದವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿದರು.

Follow Us:
Download App:
  • android
  • ios