Chikkamagaluru: ಜೈಲಿನಿಂದ ಬಿಡುಗಡೆ ನಂತರ ಸಾತ್ವಿಕ ಜೀವನ ನಡೆಸಿ; ಡಾ. ಮಂಜುಳಾ ಸಲಹೆ
ಆಕಸ್ಮಿಕವಾಗಿ ಜರುಗುವ ತಪ್ಪುಗಳಿಗೆ ಕಾರಾಗೃಹ ಬಂಧಿಗಳಾಗುವವರು ಶಿಕ್ಷೆ ಅನುಭವಿಸಿದ ನಂತರ ಸಾತ್ವಿಕ ದಾರಿಯಲ್ಲಿ ಸಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಹೇಳಿದರು.
ಚಿಕ್ಕಮಗಳೂರು (ಡಿ.30) : ಆಕಸ್ಮಿಕವಾಗಿ ಜರುಗುವ ತಪ್ಪುಗಳಿಗೆ ಕಾರಾಗೃಹ ಬಂಧಿಗಳಾಗುವವರು ಶಿಕ್ಷೆ ಅನುಭವಿಸಿದ ನಂತರ ಸಾತ್ವಿಕ ದಾರಿಯಲ್ಲಿ ಸಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದೊಂದಿಗೆ ನಡೆದ ‘ಆತ್ಮ ಪರಿವರ್ತನೆಗೆ ರಾಜಯೋಗ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Chikkamagaluru: ರಾಗಿ ಫಸಲು ಕಾಯುತ್ತಾ ಗುಡಿಸಲಲ್ಲಿ ಮಲಗಿದ್ದವನನ್ನು ಬಲಿ ಪಡೆದ ಕಾಡಾನೆ
ಕೆಲವು ಕಾರಾಗೃಹ ಬಂಧಿಗಳು ಯಾವುದೋ ಉದ್ವೇಗಕ್ಕೆ ಒಳಗಾಗಿ ತಪ್ಪುಗಳನ್ನು ಮಾಡಿ ಶಿಕ್ಷೆ ಅನುಭವಿಸುತ್ತಾರೆ. ಅಂತಹ ಸಮಯದಲ್ಲಿ ಸಹನೆ, ತಾಳ್ಮೆ ಬಹಳ ಮುಖ್ಯವಾಗಿರುವ ಹಿನ್ನೆಲೆ ಜೀವನದಲ್ಲಿ ಎಂತಹ ಸಮಸ್ಯೆಗಳು ಎದುರಾದರೂ ಕೂಡ ಶಾಂತಿಯಿಂದ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಆಕಸ್ಮಿಕ ನಡೆಯುವ ಕೆಲವು ತಪ್ಪುಗಳು ನಮ್ಮನ್ನು ಅನೇಕ ವರ್ಷಗಳ ಕಾಲ ಶಿಕ್ಷೆಗೆ ಗುರಿಪಡಿಸಲಿದೆ. ಆದ್ದರಿಂದ ಮುಂದಿನ ಜೀವನ ಉತ್ತಮವಾಗಿ ನಡೆಸುವ ಸಲುವಾಗಿ ಶಿಕ್ಷೆಯನ್ನು ಪಶ್ಚಾತ್ತಾಪ ಎಂಬಂತೆ ತಿಳಿದುಕೊಂಡು ನಂತರದ ದಿನಗಳಲ್ಲಿ ಕುಟುಂಬ ಹಾಗೂ ಮಕ್ಕಳೊಂದಿಗೆ ಸುಖಕರ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ರಾಜಯೋಗಿನಿ ಬ್ರಹ್ಮಕುಮಾರಿ ಭಾಗ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಲವರು ಕುಟುಂಬಗಳ ಕಲಹ ಹಾಗೂ ಆಚಾತುರ್ಯವಾಗಿ ನಡೆಯುವ ಹಲ್ಲೆಗಳಿಗೆ ಬಂಧಿಗಳಾಗುತ್ತಾರೆ. ಇಂತಹ ಪರಿಸ್ಥಿತಿಯನ್ನು ನಾಗರಿಕರು ಜಾಗೃತರಾಗಿ ನಿಭಾಯಿಸಿಕೊಳ್ಳಬೇಕು. ಒಂದುವೇಳೆ ಜಾಗೃತಿ ವಹಿಸದಿದ್ದ ಪಕ್ಷದಲ್ಲಿ ಅನೇಕ ವರ್ಷಗಳ ಶಿಕ್ಷೆಗೆ ಗುರಿಯಾಗಬಹುದು ಎಂದು ಎಚ್ಚರಿಸಿದರು.
ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ಕಂಟಕವಾದ ಅಸ್ಸಾಂ ಕಾರ್ಮಿಕರು..!
ಕಾರಾಗೃಹ ಅಧೀಕ್ಷಕ ಶ್ರೀಶೈಲ ಎಸ್. ಮೇಟಿ ಅಧ್ಯಕ್ಷತೆ ವಹಿಸಿ, ಕಾರಾಗೃಹದಲ್ಲಿ ನೀಡಿದಂತಹ ವಿವಿಧ ಕೌಶಲ್ಯ ತರಬೇತಿಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. ಜೈಲಿನಿಂದ ಬಿಡುಗಡೆಗೊಂಡ ನಂತರ ತರಬೇತಿಯಲ್ಲಿ ಕಲಿತ ವಿದ್ಯೆಯನ್ನು ದುಡಿಮೆ ರೂಪದಲ್ಲಿ ಮಾರ್ಪಡಿಸಿಕೊಂಡು ಉತ್ತಮ ಜೀವನ ಸಾಗಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ, ಪ್ರಬೋಧಿನಿ ಯೋಗ ಸಂಸ್ಥೆಯ ಅಧ್ಯಕ್ಷ ಸುರೇಂದ್ರ, ಜೈಲರ್ ಎಂ.ಕೆ.ನಲಧರಿ ಹಾಗೂ ಕಾರಾಗೃಹ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.