ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ಕಂಟಕವಾದ ಅಸ್ಸಾಂ ಕಾರ್ಮಿಕರು..!

ಕಾರ್ಮಿಕರನ್ನು ಕರೆದುಕೊಂಡು ಬರುತ್ತಾನೆ ಎಂದು ಲಕ್ಷಾಂತರ ರೂಪಾಯಿ ವಂಚನೆ, ಕಾಫಿ ಬೆಳೆಗಾರರ ಸುಂದರೇಶ್ ಒಳಗೊಂಡಂತೆ ಹತ್ತುಕ್ಕೂ ಹೆಚ್ಚು ಬೆಳೆಗಾರರಿಗೆ ಮೋಸ, ಮೊಬೈಲ್ ಪೋನ್ ಸ್ವಿಚ್ ಆಫ್ ಮಾಡಿ ಸಮೀರ್ ಆಲಿ ಎಸ್ಕೇಪ್. 

Assam Based Labor Leader Sameer Ali Fraud to Coffee Growers in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.23): ಕಾಫಿನಾಡು ಚಿಕ್ಕಮಗಳೂರಿನ ದಶದಿಕ್ಕುಗಳ ಕಾಫಿತೋಟದಲ್ಲೂ ಈಗ ಕಾಫಿ ಹಣ್ಣು ಹುಲುಸಾಗಿ ಅರಳಿ ನಿಂತಿದೆ. ಆದ್ರೆ, ಕೊಯ್ಯೊರಿಲ್ದೆ ಉದುರುತ್ತಿದೆ ಅನ್ನೋದೇ ದೊಡ್ಡ ದುರಂತ. ಹಾಗಾಗಿ, ಮಾಲೀಕರು ಕೂಡ ಸಿಕ್ಕಂತಹ ಕಾರ್ಮಿಕರಿಗೆ ಎಲ್ಲಾ ಸೌಲಭ್ಯ ಕಲ್ಪಸಿ ಅಡ್ವಾನ್ಸ್ ಕೊಟ್ಟು ಕೆಲಸಕ್ಕೆ ಇಟ್ಕೊಂಡ್ರು ವಾರದ ಮೇಲೆ ಯಾರೂ ಒಂದೆಡೆ ಕೆಲಸ ಮಾಡುತ್ತಿಲ್ಲ. ಎಲ್ಲರೂ ಕಾಫಿ ಕೊಯ್ಲಿನ ಸಮಯವನ್ನ ದಂಧೆ ಮಾಡಿಕೊಂಡಿದ್ದಾರೆ. ಅದರಲ್ಲಿ ಅಸ್ಸಾಂ ವಲಸಿಗರೆ ಹೆಚ್ಚು. ಆ ಕಾರ್ಮಿಕರನ್ನ ಕರೆದುಕೊಂಡು ಬರುವ ದಲ್ಲಾಳಿಗಳು 50 ಜನ ಕಾರ್ಮಿಕರನ್ನ ಇಟ್ಟುಕೊಂಡು 10 ಜನರನ್ನ ಒಬ್ಬರಿಗೆ ತೋರಿಸಿ 1 ಲಕ್ಷ ಅಡ್ವಾನ್ಸ್ ಪಡೆಯುತ್ತಾರೆ. ಅದೇ 10 ಜನ ತೋರಿಸಿ ಮತ್ತೊಬ್ಬರ ಬಳಿ 50 ಪಡೆಯುತ್ತಾರೆ. ವಾರ ಕೆಲಸ ಮಾಡುತ್ತಾರೆ. ಹೇಳ್ದೆ-ಕೇಳ್ದೆ ಕಾಲ್ಕಿತ್ತು. ಮತ್ತೊಂದು ತೋಟಕ್ಕೆ ಹೋಗಿರ್ತಾರೆ. 

ಕಾರ್ಮಿಕರ ಈ ನಡೆ ಬೆಳೆಗಾರರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹಾಗಾಗಿ, ಮಾಲೀಕರು ಪೊಲೀಸರು ಕಾರ್ಮಿಕರು-ದಲ್ಲಾಳಿಗಳ ಮೇಲೆ ನಿಗಾ ಇಡಬೇಕೆಂದು ಮನವಿ ಮಾಡಿದ್ದಾರೆ. ಕಾರ್ಮಿಕರನ್ನು ಕರೆದುಕೊಂಡು ಬರುತ್ತಾನೆ ಎಂದು ಅಸ್ಸಾಂ ಮೂಲದ ಕಾರ್ಮಿಕ ಮುಖಂಡ ಸಮೀರ್ ಅಲಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ಕಾಫಿ ಬೆಳೆಗಾರರ ಸುಂದರೇಶ್ ಒಳಗೊಂಡಂತೆ ಹತ್ತುಕ್ಕೂ ಹೆಚ್ಚು ಬೆಳೆಗಾರರಿಗೆ ಸಮೀರ್ ಅಲಿ ವಂಚನೆ ಮಾಡಿದ್ದು ಹಣ ಪಡೆದು ಮೊಬೈಲ್ ಪೋನ್‌ ಸ್ವಿಚ್‌ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. 

ಚಿಕ್ಕಮಗಳೂರು: ಒಂದೇ ಕುಣಿಕೆಗೆ ಕೊರಳೊಡ್ಡಿದ ಪ್ರೇಮಿಗಳು

ಅತ್ತ ದುಡ್ಡು ಇಲ್ಲ. ಇತ್ತ ಕೆಲಸವೂ ಇಲ್ಲದೆ ಮಾಲೀಕರು ಕಂಗಾಲು 

ಕಾಫಿ ತೋಟದ ಮಾಲೀಕರಿಗೆ ಕೆಲಸಕ್ಕೆ ಕಾರ್ಮಿಕರು ಸಿಗ್ತಾರೆ ಅಂದ್ರೆ ಏನೋ ಸಿಕ್ತದಂತೆ. ಯಾಕಂದ್ರೆ, 365 ದಿನವೂ ಕಾರ್ಮಿಕರು ಬೇಕಾದ ಕಾಫಿತೋಟದ ನಿರ್ವಹಣೆ ಅಷ್ಟು ಸುಲಭವಲ್ಲ. ಹಾಗಾಗಿ, ಕಾರ್ಮಿಕರು ಬರ್ತಾರಂದ್ರೆ ಮಾಲೀಕರಿಗೆ ಸ್ವರ್ಗ ಅಂಗೈಗೆ ಬಂದಂತೆ. ಆದ್ರೀಗ, ಕಾರ್ಮಿಕರಿಗೆ ಮಾಲೀಕರಿಗೆ ಅಂಗೈಯಲ್ಲೇ ಆಕಾಶ ತೋರಿಸ್ತಿದ್ದಾರೆ. ದೂರದ ರಾಜ್ಯಗಳಿಂದ ಬಂದಂತಹಾ ಕಾರ್ಮಿಕರಿಗೆ ಎಲ್ಲಾ ಸೌಲಭ್ಯ ಕಲ್ಪಿಸಿಕೊಟ್ರು ಕಾರ್ಮಿಕರು ಮಾಲೀಕರಿಗೆ ಟಾಂಗ್ ಕೊಡುತ್ತಿದ್ದಾರೆ. ಅತ್ತ ದುಡ್ಡು ಇಲ್ಲ. ಇತ್ತ ಕೆಲಸವೂ ಇಲ್ಲದೆ ಮಾಲೀಕರು ಕಂಗಾಲಾಗಿದ್ದಾರೆ. ಕಾಫಿನಾಡಲ್ಲಿ ಅರೇಬಿಕಾ ಹಾಗೂ ರೋಬೋಸ್ಟ್ ಎರಡೂ ಸೇರಿ ಸುಮಾರು ಒಂದು ಲಕ್ಷ ಹೆಕ್ಟೇರ್ನಲ್ಲಿ ಕಾಫಿಯನ್ನ ಬೆಳೆದಿದ್ದಾರೆ. ವರ್ಷಪೂರ್ತಿ ಕಾಫಿತೋಟದ ನಿರ್ವಹಣೆ, ಕೊಯ್ಲಿನ ಸಮಯದಲ್ಲಿ ಇಡೀ ಜಿಲ್ಲೆಗೆ ಲಕ್ಷಾಂತರ ಕಾರ್ಮಿಕರು ಬೇಕು. ಸ್ಥಳಿಯ ಕಾರ್ಮಿಕರು ಇದ್ದಾರೆ. ಆದ್ರೆ, ಕೊಯ್ಲಿನ ಸಮಯ ನವೆಂಬರ್-ಡಿಸೆಂಬರ್ನಲ್ಲಿ ಬರೋ ಒರಿಸ್ಸಾ, ಅಸ್ಸಾಂ ದೇಶದವರು ಮಾಲೀಕರಿಗೆ ತಲೆನೋವಾಗಿದ್ದಾರೆ. ಬಂದ ಒಂದು-ಎರಡು ವಾರಗಳ ಕಾಲ ದೆವ್ವದಂತೆ ಕೆಲಸ ಮಾಡುತ್ತಾರೆ. ಆಮೇಲೆ ಹೇಳ್ದೆ-ಕೇಳ್ದೆ ಬೇರೆ ತೋಟಕ್ಕೆ ಹೋಗುತ್ತಿದ್ದಾರೆ. ಸಾಲ-ಸೋಲ ಮಾಡಿ 50 ಸಾವಿರ, ಲಕ್ಷ ಅಡ್ವಾನ್ಸ್ ಕೊಡುವ ಮದ್ಯಮ ವರ್ಗದ ಬೆಳೆಗಾರರು ಕಾರ್ಮಿಕರಿಂದಲೇ ಮತ್ತಷ್ಟು ಸಮಸ್ಯೆಗೀಡಾಗುತ್ತಿದ್ದಾರೆ. ಅದರಲ್ಲಿ ಇಲ್ಲಿನ ಭಾಷೆಯೂ ತಿಳಿಯದ ಕಾರ್ಮಿಕರನ್ನ ತೋರಿಸಿ ದಲ್ಲಾಳಿಗಳು ದಂದೆ ಮಾಡುತ್ತಿದ್ದಾರೆ. ಕೆಲ ಕಾರ್ಮಿಕರು ಮಾಲೀಕರು ಮೇಲೆ ಹಲ್ಲೆ ಕೂಡ ಮಾಡುತ್ತಿದ್ದಾರೆ. ಕೆಲಸಕ್ಕೆ ಬಂದವರು ಹಳೇ ವೈಷಮ್ಯದಿಂದ ಕೊಲೆ ಮಾಡಿ ಹೂತುಹಾಕಿರೋ ತಮ್ಮ ರಾಜ್ಯಕ್ಕೆ ವಾಪಸ್ ಹೋಗಿರೋ ಉದಾಹರಣೆಯೂ ಇದೆ. ಹಾಗಾಗಿ, ಪೊಲೀಸರು ಕಾರ್ಮಿಕರು-ದಲ್ಲಾಳಿಗಳ ಮೇಲೆ ತೀವ್ರ ನಿಗಾ ಇಡಬೇಕಿದೆ.

ಕಾಫಿನಾಡ ಕಾಫಿತೋಟದ ಮಾಲೀಕರ ಬದುಕಿನ ಮೇಲೆ ಮಳೆ ಬರೆ ಎಳೆಯುತ್ತಿದ್ದರೆ ಕಾರ್ಮಿಕರು ಚಪ್ಪಡಿಕಲ್ಲನ್ನೇ ಎಳೆಯುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಮಳೆ ಬೆಳೆಗಾರರ ಬದುಕನ್ನ ಮೂರಾಬಟ್ಟೆಯನ್ನಾಗಿಸಿತ್ತು. ಈ ವರ್ಷವಂತೂ ವರ್ಷಪೂರ್ತಿ ಮಳೆ. ಗಿಡದಲ್ಲಿ ಉಳಿದ ಬೆಳೆಗಿಂತ ಮಣ್ಣು ಸೇರಿದ ಕಾಫಿಯೇ ಹೆಚ್ಚು. ಅಳಿದುಳಿದ ಬೆಳೆಯನ್ನಾದ್ರು ಉಳಿಸಿಕೊಳ್ಳೋಣ ಎಂದು ಹೋರಾಡ್ತಿರೋ ಬೆಳೆಗಾರರಿಗೆ ಕಾರ್ಮಿಕರ ಕಣ್ಣಾಮುಚ್ಚಾಲೆ ಆಟ ಕಂಗಾಲಾಗಿಸಿದೆ. ಪೊಲೀಸರು ಎಷ್ಟೆ ಅಲಟ್ ಆದ್ರು ಕಾರ್ಮಿಕರು-ದಲ್ಲಾಳಿಗಳಿಗೆ ಮನುಷ್ಯತ್ವ ಇಲ್ಲದಿದ್ದರೆ ಬಹುಶಃ ಈ ಸಮಸ್ಯೆಗೆ ಮುಕ್ತಿ ಇಲ್ಲ ಅನ್ಸತ್ತೆ.

Latest Videos
Follow Us:
Download App:
  • android
  • ios