Chikkamagaluru: ರಾಗಿ ಫಸಲು ಕಾಯುತ್ತಾ ಗುಡಿಸಲಲ್ಲಿ ಮಲಗಿದ್ದವನನ್ನು ಬಲಿ ಪಡೆದ ಕಾಡಾನೆ
ಜಮೀನಿನಲ್ಲಿ ರಾಗಿ ಫಸಲು ಕಾಯುತ್ತಾ ಜಮೀನಿನ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಏಕಾಎಕಿ ದಾಳಿ ಮಾಡಿದ ಕಾಡಾನೆ ರೈತರೊಬ್ಬರನ್ನು ತುಳಿದು ಸಾಯಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮ ಸಮೀಪದ ರಾಗಿ ಬಸವನಹಳ್ಲಿಯಲ್ಲಿ ನಡೆದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.25): ಜಮೀನಿನಲ್ಲಿ ರಾಗಿ ಫಸಲು ಕಾಯುತ್ತಾ ಜಮೀನಿನ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಏಕಾಎಕಿ ದಾಳಿ ಮಾಡಿದ ಕಾಡಾನೆ ರೈತರೊಬ್ಬರನ್ನು ತುಳಿದು ಸಾಯಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮ ಸಮೀಪದ ರಾಗಿ ಬಸವನಹಳ್ಲಿಯಲ್ಲಿ ಇಂದು ಮುಂಜಾನೆ ನಡೆದಿದೆ. ಈರಪ್ಪ (60)ಕಾಡಾನೆಯಿಂದ ಮೃತಪಟ್ಟ ರೈತರಾಗಿದ್ದಾರೆ. ತಮ್ಮ ಹೊಲದಲ್ಲಿ ರಾಗಿ ಬೆಳೆದಿದ್ದ ರೈತ ಈರಪ್ಪ ಕಾಡುಪ್ರಾಣಿಗಳಿಂದ ರಾಗಿ ಬೆಳೆ ಕಾಯಲು ರಾತ್ರಿ ಇಡೀ ಜಮೀನಿನಲ್ಲಿದ್ದ ಗುಡಿಸಲಿನಲ್ಲಿ ಮಲಗಿದ್ದರು. ಇಂದು ಮುಂಜಾನೆ ಗುಡಿಸಲಿನ ಮೇಲೆ ದಿಡೀರ್ ದಾಳಿ ನಡೆಸಿದ ಕಾಡಾನೆ ಗುಡಿಸಲು ಧ್ವಂಸ ಮಾಡಿ ರೈತ ಈರಪ್ಪನನ್ನು ಅಡಿಕೆ ಗಿಡಗಳನ್ನು ಬೆಳೆದಿದ್ದ ಹೊಲಕ್ಕೆ ಎಳೆತಂದು ತುಳಿದು ಸಾಯಿಸಿದೆ.
ಈ ಆನೆಗೆಷ್ಟು ಬುದ್ಧಿ ನೋಡಿ: ನಿಧಾನವಾಗಿ ವಿದ್ಯುತ್ ಬೇಲಿ ನೆಲಕ್ಕೆ ಕೆಡವಿದ ಮದಗಜ
ಮಲೆನಾಡು , ಬಯಲುಸೀಮೆಯ ಭಾಗದಲ್ಲಿ ಕಾಡಾನೆ ಕಾಟ
ಒಂದಡೆ ಮಲೆನಾಡು, ಬಯಲುಸೀಮೆಯನ್ನು ಒಳಗೊಂಡಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಕಾಟ ವಿಪರೀತವಾಗಿದ್ದು ಮಲೆನಾಡಿನಲ್ಲಿ ಕಾಡಾನೆ ದಾಳಿ ಕಳೆದ ಮೂರು ತಿಂಗಳು ಮೂವರು ಬಲಿಯಾಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿತ್ತು. ಇದೀಗ ಬಯಲುಸೀಮೆ ಭಾಗದಲ್ಲೂ ಕಾಡಾನೆ ದಾಳಿ ಮುಂದುವರಿದ್ದು ಬಯಲುಸೀಮೆ ರೈತರು ಕಾಡಾನೆ ದಾಳಿಯಿಂದ ತೀವ್ರ ಸಂಕಷ್ಟಕ್ಕೆ ಒಳಾಗಿದ್ದಾರೆ. ಇದರ ನಡುವೆ ಇಂದು ಮುಂಜಾನೆ ಕಾಡಾನೆ ದಾಳಿಯಿಂದ ರೈತ ಮೃತಪಟ್ಟ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಸ್ಥಳಿಯರ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಡಾನೆಯನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದರು.
Chikkamagalauru Wild Elephant: ಜನರ ನಿದ್ದೆಗೆಡಿಸಿದ್ದ ಮಲೆನಾಡಿನ ನರಹಂತಕ ಕಾಡಾನೆ ಕೊನೆಗೂ ಸೆರೆ
ಸೂಕ್ತ ಪರಿಹಾರಕ್ಕೆ ಸ್ಥಳೀಯರ ಆಗ್ರಹ
ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ಬಾರಿ ಕಾಡಾನೆಗಳ ದಾಳಿ ತೀವ್ರವಾಗಿ ಹೆಚ್ಚಿದ್ದು, ಜಿಲ್ಲೆಯ ಮೂಡಿಗೆರೆ ತಾಲೂಕೊಂದರಲ್ಲೇ ಕಾಡಾನೆ ದಾಳಿಗೆ 6 ಮಂದಿ ಬಲಿಯಾಗಿದ್ದಾರೆ. ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕಾಡಾನೆಗಳ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದು, ಈ ಮಧ್ಯೆ ಬಯಲು ಭಾಗದಲ್ಲೂ ಕಾಡಾನೆಗಳ ದಾಳಿ ಆರಂಭವಾಗಿರುವುದು ರೈತರ ನಿದ್ದೆ ಗೆಡಿಸಿದೆ.ಇಂದು ಕಾಡಾನೆದಾಳಿಗೆ ಬಲಿಯಾದ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ನರಹಂತಕ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು, ರೈತರು ಆಗ್ರಹಿಸಿದ್ದಾರೆ.