ಹಾಸನ(ಜ.12): ಸಂಪುಟ ಪುನಾರಚನೆನೋ ವಿಸ್ತರಣೆಯೋ ಕಾದು ನೋಡಿ. ಸಂಜೆ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ರಾಜ್ಯ ಸಂಪುಟ ವಿಸ್ತರಣೆ ವಿಚಾರವಾಗಿ ಹಾಸನದಲ್ಲಿ ಜನ ಸೇವಕ್ ಸಮಾವೇಶದಲ್ಲಿ ಪಾಲ್ಗೊಂಡ ನಳಿನ್ ಹೊಸಬರು ಇರ್ತಾರೊ ಏನು ಅನ್ನೋದು ನಾಳೆ ಗೊತ್ತಾಗಲಿದೆ. ಬಿಜೆಪಿಗೆ ಬಂದವರಿರಲಿ, ಇಲ್ಲೇ ಇದ್ದವರಿರಲಿ ನಮ್ಮ ಪಕ್ಷದಲ್ಲಿ ‌ಎಲ್ಲರೂ ಒಂದೇ. ಸರ್ಕಾರದಲ್ಲಿ ಮುಖ್ಯ ಮಂತ್ರಿಗಳು  ಸಚಿವ ಸಂಪುಟ ವಿಸ್ತರಣೆ ಮಾಡಿದಾಗಲೆಲ್ಲಾ ಏನೇನೋ ಚರ್ಚೆ ಆಗುತ್ತದೆ. ಆದರೆ ಅಸಮಧಾನ ಬುಗಿಲೆದ್ದಿಲ್ಲ, ಬೆಂಕಿಯೂ ಬಿದ್ದಿಲ್ಲ ಎಂದು ತಿಳಿಸಿದ್ದಾರೆ.

ಗೂಗೂಲ್ ಮ್ಯಾಪ್ ನಂಬಿ ಡ್ರೈವ್; ಡ್ಯಾಮ್ ನೀರಿನಲ್ಲಿ ಮುಳುಗಿತು ಕಾರು, ಚಾಲಕ ಸಾವು!

ನಾಯಕತ್ವ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ ಎಂದ ಕಟೀಲ್ ಬಿಜೆಪಿಯಲ್ಲಿ ನಾಯಕತ್ವ ಬದಲಾಗುತ್ತೆಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಸಿದ್ದರಾಮಯ್ಯ ನಮ್ಮ ಪಕ್ಷದವರಾ..? ನಮ್ಮ ಪಕ್ಷದ ನಾಯಕತ್ವ ನಿಶ್ಚಯ ಮಾಡೋದು ಸಿದ್ದರಾಮಯ್ಯನಾ..? ಮೊದಲು ಸಿದ್ದರಾಮಯ್ಯ ತಮ್ಮ ಸ್ಥಾನ ಮಾನ ಉಳಿಸಿಕೊಳ್ಳಲು ಯೋಚನೆ ಮಾಡಲಿ ಎಂದು ಹೇಳಿದ್ದಾರೆ.