ಗೂಗೂಲ್ ಮ್ಯಾಪ್ ನಂಬಿ ಡ್ರೈವ್; ಡ್ಯಾಮ್ ನೀರಿನಲ್ಲಿ ಮುಳುಗಿತು ಕಾರು, ಚಾಲಕ ಸಾವು!
First Published Jan 12, 2021, 2:53 PM IST
ಗೂಗಲ್ ಮ್ಯಾಪ್ ಹೇಳಿದ ದಾರಿಯಲ್ಲಿ ಸಂಚರಿಸಿ ಕೊನೆಗೆ ಕಾಡಿಗೆ ತೆರಳಿದ, ತಲುಪಬೇಕಾದ ಸ್ಥಳಕ್ಕಿಂತ ಇನ್ನೆಲ್ಲೋ ಪ್ರಯಾಣ ಮಾಡಿದ ಸಾಕಷ್ಟು ಘಟನೆಗಳು ಭಾರತದಲ್ಲಿ ನಡೆದಿದೆ. ಸಾಕಷ್ಟು ಜನರು ಪರದಾಡಿದ ಊದಾಹರಣೆಗಳಿವೆ. ಆದರೆ ಭಾರತದಲ್ಲಿ ಗೂಗಲ್ ಮ್ಯಾಪ್ ನಂಬಿ ಸಾವನ್ನಪ್ಪಿದ್ದು ಇದೇ ಮೊದಲು. ಗೂಗಲ್ ಮ್ಯಾಪ್ ಹೇಳಿದ ದಾರಿಯಲ್ಲಿ ಸಂಚರಿಸಿದ ಚಾಲಕ, ನೋಡ ನೋಡುತ್ತಿದ್ದಂತೆ ಕಾರು ಡ್ಯಾಮ್ ನೀರಿನಲ್ಲಿ ಮುಳುಗಡೆಯಾಗಿದೆ.

ವಿಶ್ವವೇ ಈಗ ಡಿಜಿಟಲೈಜ್ ಆಗಿದೆ. ಬಹುತೇಕ ಎಲ್ಲಾ ಕೆಲಸಗಳು, ವ್ಯವಹಾರಗಳು ಡಿಜಿಟಲ್ ಮೂಲಕವೇ ನಡೆಯುತ್ತಿದೆ. ಇನ್ನು ಪ್ರಯಾಣದ ವೇಳೆಯೂ ಗೂಗಲ್ ಮ್ಯಾಪ್ ಅತೀ ಹೆಚ್ಚು ಬಳಸಲಾಗುತ್ತದೆ. ದಾರಿ ಸರಿಯಾಗಿ ಗೊತ್ತಿಲ್ಲದಿದ್ದರೆ, ಗೂಗಲ್ ಮ್ಯಾಪ್ ಬಳಸಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚು. ಆದರೆ ಇದೇ ಗೂಗಲ್ ಮ್ಯಾಪ್ ಎಡವಟ್ಟಿನಿಂದ, ಇದೀಗ ಚಾಲಕ ಸಾವನ್ನಪ್ಪಿದ್ದಾನೆ.

ಭಾರತದಲ್ಲಿ ಗೂಗಲ್ ಮ್ಯಾಪ್ ಮೂಲಕ ತೆರಳಿ ದಾರಿ ತಪ್ಪಿ, ಕಾಡು ತಲುಪಿದೆ. ರಸ್ತೆ ಇಲ್ಲದ ದಾರಿಯಲ್ಲಿ ಸಂಚರಿಸಿದ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಆದರೆ ಇದೀಗ ಗೂಗಲ್ ಮ್ಯಾಪ್ ನಂಬಿ ಸಾವನ್ನಪ್ಪಿದ ಘಟನೆಯೂ ನಡೆದುಹೋಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?