ಕೋಲಾರ (ಫೆ.03): ಜಿಲ್ಲೆಯ ಮದ್ಯ ಮಾರಾಟದ ಉದ್ಯಮಕ್ಕೆ ಸಂಬಂಧಿಸಿದ ಪ್ರಸ್ತುತ ಸಮಸ್ಯೆ, ಹಲವು ಬಗೆಯ ಬೇಡಿಕೆಗಳನ್ನು ಸರ್ಕಾರ ಹಿಡೇರಿಸಬೇಕೆಂದು ಒತ್ತಾಯಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಅಪಾರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಜಿಲ್ಲಾ ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎ. ವೆಂಕಟಾಚಲಪತಿ ಮಾತನಾಡಿ, ಅಬಕಾರಿ ಇಲಾಖೆಯ ಅಧಿಕಾರಿಗಳು ಲಂಚಕ್ಕೆ ಕಿರುಕುಳ ನೀಡುವುದ್ದನ್ನು ನಿಲ್ಲಿಸಬೇಕು. ಅಧಿಕಾರಿಗಳ ಬೇನಾಮಿ ಆಸ್ತಿ ಹಾಗೂ ಮದ್ಯ ಸನ್ನದುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಹಲವಾರು ವರ್ಷಗಳಿಂದ ಒಂದೇ ಕಡೆ ನೌಕರಿ ಮಾಡುತ್ತಿರುವ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ವಿಜಯಪುರ; ಕುಡುಕರ ಅಡ್ಡೆಯಾದ ಐಬಿ, ಗುತ್ತಿಗೆದಾರಂದೆ ಹವಾ! ..

ಸಂಘದ ಪ್ರಮುಖ ಬೇಡಿಕೆಗಳು :  ಅಬಕಾರಿ ನಿಯಮ-7ನ್ನು ತಿದ್ದುಪಡಿ ಮಾಡಿ, ಸಿ.ಎಲ್‌-9 ಗಳಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಬೇಕು. ಎಲ್ಲ ಮದ್ಯಗಳ 60-90 ಎಂ.ಎಲ್‌ ಗಳ ಪ್ಯಾಕಿಂಗ್‌ ಒದಗಿಸಬೇಕು. ಬ್ಯಾಂಕ್‌ ಗಳ ರಜೆ ದಿನಗಳಲ್ಲೂ ಕೆಎಸ್‌ಬಿಸಿಎಲ್‌ ನವರು ಟಿಓಡಿ ರೀತಿಯಲ್ಲಿ ಮದ್ಯ-ಬಿಯರ್‌ ಒದಗಿಸಬೇಕು ಹಾಗೂ ಸನ್ನದುದಾರರು ತಮ್ಮ ಸನ್ನದುಗಳಿಗೆ ಸಂಬಂಧಿಸಿ ನೀಡುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಪ್ರತಿಭಟಿಸಿದರು.