Asianet Suvarna News Asianet Suvarna News

ಕುಸಿತವಾಯ್ತು ಮದ್ಯ ಮಾರಾಟ : ಕಾರಣ ಕೊರೋನಾ!

ಕೊರೋನಾ ಸಂದರ್ಭದಲ್ಲಿ ಮದ್ಯ ಮಾರಾಟ ಪ್ರಮಾಣದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಹಾಗಾದ್ರೆ ಹಾಗಾದ್ರೆ ಕುಡುಕರೆಲ್ಲಾ ಕುಡಿತ ಬಿಟ್ರಾ..?

Liquor Sales Decrease In Mandya District
Author
Bengaluru, First Published Aug 19, 2020, 11:53 AM IST

ಮಂಡ್ಯ(ಆ.19):  ಏಪ್ರಿಲ್‌ನಿಂದ ಈವ​ರೆಗೆ ಜಿಲ್ಲೆ​ಯಲ್ಲಿ ಮದ್ಯ ಮಾರಾ​ಟ​ದಲ್ಲಿ ಕುಸಿತ ಕಂಡು​ ಬಂದಿದೆ. ಕೊರೋನಾ ಸೋಂಕು ನಿಯಂತ್ರಿಸಲು ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಮದ್ಯದಂಗಡಿಗಳ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ಬಿ.ಶಿವಪ್ರಕಾಶ್‌ ಹೇಳಿದರು.

ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲೆಯೊಳಗೆ 4,80,681 ಸ್ವದೇಶಿ ಮದ್ಯ, 1,00,534 ಪೆಟ್ಟಿಗೆ ಬಿಯರ್‌ ಎತ್ತು​ವ​ಳಿ​ಯಾ​ಗಿದೆ. ಕಳೆದ ಸಾಲಿಗೆ ಇದೇ ಅವ​ಧಿ​ಯಲ್ಲಿ 6,34,069 ರಟ್ಟಿನ ಪೆಟ್ಟಿಗೆ ಮದ್ಯ, 2,22,456 ರಟ್ಟಿ​ನ ಪೆಟ್ಟಿ​ಗೆ​ಗ​ಳಷ್ಟುಬಿಯರ್‌ ಬಳ​ಕೆ​ಯಾ​ಗಿತ್ತು. ಇದರೊಂದಿಗೆ ಶೇ.24.19 (1,53,388 ರೆಟ್ಟಿನ ಪೆಟ್ಟಿ​ಗೆ) ಮದ್ಯ ಹಾಗೂ ಶೇ. 54.81ರಷ್ಟು1,21,919 ರಟ್ಟಿನ ಪೆಟ್ಟಿಗೆ ಬೀಯರ್‌ ಬಳಕೆ ಕಡಿ​ಮೆ​ಯಾ​ಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇಲ್ಲಿಯ ಜನರಿಗೆ ಐದು ತಿಂಗಳ ನಂತರ ಮದ್ಯದಂಗಡಿ ಓಪನ್ ಭಾಗ್ಯ!.

ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಿದ್ದ ವೇಳೆ ಮದ್ಯ ದಾಸ್ತಾನು ಮತ್ತು ಅಂಗಡಿ ತೆರೆದ ಸಮ​ಯ​ದಲ್ಲಿ ದಾಸ್ತಾನಿನಲ್ಲಿ ವ್ಯತ್ಯಾ​ಸ​ವಾ​ಗಿ​ರುವ ಜಿಲ್ಲೆಯ 10 ಅಂಗ​ಡಿ​ಗ​ಳನ್ನು ಸೀಜ್‌ ಮಾಡ​ಲಾ​ಗಿದ್ದು, ಅಂತಹ ಅಂಗ​ಡಿ​ಗ​ಳಿಗೆ ಜಿಲ್ಲಾ​ಧಿ​ಕಾ​ರಿ​ಗಳ ಸಮ್ಮು​ಖ​ದಲ್ಲಿ ದಂಡ ವಿಧಿಸಿದ ಬಳಿಕ ತೆರೆ​ಯಲು ಅನು​ಮತಿ ನೀಡ​ಲಾ​ಗಿದೆ ಎಂದು ಪ್ರಶ್ನೆ​ಯೊಂದ​ಕ್ಕೆ ಉತ್ತ​ರಿ​ಸಿ​ದರು.

ಕಳ್ಳಭಟ್ಟಿತಯಾರಿಕೆ ಬಂದ್‌:

ಈ ಹಿಂದೆ ಕೆ.ಆರ್‌.ಪೇಟೆಯ ಜಾಗ​ನ​ಕೆರೆ ಬೆಟ್ಟದ ತಪ್ಪಲು, ಸಾರಂಗಿ, ಮಳ​ವ​ಳ್ಳಿ ತಾಲೂ​ಕಿನ ಹೊಸ​ದೊಡ್ಡಿ, ದಾಳ​ನ​ಕಟ್ಟೆಮತ್ತು ಮುತ್ತತ್ತಿ ಅರಣ್ಯ ಪ್ರದೇಶ ಹಾಗೂ ಮುತ್ತ​ತ್ತಿಯ ಹರಿ​ಜನ ಕಾಲೋ​ನಿ​ಯಲ್ಲಿ ಕಳ್ಳ​ಭಟ್ಟಿ, ನಕಲಿ ಮದ್ಯ, ಸೇಂದಿ ತಯಾ​ರಿಕಾ ಘಟ​ಕ​ಗಳು ಇದ್ದವು. ಈ ಎಲ್ಲ ಗ್ರಾಮ​ಗ​ಳಲ್ಲೂ ಅಬ​ಕಾರಿ ಅಧಿ​ಕಾ​ರಿ​ಗಳು ದಾಳಿ ನಡೆಸಿ ಪರಿ​ಶೀ​ಲನೆ ನಡೆ​ಸಿದ್ದು, ಯಾವುದೇ ಚಟು​ವ​ಟಿ​ಕೆ​ಗಳು ನಡೆ​ಯು​ತ್ತಿಲ್ಲ. ಸೇಂದಿ, ಕಳ್ಳ​ಭಟ್ಟಿತಯಾ​ರಿ​ಸು​ತ್ತಿದ್ದವರೆ​ಲ್ಲರೂ ಅಕ್ರಮಗಳನ್ನು ಬಿಟ್ಟು ರೇಷ್ಮೆ, ತೋಟ, ಹಿಪ್ಪ​ನೇ​ರಳೆ, ಕೃಷಿ ಚಟು​ವ​ಟಿ​ಕೆ​ಗ​ಳಲ್ಲಿ ಸಕ್ರಿಯವಾಗಿ ತೊಡ​ಗಿ​ಸಿ​ಕೊಂಡಿ​ದ್ದಾರೆ ಎಂದು ವಿವ​ರಿ​ಸಿ​ದ​ರು.

ಮದ್ಯಪ್ರಿಯರಿಗಾಗಿ ಹಿಪ್ ಬಾರ್ ತೆರೆದ ಫ್ಲಿಪ್ ಕಾರ್ಟ್.. ಆನ್‌ಲೈನ್‌ನಲ್ಲೇ ಎಣ್ಣೆ!

ಕಬ್ಬಿನ ಗದ್ದೆ​ಗಳು, ಹಿಪ್ಪ​ನೇ​ರಳೆ, ತೋಟ​ಗಳ ನಡುವೆ ಗಾಂಜಾ ಗಿಡ​ಗ​ಳನ್ನು ಬೆಳೆ​ಯು​ತ್ತಿ​ರುವ ಬಗ್ಗೆಯೂ ಪರಿ​ಶೀ​ಲ​ನೆ ನಡೆ​ಸಿದ್ದು, ಯಾವುದೇ ಇಂತಹ ಅಕ್ರಮ ಚಟು​ವ​ಟಿ​ಕೆ​ಗಳು ನಡೆ​ಯು​ತ್ತಿ​ಲ್ಲ. ಒಂದು ವೇಳೆ ಇಂತಹ ಅಕ್ರಮ ಚಟು​ವ​ಟಿ​ಕೆ​ಗಳು ನಡೆ​ಯು​ತ್ತಿ​ದ್ದಲ್ಲಿ ಅಬ​ಕಾರಿ ಅಧಿಕಾ​ರಿ​ಗಳು ಮತ್ತು ಪೊಲೀಸ್‌ ಅಧಿ​ಕಾ​ರಿ​ಗಳ ಗಮ​ನಕ್ಕೆ ತರು​ವಂತೆ ಮನವಿ ಮಾಡಿ​ದರು.
  
ಜಿಲ್ಲೆ​ಯಲ್ಲಿ ಕಳ್ಳ​ಭಟ್ಟಿ, ವಿಷ​ಪೂ​ರಿತ ಮದ್ಯ, ಕಲ​ಬೆ​ರಕೆ ಸೇಂದಿ ತಯಾ​ರಿಕೆ, ಸಂಗ್ರಹ ಮತ್ತು ಮಾರಾಟ ನಡೆ​ಯ​ದಂತೆ ತೀವ್ರ ನಿಗಾ ಹಿಸ​ಲಾ​ಗಿದೆ. ಜಿಲ್ಲೆಯ ಯಾವುದೇ ಭಾಗ​ದಲ್ಲಿ ಇಂತಹ ಚಟು​ವ​ಟಿಕೆ ನಡೆ​ಯು​ತ್ತಿಲ್ಲ

- ಬಿ. ಶಿವ​ಪ್ರ​ಸಾದ್‌, ಜಿಲ್ಲಾ ಅಬ​ಕಾರಿ ಅಧಿ​ಕಾರಿ
 

Follow Us:
Download App:
  • android
  • ios