ಮದ್ಯಪ್ರಿಯರಿಗೆ ಶುಭ ಸುದ್ದಿ/ ಸುಮಾರು ಐದು ತಿಂಗಳ ನಂತರ ಮದ್ಯದಂಗಡಿ ಓಪನ್/ ಕಂಟೈನ್‌ಮೆಂಟ್ ವಲಯ ಮತ್ತು ಮಾಲ್‌ನಲ್ಲಿರುವ ಮದ್ಯದಂಗಡಿಗೆ ಅವಕಾಶ ಇಲ್ಲ.
ಚೆನ್ನೈ (ಆ. 18) ತಮುಳಿನಾಡಿನಲ್ಲಿ ಅಂತಿಮವಾಗಿ ಮದ್ಯಪ್ರಿಯರಿಗೆ ಶುಭ ಸುದ್ದಿ ಸಿಕ್ಕಿದೆ. ಕೊರೋನಾ ಲಾಕ್ ಡೌನ್ ಕಾರಣಕ್ಕೆ ಬಂದ್ ಆಗಿದ್ದ ಮದ್ಯದ ಅಂಗಡಿಗಳು ಸುಮಾರು ಐದು ತಿಂಗಳ ನಂತರ ತೆರೆದುಕೊಳ್ಳುತ್ತಿವೆ.
ಆಗಸ್ಟ್ 18 ರಿಂದ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟ್ಯಾಸ್ಮಾಕ್) ಅಂಗಡಿಗಳನ್ನು ತೆರೆಯಲಾಗುವುದು ಎಂದು ಸರ್ಕಾರ ತಿಳಿಸಿದೆ. ಆದಾಗ್ಯೂ ಕಂಟೈನ್‌ಮೆಂಟ್ ವಲಯ ಮತ್ತು ಮಾಲ್‌ನಲ್ಲಿರುವ ಮದ್ಯದಂಗಡಿಗೆ ಓಪನ್ ಭಾಗ್ಯ ಇಲ್ಲ.
ಕೊರೋನಾ ನಿಯಮಗಳನ್ನು ಪಾಲಿಸಬೇಕು, ಟ್ಯಾಸ್ಮಾಕ್ ಅಂಗಡಿಗಳು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ ಮತ್ತು ದಿನಕ್ಕೆ 500 ಟೋಕನ್ ನೀಡಲಾಗುತ್ತಿದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ತಿಳಿಸಲಾಗಿದೆ.
ಹಿಪ್ ಬಾರ್ ತೆರೆದ ಫ್ಲಿಫ್ ಕಾರ್ಟ್; ಆನ್ ಲೈನ್ ನಲ್ಲೇ ಎಣ್ಣೆ
ತಮಿಳುನಾಡಿನಲ್ಲಿ ಆಡಳಿತದಲ್ಲಿರುವ AIADMKಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಮದ್ಯದಂಗಡಿ ತೆರೆಯುವ ಮಾಹಿತಿ ನೀಡಿದೆ. ಕೊರೋನಾ ಪ್ರಕರಣಗಳು ರಾಜ್ಯದಲ್ಲಿ ಇಳಿಕೆ ದಾಖಲಿಸುತ್ತಿದ್ದು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದೆ.
ಈ ಮೊದಲು ಮೇ 7 ರಿಂದ ಉಳಿದ ತಮಿಳುನಾಡಿನ ಮದ್ಯದಂಗಡಿಗಳನ್ನು ತೆರೆಯುವ ಆಲೋಚನೆ ಮಾಡಲಾಗಿತ್ತು. ಆದರೆ ಕರೋನಾ ಏಕಾಏಕಿ ಏರಿಕೆ ಕಂಡಿದ್ದರಿಂದ ಚೆನ್ನೈ ಮತ್ತು ಇತರ ಉಪನಗರ ಪ್ರದೇಶಗಳಲ್ಲಿನ ಅಂಗಡಿಗಳನ್ನು ಮುಚ್ಚಲಾಗಿತ್ತು.
ಈಗ ಚೆನ್ನೈನಲ್ಲಿ ಕರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ, ಸರ್ಕಾರವು ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ಹೊರಟಿದೆ. ಕರೋನಾವನ್ನು ಎದುರಿಸಲು ಮಾರ್ಚ್ 24 ರಂದು ಚೆನ್ನೈ ಸೇರಿದಂತೆ ಇಡೀ ರಾಜ್ಯದಲ್ಲಿ ಟ್ಯಾಸ್ಮಾಕ್ ಅಂಗಡಿಗಳನ್ನು ಮುಚ್ಚಲಾಗಿತ್ತು. ಇದೀಗ ಮದ್ಯದಂಗಡಿ ಓಪನ್ ಆಗುತ್ತಿವೆ.
