Asianet Suvarna News Asianet Suvarna News

Bengaluru: ಲವರ್ಸ್ ಡೇ ಫೆ.14 ರಿಂದ ಮೂರು ದಿನ ಮದ್ಯ ಮಾರಾಟ ನಿಷೇಧ: ಜಿಲ್ಲಾಧಿಕಾರಿ ಆದೇಶ

ಬೆಂಗಳೂರಿನಲ್ಲಿ ಫೆ.14ರಿಂದ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶಿಸಿದ್ದಾರೆ.

Liquor sale banned in Bengaluru for three days from Lovers Day February 14 sat
Author
First Published Feb 3, 2024, 7:59 PM IST

ಬೆಂಗಳೂರು (ಫೆ.03): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆ.14ರಿಂದ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶಿಸಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ-2024ರ ಹಿನ್ನೆಲೆಯಲ್ಲಿ ಚುನಾವಣೆಯು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಯಲು  ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ -10(ಬಿ) ರನ್ವಯ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 135(ಸಿ) ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮತದಾನದ ಪ್ರಯುಕ್ತ, ಫೆ. 14 ಸಂಜೆ 5.00 ಗಂಟೆಯಿಂದ ಫೆ.17 ಬೆಳಗ್ಗೆ 6.00 ಗಂಟೆಯವರಗೆ  ಬೆಂಗಳೂರು  ನಗರ ಜಿಲ್ಲೆಯಾದ್ಯಂತ (ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಹೊರತುಪಡಿಸಿ) ಪಾನನಿರೋಧ ದಿನ ಜಾರಿಗೊಳಿಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯಾದ್ಯಂತ ವಿಧದ ಮದ್ಯದ  ವಹಿವಾಟುಗಳನ್ನು ನಿಷೇಧಿಸಿ ಶುಷ್ಕ ದಿನಗಳೆಂದು  (Dry Day) ಘೋಷಣೆ ಮಾಡಿದ್ದಾರೆ.

ಹಿಂದು ಪದ ಅಶ್ಲೀಲವೆಂದ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ದಾಖಲಾಯ್ತು ಕ್ರಿಮಿನಲ್ ಕೇಸ್

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ:
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ  ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ಉಪ ಚುನಾವಣೆ-2024 ರ ಸಂಬಂಧ ದಿನಾಂಕ: 16.02.2024 ರಂದು ಮತದಾನ ನಡೆಯಲಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರ ಮತದಾರರಿಗೆ ಬಲಗೈನ ಮಧ್ಯದ ಬೆರಳಿಗೆ ಅಳಿಸಲಾಗದ  ಶಾಯಿಯನ್ನು  (Right Hand Middle Finger) ಹಚ್ಚಲಾಗುವುದೆಂದು  ಚುನಾವಣಾಧಿಕಾರಿ, ಬೆಂಗಳೂರು ಶಿಕ್ಷಕರ ಕೇತ್ರ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.23ರವರೆಗೆ ನೀತಿ ಸಂಹಿತೆ ಜಾರಿ:
ಈಗಾಗಲೇ ಜ.16 ರಿಂದ ಫೆ.23ರವರೆಗೆ  ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು,  ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಾದ 150–ಯಲಹಂಕ, 152-ಬ್ಯಾಟರಾಯನಪುರ, 153-ಯಶವಂತಪುರ, 155-ದಾಸರಹಳ್ಳಿ, 174-ಮಹದೇವಪುರ, 176-ಬೆಂಗಳೂರು ದಕ್ಷಿಣ ಮತ್ತು 177-ಆನೇಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸಂಬಂಧಪಟ್ಟಂತೆ ಸಾರ್ವಜನಿಕರ ದೂರು ಮತ್ತು ಕುಂದು ಕೊರತೆಗಳ ನಿವಾರಣೆಗಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24/7 ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ/ದೂರು ನಿವಾರಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಗಾಯಾಳು ಅಭಿಮಾನಿಗಳಿಗೆ ಗೊತ್ತಾಗದಂತೆ ತಲಾ 1 ಲಕ್ಷ ರೂ. ನೆರವು ನೀಡಿದ ರಾಕಿಂಗ್ ಸ್ಟಾರ್ ಯಶ್!

ಮತದಾರರು/ಸಾರ್ವಜನಿಕರು/ಸಂಘ ಸಂಸ್ಥೆಗಳು ಹಾಗೂ ಇತರರು ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ದೂರು /ಕುಂದುಕೊರತೆಗಳನ್ನು ಕಂಟ್ರೋಲ್ ರೂಂ/ ದೂರು ನಿವಾರಣಾ ಕೇಂದ್ರದಲ್ಲಿನ ಸಹಾಯವಾಣಿ/ದೂರವಾಣಿ ಸಂಖ್ಯೆ 080-22211106 ಅಥವಾ ಇ-ಮೇಲ್ deo.bangaloreu@gmail.com ಮೂಲಕ ಸಲ್ಲಿಸಬಹುದು. ಕಛೇರಿಯ ಸಾಮಾಜಿಕ ಮಾಧ್ಯಮ/ಜಾಲತಾಣಗಳಾದ ಫೇಸ್ ಬುಕ್ -Deputy Commissioner, Bengaluru Urban, ಇನ್ ಸ್ಟಾಗ್ರಾಮ್- dc_bangalore_urban, ಟ್ವಿಟರ್- DC_blrurban, ಮೂಲಕ ಕೂಡ ದೂರು  ಸಲ್ಲಿಸಬಹುದು ಎಂದು ಸಹಾಯಕ  ಚುನಾವಣಾಧಿಕಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ  ಜಿಲ್ಲಾಧಿಕಾರಿ ಕೆ.ದಯಾನಂದ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios