ಹಿಂದು ಪದ ಅಶ್ಲೀಲವೆಂದ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ದಾಖಲಾಯ್ತು ಕ್ರಿಮಿನಲ್ ಕೇಸ್

ಹಿಂದೂ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

Criminal case has been registered against Minister Satish Jarakiholi for using Hindu word obscenity sat

ಬೆಂಗಳೂರು (ಫೆ.03): ಹಿಂದೂ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ 2022ರ ನವೆಂಬರ್ 6ರಂದು ಬೆಳಗಾವಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸತೀಶ್ ಜಾರಕಿಹೊಳಿ ಅವರು ಹಿಂದು ಹಾಗೂ ಹಿಂದುತ್ವದ ಪದದ ಬಗ್ಗೆ ಮಾತನಾಡಿದ್ದರು. 'ಹಿಂದು ಎಂಬ ಪದ ಆಶ್ಲೀಲ, ಕೊಳಕು ಎಂಬ ಅರ್ಥ ನೀಡುತ್ತದೆ. ಹಿಂದುತ್ವ ಎಂಬುದು ಪರ್ಷಿಯನ್ ಪದವಾಗಿದ್ದು, ಅದಕ್ಕೂ ಭಾರತಕ್ಕೂ ಏನು ಸಂಬಂಧ ಹೇಳಿ? ನಾವು ಹಿಂದೂಗಳು ಎಂದು ಬೀಗುವ ಯುವಕರು ಗೂಗಲ್, ವಿಕಿಪೀಡಿಯಾದಲ್ಲಿ ಹಿಂದೂ ಎಂಬ ಪದದ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಆ ಪದದನಿಜವಾದ ಅರ್ಥ ಗೊತ್ತಾದಾಗ, ಅವರಿಗೆ ಹಿಂದುತ್ವ ನಮ್ಮದಲ್ಲ ಎಂದು ತಿಳಿಯುತ್ತದೆ. ಆಗ ಅದನ್ನು ಪೂಜ್ಯನೀಯ ಭಾವದಿಂದ ನೋಡುವುದನ್ನು ಬಿಡುತ್ತಾರೆ ಎಂದು ಹೇಳಿದ್ದರು.

ಹಿಂದು ಅಶ್ಲೀಲ ಪದ ಹೇಳಿಕೆ: ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದ ಜಾರಕಿಹೊಳಿ

ಇನ್ನು ಇದಾದ ಮೂರ್ನಾಲ್ಕು ದಿನಗಳ ನಂತರ ಕಾಂಗ್ರೆಸ್‌ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಒತ್ತಾಯದ ಮೇರೆಗೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ವಿಷಾದ ವ್ಯಕ್ತಪಡಿಸಿದ್ದರು. ಇದಾದ ನಂತರ ಈ ಬಗ್ಗೆ ಪೊಲೀಸ್‌ ಠಾಣೆಗಳಲ್ಲಿ ಬಿಜೆಪಿ ನಾಯಕರು, ಹಿಂದೂ ಕಾರ್ಯಕರ್ತರು ಹಾಗೂ ವಕೀಲ ದಿಲೀಪ್‌ ಕುಮಾರ್ ಎನ್ನುವವರು ದೂರು ದಾಖಲಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಇನ್ನು ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸತೀಶ್ ಜಾರಕಿಹೊಳಿ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲವು ದಾಖಲಿಸಿ ಈಗ ಲೋಕೋಪಯೋಗಿ ಸಚಿವರೂ ಆಗಿದ್ದಾರೆ. ಆದ್ದರಿಂದ ಕೀಲ ದಿಲೀಪ್ ಕುಮಾರ್ ಎಂಬುವವರು ನೀಡಿದ್ದ ಖಾಸಗಿ ದೂರಿನ ಪ್ರಕರಣದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಚಿವ ಜಾರಕಿಹೊಳಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶವನ್ನು ನೀಡಿದೆ.

ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಐಪಿಸಿ ಸೆಕ್ಷ 153, 500 ಅಡಿ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಆದೇಶಿಸಿದೆ. ಸತೀಶ್ ಜಾರಕಿಹೊಳಿ ವಿರುದ್ಧ ವಕೀಲ ದಿಲೀಪ್ ಕುಮಾರ್ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು. ಆದರೆ, ಮ್ಯಾಜಿಸ್ಟ್ರೇಟ್ ಕೋರ್ಟ್ ಖಾಸಗಿ ದೂರು ವಜಾ ಮಾಡಿತ್ತು. ನಂತರ, ಈ ಕುರಿತು ವಕೀಲರು ಸೆಷನ್ಸ್ ಕೋರ್ಟ್ ಗೆ ಮೇಲ್ವನವಿ ಸಲ್ಲಿಸಿದ್ದರು. ಈಗ ಸತೀಶ್ ಜಾರಕಿಹೊಳಿ ವಿರುದ್ದ ಕೇಸ್ ದಾಖಲಿಸಿ ಟ್ರಯಲ್ ನಡೆಸಲು ಆದೇಶ ನೀಡಲಾಗಿದೆ.

ಹಿಂದೂ ಪದ ವಿವಾದಾತ್ಮಕ ಹೇಳಿಕೆ: ಕೊನೆಗೂ ವಿಷಾದ ವ್ಯಕ್ತಪಡಿಸಿದ ಜಾರಕಿಹೊಳಿ!

ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಹಿಂದೂ ಪದವೆಂದರೆ ಅದು ಕೆಟ್ಟ ಅರ್ಥಗಳನ್ನು ಕೊಡುವಂಥ ಪದವಾಗಿದೆ. ಹಿಂದುತ್ವ ಎಂಬುದು ಪರ್ಷಿಯಾ ಮೂಲದ ಪದವಾಗಿದ್ದು, ಅದಕ್ಕೂ ನಮ್ಮ ಭಾರತಕ್ಕೂ ಏನು ಸಂಬಂಧ ಹೇಳಿ? ನಾವು ಹಿಂದೂಗಳು ಎಂದು ಬೀಗುವ ಇಂದಿನ ಯುವಕರು ತಮ್ಮ ವಾಟ್ಸ್ ಆ್ಯಪ್ ಗಳಲ್ಲಿ, ಗೂಗಲ್ ನಲ್ಲಿ, ವಿಕಿಪೀಡಿಯಾದಲ್ಲಿ ಹಿಂದೂ ಎಂಬ ಪದದ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಆ ಪದವನ್ನು ನಮ್ಮ ಮೇಲೆ ಏಕೆ ಬಲವಂತವಾಗಿ ಹೇರಿದರು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಅದರ ನಿಜವಾದ ಅರ್ಥ ಗೊತ್ತಾದಾಗ, ಅವರಿಗೆ ಹಿಂದುತ್ವ ನಮ್ಮದಲ್ಲ ಎಂದು ತಿಳಿಯುತ್ತದೆ. ಆಗ ಅದನ್ನು ಪೂಜ್ಯನೀಯ ಭಾವದಿಂದ ನೋಡುವುದನ್ನು ಬಿಡುತ್ತಾರೆ. ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios