ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ
ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಮಹತ್ವದ ಆದೇಶಹೊರಡಿಸಿದ್ದಾರೆ. ಮೂರು ದಿನಗಳ ಕಾಲ ತುಮಕೂರು ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ತುಮಕೂರು (ಮಾ.10): ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಮಾರ್ಚ್ 10ರಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.
ಚುನಾವಣಾ ದಿನಾಂಕದ 48 ಗಂಟೆಗಳ ಮೊದಲು (ಮಾರ್ಚ್ 8ರ ಸಂಜೆ 5 ಗಂಟೆಯಿಂದ 10 ರ ಸಂಜೆ 5 ಗಂಟೆಯವರೆಗೆ) ಹಾಗೂ ಮತ ಎಣಿಕೆ ನಡೆಯುವ ಮಾರ್ಚ್ 14ರ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಅನಂತಪುರ ಜಿಲ್ಲೆಗೆ ಹೊಂದಿಕೊಂಡಿರುವ ಕರ್ನಾಟಕ ಗಡಿ ಜಿಲ್ಲೆಯಲ್ಲಿ ಮದ್ಯ ನಿಷೇಧ ಮಾಡಲಾಗಿದೆ.
ತೈಲ, ಮದ್ಯಕ್ಕಿಲ್ಲ ಟ್ಯಾಕ್ಸ್.. ಮನೆ ಕಟ್ಟೋರಿಗೆ ಗುಡ್ ನ್ಯೂಸ್, 'ಕರ ಸಮಾಧಾನ ಯೋಜನೆ' ತಿಳಿದುಕೊಳ್ಳಿ ..
ಇಲ್ಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯದ ವಹಿವಾಟು ನಿಷೇಧಿಸಿ ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಆದೇಶ ನೀಡಿದ್ದಾರೆ.