ತೈಲ, ಮದ್ಯಕ್ಕಿಲ್ಲ ಟ್ಯಾಕ್ಸ್.. ಮನೆ ಕಟ್ಟೋರಿಗೆ ಗುಡ್ ನ್ಯೂಸ್, 'ಕರ ಸಮಾಧಾನ ಯೋಜನೆ' ತಿಳಿದುಕೊಳ್ಳಿ

ಬಜೆಟ್  ಮಂಡಿಸಿದ ಸಿಎಂ ಬಿಎಸ್ ಯಡಿಯೂರಪ್ಪ/ ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆ/ ಸಮತೋಲಿತ ಬಜೆಟ್ ಎಂದ ಸಿಎಂ/ ಸವಾಲುಗಳ ನಡುವೆ ಎಲ್ಲ ಕ್ಷೇತ್ರಕ್ಕೂ ಅನುದಾನ ನೀಡಿದ್ದೇವೆ/  ಹೊಸ ತೆರಿಗೆ ಯಾವುದು ಇಲ್ಲ/ ಸಮತೋಲನ ತಂದಿದ್ದು ಹೇಗೆ? 

Karnataka Budget 2021 no new taxes mah

ಬೆಂಗಳೂರು(ಮಾ.  08)   ಕೇಂದ್ರ ಸರ್ಕಾರದ ಬಜೆಟ್ ನಂತರ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಸಹ ವಿವಿಧ ತೆರಿಗೆಗಳನ್ನು ಏರಿಕೆ ಮಾಡಬಹುದು ಎಂಬ ಭಯ ಇತ್ತು. ಆದರೆ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಿದ್ದು ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ.

ಕೊರೋನಾ ಕಾರಣಕ್ಕೆ ಜನ ಸಂಕಷ್ಟದಲ್ಲಿದ್ದು ಯಾವ ವಲಯದ ಮೇಲೆಯೂ ತೆರಿಗೆ  ಹಾಕಿಲ್ಲ.  ಪೆಟ್ರೋಲ್ ಮತ್ತೆ ಡೀಸೆಲ್ ಮೇಲೆ ವಿಧಿಸುವ ಕರ್ನಾಟಕ ಮಾರಾಟ ತೆರಿಗೆ(KST) ಯಲ್ಲಿ ಯಾವ ಬದಲಾವಣೆ ಮಾಡಲಾಗಿಲ್ಲ.

ಜಿಎಸ್‌ಟಿ ಪೂರ್ವದ ಲೆಕ್ಕ ಪರಿಶೋಧನೆಗಳನ್ನು ಪೂರ್ಣ ಗೊಳಿಸುವ ಹಾಗೂ ತೆರಿಗೆ ಬಾಕಿಯನ್ನು ತ್ವರಿತ ಗತಿಯಲ್ಲಿ ವಸೂಲು ಮಾಡಲು ಜಿಎಸ್‌ಟಿ ಪೂರ್ವದ  ಕಾಯ್ದೆಗಳಿಗೆ ಸಂಬಂಧಿಸಿ 'ಕರ ಸಮಾಧಾನ ಯೋಜನೆ- 2021'  ಜಾರಿ ಮಾಡಲಾಗುತ್ತಿದೆ.

ಬಜೆಟ್ ಪೂರ್ಣ ವಿವರ ಇಲ್ಲಿದೆ

ಈ ಸಾಲಿಗೆ ಸಂಬಂಧಿಸಿ  ವಾಣಿಜ್ಯ ತೆರಿಗೆ ಇಲಾಖೆಗೆ  76,473  ಕೋಟಿ. ರೂ. ತೆರಿಗೆ ಸಂಗ್ರಹ ಗುರಿ ಇಟ್ಟುಕೊಳ್ಳಲಾಗಿದೆ. ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ ಪ್ರೋತ್ಸಾಹಿಸಲು 35-45  ಲಕ್ಷ ರೂ. ಮೌಲ್ಯದ ಅಪಾರ್ಟ್ ಮೆಂಟ್ ಮೊದಲನೆ ನೋಂದಣಿ ಮುದ್ರಾಂಕ ಶುಲ್ಕ ಶೇ. 5 ರಿಂದ ಶೇ.  3ಕ್ಕೆ ಇಳಿಕೆ ಮಾಡಲಾಗಿದೆ. ಮುದ್ರಾಂಕ ಇಲಾಖೆಯಿಂದ 12,655 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನು ಅಬಕಾರಿ ಇಲಾಖೆಯಿಂದ 24,580 ಕೋಟಿ ರೂ. ಸಾರಿಗೆ ಇಲಾಖೆಯಿಂದ 7,515  ಕೋಟಿ ರೂ ರಾಜಸ್ವ ಸಂಗ್ರಹಣೆ ಗುರಿ ಹೊಂದಲಾಗಿದೆ. ರೈತರಿಗೂ ಸಹ ತೆರಿಗೆ ರಹಿತವಾಗಿ ಡಿಸೇಲ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

"

 

Latest Videos
Follow Us:
Download App:
  • android
  • ios