Asianet Suvarna News Asianet Suvarna News

ಸೆ.8 ರಂದು ಬೆಂಗಳೂರಿನ 3 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ

ಬೆಂಗಳೂರು ನಗರದ ಸೇಂಟ್ ಮೇರಿ ಚರ್ಚ್ ನ ಆರೋಗ್ಯ ಮಾತೆ ವಾರ್ಷಿಕ ಮಹೋತ್ಸವ ಹಿನ್ನೆಲೆ ನಾಳೆ ಶಿವಾಜಿ ನಗರ, ಭಾರತೀನಗರ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

liquor sale Ban in Bengaluru Three Police Station Limits  due to Saint Mary annual festival gow
Author
First Published Sep 7, 2022, 7:51 PM IST

ಬೆಂಗಳೂರು (ಸೆ.7): ಬೆಂಗಳೂರು ನಗರದ ಸೇಂಟ್ ಮೇರಿ ಚರ್ಚ್ ನ ಆರೋಗ್ಯ ಮಾತೆ ವಾರ್ಷಿಕ ಮಹೋತ್ಸವ ಹಿನ್ನೆಲೆ ನಾಳೆ ಶಿವಾಜಿ ನಗರ, ಭಾರತೀನಗರ ಹಾಗೂ ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಆರೋಗ್ಯ ಮಾತೆಯ ವಾರ್ಷಿಕ ಮಹೋತ್ಸವ ಮೆರೆವಣಿಗೆಗೆ ಲಕ್ಷಾಂತರ ಮಂದಿ ಸೇರಲಿದ್ದು, ಇದೇ ವೇಳೆ ಆರೋಗ್ಯ ಮಾತೆಯ ಬೃಹತ್ ರಥೋತ್ಸವ ಸಹ ನಡೆಯಲಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಧ್ಯ ಮಾರಾಟ ನಿಷೇಧ ಹೇರಲಾಗಿದೆ. ಹೀಗಾಗಿ ಮೂರು ಠಾಣಾ ವ್ಯಾಪ್ತಿಯ ಬಾರ್ ಅಂಡ್ ರೆಸ್ಟೋರೆಂಟ್ , ವೈನ್ ಶಾಪ್, ಪಬ್‌ಗಳು ಸೇರಿ ಎಲ್ಲಾ ಮಧ್ಯಮಾರಾಟ ಮಳಿಗೆಗಳು ಬಂದ್ ಆಗಲಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ರ ವರೆಗೂ ಮಧ್ಯ ಮಾರಾಟ ನಿಷೇಧ ಹೇರಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯಿಂದ ಆದೇಶ ಹೊರಡಿಸಿದ್ದಾರೆ. ಇನ್ನು ಮಹೋತ್ಸವ  ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೂಡ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.

ಇನ್ನು ಬೆಂಗಳೂರು ಈ ವರ್ಷ ಆಗಸ್ಟ್ 31 ರಿಂದ ಸೆಪ್ಟೆಂಬರ್ 9 ರವರೆಗೆ ಗಣೇಶೋತ್ಸವವನ್ನು ಆಚರಿಸುತ್ತಿದೆ. ಇದುವರೆಗೆ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ಅಧಿಸೂಚಿತ ಕೆರೆಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಪಿಸಿದ ಮೊಬೈಲ್ ಟ್ಯಾಂಕರ್‌ಗಳಲ್ಲಿ ವಿಸರ್ಜನೆ ಮಾಡಲಾಗಿದೆ.

Viral Video: ಮದ್ಯದಂಗಡಿ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು: ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು

ನಗರದಲ್ಲಿರುವ 35 ಕೆರೆಗಳಲ್ಲಿ ಹಲವಾರು ಕೃತಕ ತೊಟ್ಟಿಗಳನ್ನು ಮತ್ತು ಪುರಸಭೆ ವ್ಯಾಪ್ತಿಯ ಎಂಟು ವಲಯಗಳಲ್ಲಿ 150 ಕ್ಕೂ ಹೆಚ್ಚು ತಾತ್ಕಾಲಿಕ ಕೊಳಗಳನ್ನು ನಾಗರಿಕ ಅಧಿಕಾರಿಗಳು ಸ್ಥಾಪಿಸಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಬಳಕೆಯನ್ನು ನಿಷೇಧಿಸಿದ್ದರೂ ಸಹ, ಈ ದಿನಗಳಲ್ಲಿ ಸಾವಿರಾರು ಪಿಒಪಿ ನಿರ್ಮಿತ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗಿದೆ. ಇನ್ನು ಯಾವ ಯಾವ ಏರಿಯಾಗಳಲ್ಲಿ ಸೆಪ್ಟೆಂಬರ್ 9 ರವರೆಗೆ ಗಣೇಶ ಇಡಲಿದ್ದಾರೋ ಅಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

Delhi Liquor Policy Case: 'ಸ್ಟಿಂಗ್ ಆಪರೇಷನ್' ವಿಡಿಯೋ ಹಂಚಿಕೊಂಡ ಬಿಜೆಪಿ

ಬೀರಿಹುಂಡಿ ಗೇಟ್‌ ಬಳಿ ಮದ್ಯ ವಶ
ಮೈಸೂರು: ಬೀರಿಹುಂಡಿ ಗ್ರಾಮದ ಗೇಟ್‌ ಬಳಿ ಕೊಠಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಮೈಸೂರು ಗ್ರಾಮಾಂತರ ಪ್ರದೇಶಗಳಲ್ಲಿ ಸಾಮೂಹಿಕ ಗೌರಿಗಣೇಶ ವಿಸರ್ಜನೆ ಪ್ರಯುಕ್ತ ಜಿಲ್ಲಾಧಿಕಾರಿಗಳು ಒಣದಿನ ಘೋಷಿಸಿದ ಹಿನ್ನೆಲೆ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಮೈಸೂರು ಗದ್ದಿಗೆ ರಸ್ತೆಯ ಸುತ್ತಮುತ್ತ ಗಸ್ತು ನಡೆಸುತ್ತಿದ್ದ ವೇಳೆ ಕೊಠಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಸಂಗ್ರಹಿಸಿದ್ದ ಒಟ್ಟು 71.555 ಮೌಲ್ಯದ 155.160 ಲೀ ಮದ್ಯ ಹಾಗೂ 22.750 ಲೀಟರ್‌ ಬಿಯರ್‌ ಅನ್ನು ಇಲಾಖಾ ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದೆ. ಕಾರ್ಯಾಚರಣೆಯಲ್ಲಿ ಡಿ.ಸಿ. ಸ್ಕಾ$್ವಡ್‌ನ ಅಬಕಾರಿ ನಿರೀಕ್ಷಕ ಸಂತೋಷ್‌ಕುಮಾರ್‌, ಪೇದೆ ಲೋಕೇಶ್‌ ಹಾಗೂ ವಾಹನ ಚಾಲಕ ಮಂಜು ಇದ್ದರು.

Follow Us:
Download App:
  • android
  • ios