Viral Video: ಮದ್ಯದಂಗಡಿ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು: ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು
Thieves break into liquor shop Viral Video: ಮದ್ಯದಂಗಡಿಯ ಗೋಡೆ ಕೊರೆದು ಒಳಗ ನುಗ್ಗಿ ಅಲ್ಲಿದ್ದ ಮದ್ಯ ಸೇವಿಸಿ ಮೈಮರೆತಿದ್ದ ಖತರ್ಕಾನಕ್ ಕಳ್ಳರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ
ಚೆನ್ನೈ (ಸೆ. 05): ಮದ್ಯದಂಗಡಿಯ ಗೋಡೆ ಕೊರೆದು ಒಳಗ ನುಗ್ಗಿ ಅಲ್ಲಿದ್ದ ಮದ್ಯ ಸೇವಿಸಿ ಮೈಮರೆತಿದ್ದ ಖತರ್ಕಾನಕ್ ಕಳ್ಳರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ರಸ್ತೆಯ ಬಳಿ ಬಿದ್ದಿದ್ದ ಹಾರ್ಡ್ ಡಿಸ್ಕ್ ಮತ್ತು ಮುರಿದ ಕ್ಯಾಶ್ ಬಾಕ್ಸ್‌ನಿಂದ ತಮಿಳುನಾಡು ಪೊಲೀಸರಿಗೆ ಇಬ್ಬರು ಕಳ್ಳರು ಮದ್ಯದ ಅಂಗಡಿಗೆ ನುಗ್ಗಲು ಗೋಡೆಯ ಮೇಲೆ ರಂಧ್ರವನ್ನು ಕೊರೆದಿದ್ದು ಪತ್ತೆಯಾಗಿದೆ. ತಿರುವಳ್ಳೂರು ಜಿಲ್ಲೆಯ ಕವರೈಪೆಟ್ಟೈ ಬಳಿಯ ತಾಂಡಲಚೇರಿಯಲ್ಲಿ ಅಂಗಡಿಯೊಳಗೆ ಇಬ್ಬರು ವ್ಯಕ್ತಿಗಳು ಮದ್ಯ ಸೇವಿಸುತ್ತಿರುವುದನ್ನು ಕಂಡ ಸ್ಪೇಷಲ್ ಸಬ್ ಇನ್ಸ್‌ಪೆಕ್ಟರ್ ರವಿ ಮತ್ತು ಹೋಮ್‌ಗಾರ್ಡ್ ಜೋತಿ ಅವರು ಹೆದ್ದಾರಿ ಗಸ್ತು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಪೊಲೀಸರು ಕಳ್ಳರನ್ನು ಹೊರಗೆ ಬರುವಂತೆ ಕೇಳುತ್ತಿದ್ದಾರೆ ಮತ್ತು ಇಬ್ಬರೂ ಒಬ್ಬರ ನಂತರ ಒಬ್ಬರಂತೆ ಸಣ್ಣ ರಂಧ್ರದ ಮೂಲಕ ತೆವಳುತ್ತಿರುವುದನ್ನು ಕಾಣಬಹುದು.
ಇಬ್ಬರಿಂದ ಸುಮಾರು 6,300 ರೂಪಾಯಿ ನಗದು ಮತ್ತು ಮದ್ಯದ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಅವರನ್ನು ಪಲ್ಲಿಕರನೈ ಮೂಲದ ಸತೀಶ್ (34) ಮತ್ತು ಚೆನ್ನೈನ ಪೆರುಂಬಕ್ಕಂನ ಮುನಿಯನ್ (32) ಎಂದು ಗುರುತಿಸಲಾಗಿದೆ. ಅಲ್ಲದೇ ಇಬ್ಬರೂ ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲಿನಲ್ಲಿ ಒಟ್ಟಿಗೆ ಕಾಲ ಕಳೆದಿದ್ದರು ಎಂದು ವರದಿಗಳು ತಿಳಿಸಿವೆ.
4 ಕೋಟಿ ಚಿನ್ನಾಭರಣ ಕದ್ದ ಕಳ್ಳರು, 40 ರೂಪಾಯಿ ಪೇಟಿಎಂ ಮಾಡಿ ಸಿಕ್ಕಿಬಿದ್ರು!
"ಸತೀಶ್ ಮತ್ತು ಮುನಿಯನ್ ಸೆಪ್ಟೆಂಬರ್ 3 ರಂದು ರಾತ್ರಿ ಅದೇ ಅಂಗಡಿಯ ಬಳಿ ಮದ್ಯ ಸೇವಿಸಿ ಅಂಗಡಿ ಮುಚ್ಚುವವರೆಗೆ ಕಾದಿದ್ದಾರೆ. ಮಧ್ಯರಾತ್ರಿಯ ಸುಮಾರಿಗೆ ಅವರು ಗೋಡೆಯ ಮೇಲೆ ರಂಧ್ರವನ್ನು ಕೊರೆದು ಅಂಗಡಿಯನ್ನು ಪ್ರವೇಶಿಸಿದ್ದಾರೆ. ಬಳಿಕ ಇಬ್ಬರೂ ಅಂಗಡಿಯಲ್ಲಿದ್ದ ಹಾರ್ಡ್ ಡಿಸ್ಕ್ ಮತ್ತು ಕ್ಯಾಶ್ ಬಾಕ್ಸನ್ನು ಮುರಿದಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 457 (ರಾತ್ರಿ ಮನೆ ಒಡೆಯುವುದು) ಮತ್ತು 380 (ವಾಸದ ಮನೆಯಲ್ಲಿ ಕಳ್ಳತನ ಇತ್ಯಾದಿ) ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ಸೆಪ್ಟೆಂಬರ್ 4 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.