ಮೈಸೂರು(ಡಿ.01): ಹುಣಸೂರು ವಿಧಾನಸಭಾ ಕ್ಷೇತ್ರಕ್ಕೂ ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ನಂಟಿದೆ. ಏಕೆಂದರೆ, ಅಲ್ಲಿನ ಶಾಸಕರಾಗಿದ್ದ ಮೂವರು ಲೋಕಸಭಾ ಸದಸ್ಯರಾಗಿದ್ದಾರೆ. ಇನ್ನೂ ನಾಲ್ವರು ಲೋಕಸಭೆಗೆ ಹೋಗುವ ಪ್ರಯತ್ನ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದವರೇ ಲೋಕಸಭಾ ಚುನಾವಣೆಗಳಲ್ಲೂ ಪರಸ್ಪರ ಸೆಣಸಾಡಿರುವುದು ವಿಶೇಷ.

ಚಂದ್ರಪ್ರಭ- ಎಸ್‌.ಚಿಕ್ಕಮಾದು, ಜಿ.ಟಿ.ದೇವೇಗೌಡ- ಪಿ.ಗೋವಿಂದರಾಜು, ಸಿ.ಎಚ್‌. ವಿಜಯಶಂಕರ್‌- ಎಸ್‌.ಚಿಕ್ಕಮಾದು- ಜಿ.ಟಿ. ದೇವೇಗೌಡ, ಸಿ.ಎಚ್‌. ವಿಜಯಶಂಕರ್‌- ಬಿ.ಎಸ್‌.ಮರಿಲಿಂಗಯ್ಯ, ಸಿ.ಎಚ್‌.ವಿಜಯಶಂಕರ್‌- ಎಚ್‌.ವಿಶ್ವನಾಥ್‌ ಎದುರಾಳಿಗಳಾಗಿದ್ದರು.

ಮಂಡ್ಯ: ಜೆಡಿಎಸ್‌, ಬಿಜೆಪಿ ಕಾರ‍್ಯಕರ್ತರ ಹೊಡೆದಾಟ

ವಿಧಾನಸಭಾ ಉಪ ಚುನಾವಣೆಯಲ್ಲಿ ಎಸ್‌.ಚಿಕ್ಕಮಾದು ಅವರು ಸಿ.ಎಚ್‌.ವಿಜಯಶಂಕರ್‌ ಅವರನ್ನು ಸೋಲಿಸಿದ್ದರು, ಲೋಕಸಭಾ ಚುನಾವಣೆಯಲ್ಲಿ ಉಲ್ಟಾಪಲ್ಟಾ!. 2009ರ ಲೋಕಸಭಾ ಚುನಾವಣೆಯಲ್ಲಿ ಎಚ್‌. ವಿಶ್ವನಾಥ್‌ ಎದುರು ಸೋತಿದ್ದ ಸಿ.ಎಚ್‌. ವಿಜಯಶಂಕರ್‌ ಈಗಿನ ಉಪ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ!. ಏಕೆಂದರೆ, ವಿಶ್ವನಾಥ್‌ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿ ಅಲ್ಲಿಂದ ಬಿಜೆಪಿಗೆ ಬಂದಿದ್ದಾರೆ. ವಿಜಯಶಂಕರ್‌ ಕೂಡ ಕಾಂಗ್ರೆಸ್‌ಗೆ ಹೋಗಿ ಮರಳಿ ಬಿಜೆಪಿಗೆ ಬಂದಿದ್ದಾರೆ.

ಹುಣಸೂರಿನಿಂದ 1983ರಲ್ಲಿ ಜನತಾಪಕ್ಷ, 1989ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಯ್ಕೆಯಾಗಿ 1994, 1999ರಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿ ಸೋತ ಚಂದ್ರಪ್ರಭ ಅರಸು ಅವರು 1991ರಲ್ಲಿ ಲೋಕಸಭೆಗೆ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು.

ಬಿಜೆಪಿ ಟಿಕೆಟ್‌ ಮೇಲೆ 1991ರ ಉಪ ಚುನಾವಣೆಯಲ್ಲಿ ಸೋತು 1994ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದ ಸಿ.ಎಚ್‌.ವಿಜಯಶಂಕರ್‌ 1998 ಹಾಗೂ 2004ರಲ್ಲಿ ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1999, 2009ರಲ್ಲಿ ಬಿಜೆಪಿ, 2019ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತರು.

ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಿಂದ 2009ರಲ್ಲಿ ಗೆದ್ದು, 2014ರಲ್ಲಿ ಸೋತ ಎಚ್‌.ವಿಶ್ವನಾಥ್‌ 2018ರಲ್ಲಿ ಹುಣಸೂರಿನಿಂದ ಜೆಡಿಎಸ್‌ ಟಿಕೆಟ್‌ ಮೇಲೆ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಕೊಡಿ: ಎಬಿವಿಪಿ ಒತ್ತಾಯ

1978, 1983ರಲ್ಲಿ ಪಕ್ಷೇತರರಾಗಿ ಹುಣಸೂರು ವಿಧಾನಸಭಾ ಕ್ಷೇತ್ರ, 1980ರಲ್ಲಿ ಪಕ್ಷೇತರ ಹಾಗೂ 1998ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣದಲ್ಲಿದ್ದ ಎಸ್‌.ಚಿಕ್ಕಮಾದು 1991ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಗೆದ್ದಿದ್ದರು. 1999 ರಲ್ಲಿ ಬಂಡಾಯ, 2004ರಲ್ಲಿ ಕಾಂಗ್ರೆಸ್‌, 2008ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸೋತರು.

1996 ಹಾಗೂ 1998ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿದ್ದ ಜಿ.ಟಿ.ದೇವೇಗೌಡರು 1998ರ ಉಪ ಚುನಾವಣೆಯಲ್ಲಿ ಹುಣಸೂರಿನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. 2004ರಲ್ಲಿ ಜೆಡಿಎಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿ, 2008 ರಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ, ಸೋತಿದ್ದರು.

ಹೆಣ್ಣು ಶಿಶು ಎಂದು 8 ದಿನದ ಹಸುಳೆಯನ್ನೇ ಭೀಕರವಾಗಿ ಕೊಂದ ಅಜ್ಜಿ!

1994 ರಲ್ಲಿ ಹುಣಸೂರಿನಿಂದ ಕೆಸಿಪಿ ಅಭ್ಯರ್ಥಿಯಾಗಿದ್ದ ಪಿ.ಗೋವಿಂದರಾಜು 1996ರಲ್ಲಿ ಮೈಸೂರಿನಿಂದ ಲೋಕಸಭೆಗೆ ಅದೇ ಪಕ್ಷದ ಅಭ್ಯರ್ಥಿಯಾಗಿದ್ದರು. 1999 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಬಿ.ಎಸ್‌. ಮರಿಲಿಂಗಯ್ಯ 2004ರಲ್ಲಿ ಹುಣಸೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು.

-ಅಂಶಿ ಪ್ರಸನ್ನಕುಮಾರ್‌