ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಶುರು: ಕೂಡಲ ಶ್ರೀ

ರಾಜ್ಯದಲ್ಲಿ ಈಗಷ್ಟೇ ಸರ್ಕಾರ ರಚನೆಯಾಗಿದ್ದು, ತೀರಾ ಈಚೆಗಷ್ಟೇ ಬಜೆಟ್‌ ಮುಗಿಸಿದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟದ ಬಗ್ಗೆ ನಮ್ಮ ಸಮಾಜದ ಶಾಸಕರು, ಮುಖಂಡರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ಹಂತದ ಹೋರಾಟ ಯಾವ ರೀತಿ ಮಾಡಬೇಕೆಂಬ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಹೇಳಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ 

Lingayat Separate Religion Struggle Starts Again in Karnataka Says Jayamrutunjaya Swamiji grg

ದಾವಣಗೆರೆ(ಜು.24): ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಶ್ರಾವಣ ಮಾಸದಿಂದ ಮತ್ತೆ ಶುರು ಮಾಡಲಿದ್ದು ಸಮಾಜದ ಶಾಸಕರು, ಮುಖಂಡರ ಜೊತೆಗೂ ಚರ್ಚೆ ನಡೆಸಿದ್ದೇವೆ ಎಂದು ಕೂಡಲ ಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಪ್ರೇರಣಾ ಸಂಸ್ಥೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಪುನರಾರಂಭವಾಗಲಿದ್ದು, ಶ್ರಾವಣ ಮಾಸದಿಂದಲೇ ನಮ್ಮ ಹೋರಾಟ ಶುರುವಾಗಲಿದೆ ಎಂದರು.

ಮೀಸಲಾತಿ ಏನು ಎಂಬುವುದು ಗೊತ್ತಾಗುತ್ತಿಲ್ಲ: ಕೂಡಲ ಶ್ರೀ

ರಾಜ್ಯದಲ್ಲಿ ಈಗಷ್ಟೇ ಸರ್ಕಾರ ರಚನೆಯಾಗಿದ್ದು, ತೀರಾ ಈಚೆಗಷ್ಟೇ ಬಜೆಟ್‌ ಮುಗಿಸಿದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟದ ಬಗ್ಗೆ ನಮ್ಮ ಸಮಾಜದ ಶಾಸಕರು, ಮುಖಂಡರೊಂದಿಗೆ ಚರ್ಚಿಸಿದ್ದೇನೆ. ಮುಂದಿನ ಹಂತದ ಹೋರಾಟ ಯಾವ ರೀತಿ ಮಾಡಬೇಕೆಂಬ ಬಗ್ಗೆ ಚರ್ಚೆಯಾಗಬೇಕಿದೆ ಎಂದು ಹೇಳಿದರು.

ನಮ್ಮ ಬೇಡಿಕೆ ಈಡೇರಿಸುವಂತೆ ಜನಾಂದೋಲನವಾಗಿ ಹೋರಾಟ ಮಾಡಬೇಕೆಂಬ ಚರ್ಚೆ ಮಾಡುತ್ತಿದ್ದೇವೆ. ಕಾನೂನು ತಜ್ಞರ ಜೊತೆಗೆ ಈಗಾಗಲೇ ಚರ್ಚಿಸಿದ್ದೇನೆæ. ಹಿಂದಿನ ಮೀಸಲಾತಿ ವಿಚಾರ ಸುಪ್ರೀಂ ಕೋರ್ಚ್‌ನಲ್ಲಿದೆ. ಅದನ್ನು ಸರಿಪಡಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

ಮೀಸಲಾತಿ ನಮ್ಮ ಹಕ್ಕು ಪಡದೇ ತಿರುತ್ತೇವೆ: ಕೂಡಲ ಶ್ರೀ

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಇತ್ತೀಚೆಗೆ ಭೇಟಿಯಾಗಿದ್ದಾಗ ಬಜೆಟ್‌ ಅಧಿವೇಶನದ ನಂತರ ತಿಳಿಸುತ್ತೇವೆಂಬುದಾಗಿ ಪ್ರತಿಕ್ರಿಯಿಸಿದ್ದರು. ಶನಿವಾರವಷ್ಟೇ ಬಜೆಟ್‌ ಅಧಿವೇಶನ ಮುಗಿದಿದೆ. ನಾವೂ ಮುಖ್ಯಮಂತ್ರಿಯವರ ಅಭಿಪ್ರಾಯಕ್ಕೆ ಕಾಯುತ್ತಿದ್ದೇವೆ. ಹಿಂದಿನ ಸರ್ಕಾರ ನಮಗೆ 2 ಡಿ ಮೀಸಲಾತಿ ನೀಡಿದ್ದ ವಿಚಾರ ಈಗ ಸುಪ್ರೀಂ ಕೋರ್ಚ್‌ನಲ್ಲಿದೆ. ಸಿದ್ದರಾಮಯ್ಯನವರು 2ಎ ಮೀಸಲಾತಿಗೆ ಇರುವ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಲೋಕಸಭೆ ಚುನಾವಣೆ-2024ರ ಘೋಷಣೆಯಾಗುವುದರ ಒಳಗಾಗಿ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮನವಿ ಮಾಡಿದ್ದೇವೆ. ಕಾನೂನು ತಜ್ಞರ ಜೊತೆ ಸಭೆ ನಡೆಸಿ, ತೀರ್ಮಾ ನಿಸುವ ಭರವಸೆ ಸಿಕ್ಕಿದೆ. ಆದಷ್ಟುಬೇಗನೆ ಮುಖ್ಯಮಂತ್ರಿಗಳು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಹೇಳಿದರು.

Latest Videos
Follow Us:
Download App:
  • android
  • ios