ಮೀಸಲಾತಿ ಏನು ಎಂಬುವುದು ಗೊತ್ತಾಗುತ್ತಿಲ್ಲ: ಕೂಡಲ ಶ್ರೀ
ನಿಜವಾದ ಹೋರಾಟ ಮಾಡಿದವರು ಪಂಚಮಸಾಲಿಗಳು. ಕಳೆದ 2 ವರ್ಷದಿಂದ ಮನೆ, ಮಠಗಳನ್ನು ಬಿಟ್ಟು ಹೋರಾಟ ಮಾಡಿದ್ದೇವೆ. ನಮ್ಮ ಪಾಲು ಎಷ್ಟು ಎಂದು ಸ್ಪಷ್ಟತೆ ಇಲ್ಲ: ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ
ವಿಜಯಪುರ(ಜ.01): ಮೀಸಲಾತಿ ತುಪ್ಪವನ್ನು ಸರ್ಕಾರ ಮೂಗಿಗೆ ಸುರಿದಿದ್ದರೆ ವಾಸನೆಯಾದರೂ ನೋಡಬಹುದಿತ್ತು. ಆದರೆ, ಸರ್ಕಾರ ತಲೆಗೆ ತುಪ್ಪ ಸುರಿದಿದೆ. ಹಾಗಾಗಿ ಅದು ಏನು? ಎಂದು ಗೊತ್ತಾಗುತ್ತಿಲ್ಲ. ಪಂಚಮಸಾಲಿಗಳು ಗೊಂದಲದಲಿದ್ದೇವೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಡಿ.29ಕ್ಕೆ ಮೀಸಲಾತಿ ನೀಡಿದೆ. ಎಲ್ಲ ಲಿಂಗಾಯತರನ್ನು 2ಡಿ ಒಳಗೆ ಸೇರಿಸಿದೆ. ಇದು ಬಹಳ ಸಂತೋಷ. ನಮ್ಮ ಹೋರಾಟದಿಂದ ಎಲ್ಲ ಪಂಚಮಸಾಲಿಗಳಿಗೂ ಒಳ್ಳೆಯದಾಗಿದೆ. ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ ನಿಜವಾದ ಹೋರಾಟ ಮಾಡಿದವರು ಪಂಚಮಸಾಲಿಗಳು. ಕಳೆದ 2 ವರ್ಷದಿಂದ ಮನೆ, ಮಠಗಳನ್ನು ಬಿಟ್ಟು ಹೋರಾಟ ಮಾಡಿದ್ದೇವೆ. ನಮ್ಮ ಪಾಲು ಎಷ್ಟು ಎಂದು ಸ್ಪಷ್ಟತೆ ಇಲ್ಲ ಎಂದಿದ್ದಾರೆ.
2023ರಲ್ಲಿ ಬದಲಾವಣೆ ಆಗುತ್ತೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುತ್ತೆ: ಡಿಕೆಶಿ
ನಾವು ದುಡಿದಿದ್ದಕ್ಕೆ ಸರ್ಕಾರ ಪ್ರತಿಫಲ ಕೊಡಲಿಲ್ಲ. ಪಂಚಮಸಾಲಿ ಸಮಾಜ ಗೊಂದಲದಲ್ಲಿದೆ. ಇನ್ನು 2 ದಿನಗಳಲ್ಲಿ ನಾವು ಬೆಳಗಾವಿಯಲ್ಲಿ ರಾಜ್ಯಮಟ್ಟದ ಪಂಚಮಸಾಲಿ ಕಾರ್ಯಕಾರಣಿ ಸಭೆ ಕರೆಯುತ್ತೇವೆ. ಈ ಮೀಸಲಾತಿ ಸ್ವೀಕರಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಅಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದರು.