Asianet Suvarna News Asianet Suvarna News

ಕೊಡಗಿನಲ್ಲಿ ಮಳೆ ಇಲ್ಲದಿದ್ದರೂ ಇಡೀ ಊರಿಗೆ ಸಿಡಿಲು ಬಡಿದ ಅನುಭವ, ಭಾರೀ ಶಬ್ಧದೊಂದಿಗೆ ಭೂಮಿ ಛಿದ್ರ!

ಮಡಿಕೇರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಭಾರೀ ಶಬ್ಧದೊಂದಿಗೆ ಭೂಮಿಯೇ ಛಿದ್ರವಾದಂತೆ ಆಗಿರುವುದು ಇಡೀ ಆ ಗ್ರಾಮವನ್ನೇ ಆತಂಕಕ್ಕೆ ದೂಡಿದೆ.

lightning slits ground leaves villagers scared in madikeri at Kodagu gow
Author
First Published May 12, 2024, 3:37 PM IST | Last Updated May 12, 2024, 3:37 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮೇ.12): ಮಡಿಕೇರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಭಾರೀ ಶಬ್ಧದೊಂದಿಗೆ ಭೂಮಿಯೇ ಛಿದ್ರವಾದಂತೆ ಆಗಿರುವುದು ಇಡೀ ಆ ಗ್ರಾಮವನ್ನೇ ಆತಂಕಕ್ಕೆ ದೂಡಿದೆ. ಹೌದು ಕೊಡಗು ಜಿಲ್ಲೆಯ ಕಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಬೆಳ್ಳಚ್ಚು ಎಂಬ ಪ್ರದೇಶದಲ್ಲಿ ನಿನ್ನೆ ಸಂಜೆ ಭಾರೀ ಶಬ್ಧದೊಂದಿಗೆ ಭೂಮಿ ಛಿದ್ರವಾಗಿದ್ದು ಅದರ ರಭಸಕ್ಕೆ ಪಕ್ಕದಲ್ಲಿಯೇ ಇರುವ ತಿಮ್ಮಪ್ಪ ಎಂಬುವರ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಸಿಡಿಲು ಬಡಿದೆ ಎಂದುಕೊಳ್ಳೋಣ ಎಂದರೆ ಒಂದು ಹನಿ ಕೂಡ ಮಳೆ ಇರಲಿಲ್ಲ. ಆದರೆ ಎರಡು ಮರಗಳ ಬುಡದಲ್ಲಿ ಸುಟ್ಟುಹೋಗಿರುವ ಗುರುತ್ತು ಮಾತ್ರವಿದ್ದು, ಭೂಮಿ ಮಾತ್ರ ಛಿದ್ರವಾಗಿದೆ. ಛಿದ್ರವಾದ ಜಾಗದಿಂದ ಹಾರಿದ ಮಣ್ಣು ಮನೆಗಳಿಗೂ ಬಡಿದಿದೆ. ಆ ರಭಸಕ್ಕೆ ಮನೆ ಕುಸಿದು ಬಿದ್ದಿದ್ದರೆ, ಇತರೆ ಮನೆಗಳು ಅಲುಗಾಡಿವೆ. ಇಡೀ ಗ್ರಾಮವೇ ಕಂಪಿಸಿದ ಅನುಭವವಾಗಿದೆ.

ಇಗ್ಗಲೂರು ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ, ಬರಿದಾಗುತ್ತಿದೆ ಜೀವಸೆಲೆ, ಬೊಂಬೆನಾಡಿನಲ್ಲಿ ಜಲಕ್ಷಾಮದ ಆತಂಕ!

ಸ್ಥಳಕ್ಕೆ ಇಂದು ವಿರಾಜಪೇಟೆ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2018 ರಲ್ಲೂ ಇದೇ ರೀತಿ ಕಂಪನ, ಶಬ್ಧ ಕೇಳಿತ್ತು. ಆದರೆ ಆಗ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದ ಮಳೆಯಿಂದಾಗಿ ಆ ಶಬ್ಧ ಅಷ್ಟೊಂದು ತೀವ್ರವಾಗಿ ಗಮನಕ್ಕೆ ಬಂದಿರಲಿಲ್ಲ. ಆದರೆ ಈ ಬಾರಿ ನಿನ್ನೆ ಈ ಘಟನೆ ನಡೆದಾಗ ಕಾಲೂರು, ಬಾರಿಬೆಳ್ಳಚ್ಚು ಸೇರಿದಂತೆ ಸುತ್ತಮುತ್ತ ಇಲ್ಲೂ ಮಳೆಯೇ ಆಗಿಲ್ಲ. ಆದರೂ ಇಷ್ಟರ ಮಟ್ಟಿಗೆ ದುರಂತ ನಡೆದಿರುವುದು ಎಲ್ಲರನ್ನು ಆತಂಕಕ್ಕೆ ದೂಡಿದೆ. 2018 ರಲ್ಲಿ ಇದೇ ರೀತಿ ಆಗಿ ಬಳಿಕ ಇಡೀ ಗ್ರಾಮವೇ ಕುಸಿದು ಹೋಗಿತ್ತು. ಈಗಲೂ ಭಾರೀ ಶಬ್ದ ಕಂಪನ ಆಗಿರುವ ಹಿನ್ನೆಲೆಯಲ್ಲಿ ಭಾರಿ ಶಬ್ಧ ಕಂಪನಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಮತ್ತೆ 2018 ರಲ್ಲಿ ಆದ ರೀತಿಯೇ ದುರಂತ ಸಂಭವಿಸಬಹುದೇ ಎಂದು ಜನ ಆತಂಕಗೊಂಡಿದ್ದಾರೆ.

ರಾಜ್ಯದ ಎರಡನೇ ಅತೀ ದೊಡ್ಡ ರೈಲ್ವೆ ನಿಲ್ದಾಣ ಕುಡುಕರ ಅಡ್ಡೆ, ನಿಯಂತ್ರಿಸಲು ವಿಫಲವಾದ ಇಲಾಖೆ!

ಕೂಡಲೇ ಭೂ ವಿಜ್ಞಾನಿಗಳು, ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ವಿರಾಜಪೇಟೆ ಮಾಜಿ ಶಾಸಕ ಬೋಪಯ್ಯ ಆಗ್ರಹಿಸಿದ್ದಾರೆ. ಭಾರಿ ಶಬ್ಧದೊಂದಿಗೆ ಒಂದು ಸ್ಥಳದಲ್ಲಿ ಭೂಮಿಯೇ ಛಿದ್ರವಾಗಿದೆ. ಛಿದ್ರವಾಗಿ ಆ ಮಣ್ಣು ಮನೆಗಳಿಗೆಲ್ಲಾ ಬಡಿದಿದೆ. ಆ ರಭಸಕ್ಕೆ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಆ ಕ್ಷಣದಲ್ಲಿ ಮನೆಯ ಮುಂಭಾಗದಲ್ಲಿ ವೃದ್ಧೆ ಇದಿದ್ದರಿಂದ ಯಾವುದೇ ಅನಾವುತ ಸಂಭಂವಿಸಿಲ್ಲ. ಘಟನೆಯಿಂದಾಗಿ ಗ್ರಾಮದ ಜನರು ಅಲ್ಲಿರುವುದಕ್ಕೆ ಆತಂಕ ಪಡುತ್ತಿದ್ದಾರೆ ಎಂದು ಕಾಲೂರು ಗ್ರಾಮ ಪಂಚಾಯಿತಿ ಸದಸ್ಯ ಶುಭ ಸೋಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. 

ಒಟ್ಟಿನಲ್ಲಿ 2018 ರಲ್ಲೂ ಇದೇ ರೀತಿ ಭಾರಿ ಶಬ್ಧ ಮತ್ತು ಕಂಪನದ ಬಳಿಕ ಇಡೀ ಗ್ರಾಮದಲ್ಲಿ ಭೂಕುಸಿತವಾಗಿ ಹಲವು ಜನರು ಜೀವ ಕಳೆದುಕೊಂಡಿದ್ದರು. ಅದಾದ ಬಳಿಕ ಹಲವು ಬಾರಿ ಭೂ ವಿಜ್ಞಾನಿಗಳು ಇಲ್ಲಿಗೆ ಬಂದು ಹೋದರು. ಆದರೆ ಆ ಗ್ರಾಮ ವಾಸಿಸುವುದಕ್ಕೆ ಯೋಗ್ಯವೋ ಅಲ್ಲವೋ ಎಂಬುದನ್ನು ಇದುವರೆಗೆ ಹೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿಯೂ ಮತ್ತೆ ಅಂತಹದ್ದೇ ಅನುಭವದಿಂದ ಜನರು ಆತಂಕಗೊಂಡಿದ್ದು ಸಂಬಂಧಿಸಿದ ಇಲಾಖೆ ಮತ್ತು ಜಿಲ್ಲಾಡಳಿತ ಕೂಡಲೇ ಪರಿಶೀಲಿಸಿ ಜನರ ಆತಂಕವನ್ನು ದೂರ ಮಾಡಬೇಕಾಗಿದೆ.

Latest Videos
Follow Us:
Download App:
  • android
  • ios