ಮಂಗಳೂರು(ಜು.13): ನಗರದಲ್ಲಿ ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್‌ಮೆಂಟ್ ನಡೆಸುವವರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬಾಡಿಗೆಗೆ ವಾಸಿಸುವವರೂ ಕೂಡ ತಮ್ಮ ಗುರುತಿನ ಪೂರ್ಣ ವಿವರವನ್ನು ಸಂಬಂಧಪಟ್ಟವರಿಗೆ ನೀಡಬೇಕಾಗಿದೆ ಎಂದೂ ಸೂಚಿಸಿದ್ದಾರೆ.

ಡ್ರಗ್ಸ್‌ ಮಾಫಿಯಾ ನಿಯಂತ್ರಣಕ್ಕೆ ಸೂಚನೆ:

ಶೈಕ್ಷಣಿಕ, ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ  ಮುಂಚೂಣಿಯಲ್ಲಿರುವ ನಗರವಾಗಿ ಮಂಗಳೂರು ಬೆಳೆಯುತ್ತಿದೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೊರ ಜಿಲ್ಲೆ ಹಾಗೂ ದೇಶ, ವಿದೇಶಗಳಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ. ಅಂತವರು ಮಂಗಳೂರಲ್ಲಿ ವಿವಿಧ ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್‌ಮೆಂಟ್ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಇದೇ ವೇಳೆ ನಗರದಲ್ಲಿ ಕಂಡುಬಂದಿರುವ ಡ್ರಗ್ಸ್ ಮಾಫಿಯಾ ಹಾಗೂ ಇತರೆ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲು ಕಮಿಷನರ್ ಈ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕರ್ನಾಟಕ ಪೊಲೀಸ್ ಕಾಯಿದೆ 1963ರ ಕಲಂ 65 ಮತ್ತು 70ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕಮಿಷನರ್‌ ಈ ಆದೇಶ ಹೊರಡಿಸಿದ್ದಾರೆ.

  • ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್‌ಮೆಂಟ್‌ಗಳ ಹಾಗೂ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ವಸತಿಗೃಹಗಳ ಮಾಲೀಕರು, ಪಾಲುದಾರರು ಹಾಗೂ ಆಡಳಿತ ಮಂಡಳಿಯವರು ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಗಳಿಂದ ಅನುಮತಿಯನ್ನು ಪಡೆದು ಕೊಳ್ಳಬೇಕು.
  • ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಮಾಲೀಕರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ಕಡ್ಡಾಯಾಗಿ ತಮ್ಮವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು.
  • ಹಾಸ್ಟೆಲ್, ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸ್ತವ್ಯ ವಿರುವ ವಿದ್ಯಾರ್ಥಿಗಳ ಹೆಸರು, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ಪೊಲೀಸ್ ಠಾಣೆಗೆ ನೀಡಬೇಕು.
  • ಹಾಸ್ಟೆಲ್ ಪೇಯಿಂಗ್ ಗೆಸ್ಟ್‌ಗಳಲ್ಲಿ ವಿದೇಶದ ವಿದ್ಯಾರ್ಥಿಗಳು ವಾಸ್ತವ್ಯವಿದ್ದಲ್ಲಿ ಇವರು ವಾಸ್ತವ್ಯಕ್ಕೆ ಬಂದ 15 ದಿನಗಳೊಳಗೆ ಅವರ ಪೂರ್ಣ ಮಾಹಿತಿ ಯೊಂದಿಗೆ ಪಾಸ್‌ಪೋರ್ಟ್ ಹಾಗೂ ಅವರು ಹೊಂದಿ ರುವ ವೀಸಾ ವಿವರಗಳನ್ನು ಠಾಣೆಗೆ ಸಲ್ಲಿಸ ಬೇಕು. ಅವರು ವಾಸ್ತವ್ಯ ತೆರವುಗೊಳಿಸದಿದ್ದರೆ, ಅದರ ವಿವರವನ್ನು ಕೂಡ ಆಯಾ ಠಾಣಾಧಿಕಾರಿಗೆ ಸಲ್ಲಿಸಬೇಕು.
  • ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಮಾಲೀಕರು ಅಪರಿಚಿತರಿಗೆ ಪ್ರವೇಶ ನಿಯಂತ್ರಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕು.
  • ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಮತ್ತು ಇನ್ನಿತರೆ ಮಾಲೀಕರು ಯಾವುದೇ ಅಪರಾಧ ಘಟನೆಗಳು ಅಥವಾ ಡ್ರಗ್ಸ್ ಮತ್ತು ಇನ್ನಿತರೆ ಅನೈತಿಕ ಚಟುವಟಿಕೆ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.

ಹಾಸ್ಟೆಲ್‌ ವಿದ್ಯಾರ್ಥಿಗಳೊಂದಿಗೆ ಡೀಸಿ ವಾಸ್ತವ್ಯ