Asianet Suvarna News Asianet Suvarna News

ಮಾಧ್ಯಮಗಳು ವಸ್ತುನಿಷ್ಠತೆಗೆ ಆದ್ಯತೆ ನೀಡಲಿ; ಶಾಸಕ ಯಶವಂತರಾಯಗೌಡ

ಪ್ರಜಾಪ್ರಭುತ್ವ ಯಶಸ್ವಿಗೆ ಪತ್ರಿಕಾರಂಗದ ಕಾರ್ಯ ಬಹುಮುಖ್ಯವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಕ್ರೀಯಾಶೀಲವಾಗಿ ಕೆಲಸ ಮಾಡಿದಾಗ ಯಾವುದೇ ದೇಶವೂ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ.  ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

let the media prioritize objectivity says MLA Yashwarayagowda rav
Author
First Published Sep 11, 2022, 12:19 PM IST

ಇಂಡಿ (ಸೆ.11) : ಜಿಲ್ಲಾ ಕೇಂದ್ರದ ಎಲ್ಲ ಸೌಲಭ್ಯಗಳನ್ನು ಹೊಂದಿರುವ, ಜಿಲ್ಲೆಯಲ್ಲಿಯೇ ದೊಡ್ಡ ಉಪವಿಭಾಗ ಇರುವ ಇಂಡಿ ಪಟ್ಟಣದಲ್ಲಿ ಪತ್ರಿಕಾಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡುವುದರ ಜೊತೆಗೆ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ವೈಯಕ್ತಿಕವಾಗಿ .5 ಲಕ್ಷಗಳನ್ನು ನೀಡುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪತ್ರಿಕೆಗಳು ಪಕ್ಷದ ಮುಖವಾಣಿ ಆಗಬಾರದು: ಈಶ್ವ​ರ​ಪ್ಪ

ಶನಿವಾರ ಪಟ್ಟಣದ ಗುರುಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಪ್ರಜಾಪ್ರಭುತ್ವ ಯಶಸ್ವಿಗೆ ಪತ್ರಿಕಾರಂಗದ ಕಾರ್ಯ ಬಹುಮುಖ್ಯವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಕ್ರೀಯಾಶೀಲವಾಗಿ ಕೆಲಸ ಮಾಡಿದಾಗ ಯಾವುದೇ ದೇಶವೂ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ. ಮಾಧ್ಯಮಗಳು ವಸ್ತುನಿಷ್ಠತೆಗೆ ಆದ್ಯತೆ ನೀಡಿ, ನೈಜ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಇಂದು ಮುದ್ರಣ ಮಾದ್ಯಮ ಸಂಕಷ್ಟದ ಸ್ಥಿತಿ ತಲುಪಿದೆ. ಸಾರ್ವಜನಿಕರು ಪತ್ರಿಕೆ ಕೊಂಡು ಓದುವ ಹವ್ಯಾಸ ಬೆಳೆಸುವುದರ ಜೊತೆಗೆ ಮುದ್ರಣ ಮಾಧ್ಯಮ ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.

ವಾಸ್ತವತೆ, ನೈಜತೆ ಹಾಗೂ ನಿಷ್ಠುರತೆಯ ಮೂಲಕ ನಿಷ್ಪಕ್ಷಪಾತವಾಗಿ ತಮ್ಮ ಬರವಣಿಗೆ ಇರಬೇಕು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಅಭಿಮಾನ ಮೂಡಿಸುವ, ಜನರಲ್ಲಿ ದೇಶದ ಜಾಗೃತಿ ಮೂಡಿಸುವ ಕೆಲಸ ಮಾಡುವುದರ ಜೊತೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವು ಪತ್ರಿಕೆಗಳು ಕೆಲಸ ಮಾಡಿದ್ದನ್ನು ಸ್ಮರಿಸಬೇಕಾಗಿದೆ. ಸಮಾಜದಲ್ಲಿ ಪತ್ರಕರ್ತರಿಗೆ ಗೌರವ ಸ್ಥಾನ ಇದೆ. ಹೀಗಾಗಿ, ಪತ್ರಕರ್ತರು ವರದಿ ಮಾಡುವಾಗ ಪ್ರಾಮಾಣಿಕತೆ, ನೈಜತೆಯಿಂದ ವರದಿ ಮಾಡಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಮಾತನಾಡಿ, ರಾಷ್ಟ್ರಪ್ರೇಮ, ರಾಷ್ಟ್ರ ನಿರ್ಮಾಣ, ಜನರ ಸಮಸ್ಯೆಗಳನ್ನು ಆಡಳಿತ ವರ್ಗಕ್ಕೆ ಕಣ್ತೆರಿಸುವ ವರದಿ ಮಾಡುವುದರ ಜೊತೆಗೆ ಪತ್ರಕರ್ತರು ರಾಷ್ಟ್ರಕ್ಕೆ ಹಿತ ಕಾಯುವ ಸುದ್ದಿಗಳನ್ನು ಬಿತ್ತರಿಸಬೇಕು. ಕ್ರಿಮಿನಲ್‌ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ವೈಭವಿಕರಿಸಿದರೆ ಸಮಾಜದ ಮೇಲೆ ಕೆಟ್ಟಪರಿಣಾಮ ಬಿರುತ್ತದೆ. ಹೀಗಾಗಿ, ಅಂತಹ ಸುದ್ದಿಗಳನ್ನು ಬಿತ್ತರಿಸಬಾರದು. ಸದೃಢ ರಾಷ್ಟ್ರ ಕಟ್ಟುವಲ್ಲಿ ಪತ್ರಿಕಾರಂಗದ ಕಾರ್ಯ ಮುಖ್ಯವಾಗಿದ್ದು, ಮೌಲ್ಯಾಧಾರಿತ, ಪತ್ರಿಕಾ ಧರ್ಮ ಪಾಲಿಸುವ ಕೆಲಸ ಪ್ರತಿಯೊಬ್ಬ ಪತ್ರಕರ್ತ ಮಾಡಬೇಕು ಎಂದು ಹೇಳಿದರು.

ಎಸಿ ರಾಮಚಂದ್ರ ಗಡದೆ, ಜೆಡಿಎಸ್‌ ಮುಖಂಡ ಬಿ.ಡಿ.ಪಾಟೀಲ, ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಮಾತನಾಡಿದರು. ಅಭಿನವ ಮುರುಘೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಲ್ಲಾಭಕ್ಷ ಗೋರೆ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಪ್ರತಿಜ್ಞಾವಿಧಿ ಬೋಧಿಸಿದರು.

ಸಂಘದ ತಾಲೂಕು ಅಧ್ಯಕ್ಷ ಅಬುಶಾಮಾ ಹವಲ್ದಾರ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ ನಾಗಯ್ಯ ಹಿರೇಮಠ, ಬಿಇಒ ವಸಂತ ರಾಠೋಡ, ಮೋಹನ ಕುಲಕರ್ಣಿ, ಫಿರೋಜ್‌ ರೊಜಿನದಾರ, ಶಕೀಲ್‌ ಭಾಗಮಾರೆ, ಅವಿನಾಶ ಬಿದರಿ, ವಿನೋದ ಸಾರವಾಡ, ಸಮೀರ್‌ ಇನಮದಾರ, ರಾಹುಲ ಅಪ್ಟೆ, ರಾಜು ಕೊಂಡಗೂಳಿ, ಸೀತಾರಾಮ ಕುಲಕರ್ಣಿ, ದೇವೆಂದ್ರ ಹೆಳವರ, ವಿನಾಯಕ ಸೊಂಡೂರ, ಶಶಿಕಾಂತ ಮೆಂಡೆಗಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಾವೀದ್‌ ಮೊಮಿನ್‌, ಅತೀಕ್‌ ಮೊಮಿನ್‌, ಅಫಜಲ್‌ ಹವಾಲ್ದಾರ, ಸಂಘದ ತಾಲೂಕು ಘಟಕದ ಗೌರವಾಧ್ಯಕ್ಷ ರಾಜಕುಮಾರ ಚಾಬುಕಸವಾರ, ಉಪಾಧ್ಯಕ್ಷ ನಾಗರಾಜ ಆಸಂಗಿ, ಪ್ರ.ಕಾರ್ಯದರ್ಶಿ ಲಾಲಸಿಂಗ ರಾಠೋಡ, ಲಕ್ಷ್ಮಣ ಹಿರೇಕುರಬರ, ವಿನೋದ ಸಿಂಗೆ, ಶಿವು ಹರಿಜನ, ಅರವಿಂದ ಖಡೆಖಡೆ, ಸದ್ದಾಂಹುಸೇನ್‌ ಜಮಾದಾರ, ಉಮೇಶ ಕೊಳೆಕರ, ಉಮೇಶ ಬಳಬಟ್ಟಿ, ಯಲಗೊಂಡ ಬೇನೂರ, ರಾಜು ಕುಲಕರ್ಣಿ, ಅಕೀಲ್‌ ಆಜಂ ಬವಾಲ್ದಾರ್‌, ಸಿದ್ದಯ್ಯ ಹಿರೇಮಠ, ಅಂಬಣ್ಣ ರಾಂಪುರ, ಬೀರಪ್ಪ ಹೊಸುರ, ಶಂಕರಲಿಂಗ ಜಮಾದಾರ, ಮೂಬಿನಅಲಿ ನದಾಪ, ಆನಂದ ಗಣಾಚಾರಿ, ಸಿದ್ದಪ್ಪ ಹತ್ತಳ್ಳಿ, ಮಡಿವಾಳಪ್ಪ ಪಾಟೀಲ, ಯಮನಪ್ಪ ಗುಣಕಿ, ಫಯಾಜ ಬಾಗವಾನ, ರೈಸ್‌ ಅಷ್ಟೆಕರ, ಪ್ರಶಾಂತ ಕಾಳೆ, ಮಹಿಬೂಬ ಅರಬ, ಶಿವಾನಂದ ಚಾಳಿಕಾರ, ಮಲ್ಲು ಆಳೂರ, ಸಿದ್ರಾಯ ಆಳೂರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು. ಶಂಕರಲಿಂಗ ಜಮಾದಾರ ಸ್ವಾಗತಿಸಿದರು. ರಾಜಕುಮಾರ ಚಾಬುಕಸವಾರ ನಿರೂಪಿಸಿದರು. ಉಮೇಶ ಬಳಬಟ್ಟಿವಂದಿಸಿದರು. ಪತ್ರಕರ್ತರು ಗ್ರಾಮವಾಸ್ತವ್ಯ ಮಾಡಿದ ಊರಿಗೆ ರಸ್ತೆ ಭಾಗ್ಯ!

ಪತ್ರಕರ್ತರು ಕೇವಲ ಪತ್ರಕರ್ತರಷ್ಟೇ ಆಗದೆ, ಕವಿಯಾಗಿ, ಸಾಹಿತಿಯಾಗಿ, ಲೇಖಕರಾಗಿ ಕೆಲಸ ಮಾಡಬೇಕು. ಪತ್ರಕರ್ತರು ವೃತಿನಿರತರಾಗಿ ಕೆಲಸ ಮಾಡಬೇಕು. ಕೇವಲ ಗುರುತಿನ ಚೀಟಿಗಾಗಿ ಪತ್ರಕರ್ತರಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಒಳ್ಳೆಯ ವರದಿಗಳನ್ನು ಬರೆದು ನಿಮ್ಮ ವ್ಯಕ್ತಿತ್ವ ಗುರುತಿಸಿಕೊಳ್ಳಬೇಕೇ ವಿನಾ ಗುರುತಿನ ಕಾರ್ಡಿನಿಂದ ಪತ್ರಕರ್ತನೆಂದು ಗುರುತಿಸುವ ಕೆಲಸ ಯಾವತ್ತೂ ಯಾರೂ ಮಾಡಬಾರದು. ಬ್ಲಾಕ್‌ಮೇಲ್‌ಗಾಗಿ ಗುರುತಿನ ಚೀಟಿ ಬಳಕೆ ಮಾಡಬಾರದು. ಸಂಘದ ಕಾರ್ಡ ಸದ್ಬಳÜಕೆ ಮಾಡಿಕೊಂಡು ಒಳ್ಳೆಯ ವಿಚಾರದೊಂದಿಗೆ ವರದಿ ಬರೆಯುವುದರ ಮೂಲಕ ಶ್ರೇಷ್ಠ ಪತ್ರಕರ್ತರಾಗಬೇಕು.

-ಸಂಗಮೇಶ ಚೂರಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ, ವಿಜಯಪುರ

Follow Us:
Download App:
  • android
  • ios