Karnataka Politics: ರಾಜ್ಯದ ಅಭಿವೃದ್ಧಿಗೆ HDK ಮತ್ತೆ ಸಿಎಂ ಆಗಲಿ: ಚುಂಚನಗಿರಿ ಶ್ರೀ

*   ಕುಮಾರಸ್ವಾಮಿಗೆ ನಾಡಿನ ಜನತೆ ಮತ್ತೊಮ್ಮೆ ಅಧಿಕಾರ ನೀಡಬೇಕು 
*  ಎರಡು ಬಾರಿಯೂ HDK ಪೂರ್ಣಪ್ರಮಾಣದಲ್ಲಿ ಅಧಿಕಾರ ನಡೆಸಿಲ್ಲ
*  ಒಮ್ಮೆ ಪೂರ್ಣಾವಧಿ ಮುಖ್ಯಮಂತ್ರಿಯಾಗುವಂತೆ ಕಾಲಬೈರವೇಶ್ವರ ಆಶೀರ್ವದಿಸಲಿ

Let the HD Kumaraswamy be CM Again Says Nirmalanandanatha Swamiji grg

ಚನ್ನಪಟ್ಟಣ(ಜ.21):  ರೈತರು(Farmers) ಹಾಗೂ ಗ್ರಾಮೀಣ ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕುಮಾರಸ್ವಾಮಿ(HD Kumaraswamy) ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ(Nirmalanandanatha Swamiji) ಆಶಿಸಿದರು. 

ಹೊಂಗನೂರು ಗ್ರಾಮದ ಕೆಪಿಎಸ್‌ ಶಾಲಾ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ರಾಜ್ಯದ(Karnataka) ಅಭಿವೃದ್ಧಿ ಬಗ್ಗೆ ಕುಮಾರಸ್ವಾಮಿ ಅವರು ಅಪಾರ ಕನಸು ಹೊಂದಿದ್ದಾರೆ. ಅವೆಲ್ಲ ಸಾಕಾರಗೊಳ್ಳಬೇಕು ಎಂದಾದಲ್ಲಿ ಇವರಿಗೆ ನಾಡಿನ ಜನತೆ ಮತ್ತೊಮ್ಮೆ ಅಧಿಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಕುಮಾರಸ್ವಾಮಿ ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ(Chief Minister of Karnataka). ಆದರೆ, ಎರಡು ಬಾರಿಯೂ ಇವರು ಪೂರ್ಣಪ್ರಮಾಣದಲ್ಲಿ ಅಧಿಕಾರ ನಡೆಸಿಲ್ಲ. ಅಧಿಕಾರ ಸಿಕ್ಕ ಸ್ವಲ್ಪ ಸಮಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇವರು ಒಮ್ಮೆ ಪೂರ್ಣಾವಧಿ ಮುಖ್ಯಮಂತ್ರಿಯಾಗುವಂತೆ ಕಾಲಬೈರವೇಶ್ವರ ಆಶೀರ್ವದಿಸಲಿ ಎಂದು ಆಶಿಸಿದರು.

Notice to DK Shivakumar: ಡಿಕೆಶಿ ಮನೆ ಮುಂದೆ ತಡರಾತ್ರಿ ಹೈಡ್ರಾಮಾ..!

ನನಗಿಂತ ಉತ್ತಮ ಜನಪ್ರತಿನಿಧಿ ಬೇಕೆಂದರೆ ಆರಿಸಿಕೊಳ್ಳಲಿ: ಎಚ್‌ಡಿಕೆ

ಚನ್ನಪಟ್ಟಣ: ನಾನು ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಜನರಿಗೆ ಇನ್ನೂ ಅಭಿವೃದ್ಧಿ ಮಾಡುವ ಜನಪ್ರತಿನಿಧಿ ಬೇಕು ಎಂದರೆ ಆಯ್ಕೆ ಮಾಡಿಕೊಳ್ಳಲಿ. ಇದು ಕ್ಷೇತ್ರದ ಜನತೆಗೆ ಬಿಟ್ಟವಿಚಾರ. ನಾನೇನು ಶಾಶ್ವತವಾಗಿ ಇಲ್ಲೇ ಗೂಟ ಹೊಡೆದುಕೊಂಡು ಇರೋಕಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ರಾಜಕೀಯ(Politics) ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ನಾನು ಮೂರುವರೇ ವರ್ಷದಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದೀನಿ, ಬೇರೆಯವರು 20 ವರ್ಷ ಅವಧಿಯಲ್ಲಿ ಎಷ್ಟು ಅಭಿವೃದ್ಧಿ(Development) ಮಾಡಿದ್ದಾರೆ ಎಂಬುದನ್ನು ಜನರೇ ಪರಾಮರ್ಶಿಸಲಿ, ಇದು ಕ್ಷೇತ್ರದ ಜನತೆಗೆ ಬಿಟ್ಟ ವಿಚಾರ, ಮಾಡಿದ ಕೆಲಸಗಳನ್ನು ನೆನೆಸಿಕೊಳ್ಳದೆ ಹೋದರೆ ಆಗುವ ಅನಾಹುತಗಳೇನು ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.

ಅಧಿಕಾರಿಗಳಿಂದ ಉತ್ತಮ ಕೆಲಸ:

ಕೋವಿಡ್‌(Covid-19) ಕಾಂಗ್ರೆಸ್‌ ಪಾದಯಾತ್ರೆಯಿಂದ(Congress Padayatra) ಹೆಚ್ಚಳವಾಯ್ತೋ ಇಲ್ಲಾ ಬೇರೆ ಕಾರಣಕ್ಕೆ ಹೆಚ್ಚಳವಾಯ್ತೋ ಎಂದು ನಾನಿಲ್ಲಿ ಚರ್ಚೆ ಮಾಡುವುದಿಲ್ಲ. ಆದರೆ, ಜಿಲ್ಲೆಯ ವೈದ್ಯರು ಮತ್ತು ಅಧಿಕಾರಿಗಳು ಸಾಕಷ್ಟುಸಮಸ್ಯೆಗಳ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ಬಗ್ಗೆ ಟೀಕೆ ಮಾಡಿ ಅವರ ಮನೋಸ್ಥೈರ್ಯ ಕುಗ್ಗಿಸುವ ಕೆಲಸವಾಗಬಾರದು ಎಂದು ಸಲಹೆ ನೀಡಿದರು.

Mysuru Congress ಮೈಸೂರು ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್

ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ:

ನಾನೇನು ಸುಮ್ಮನೆ ಕುಳಿತಿಲ್ಲ. ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಹಲವಾರು ಸಮಸ್ಯೆಗಳನ್ನು ಖುದ್ದು ನಿಂತು ಪರಿಹರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ನಾನು ಎಂದೂ ಹಿಂದೆ ಉಳಿದಿಲ್ಲ. ಮೊದಲ ಆದ್ಯತೆ ನೀಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದೇನೆ. ಮಾಧ್ಯಮಗಳು ವಿಪಕ್ಷದವರು ಆಧಾರ ರಹಿತ ಆರೋಪ ಕೇಳಿ ವರದಿ ಪ್ರಕಟಿಸುವ ಮೂಲಕ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯ ಬಾರದು ಎಂದರು.

ಯೋಗೇಶ್ವರ್‌ಗೆ ಪರೋಕ್ಷ ಟಾಂಗ್‌:

ವಸತಿ ಸಚಿವರ ಜೊತೆ ಮೀಟಿಂಗ್‌ನಲ್ಲಿ ಕುಳಿತು ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಂಡು, ತಾಲೂಕಿಗೆ ವಸತಿ ಯೋಜನೆಗಳು ಮಂಜೂರೇ ಆಗಿಲ್ಲ, ಹೆಚ್ಚುವರಿ ಮನೆ ಮಂಜೂರು ಮಾಡಿ ಎಂದು ಕೇಳಿದನ್ನು ನಾನು ನೋಡಿದ್ದೇನೆ. ಅವರು ಈ ಹಿಂದೆ ಹತ್ತಾರು ಸಾವಿರ ಮನೆಗಳನ್ನು ಕೊಡಿಸುತ್ತೇನೆ ಎಂದು ಚಿನ್ನದ ಬಣ್ಣದ ಲಾಂಛನ ಇರುವ ಪತ್ರ ಬರೆದು ಜನರನ್ನು ಮರಳು ಮಾಡಿದ ಕತೆ ಏನಾಯ್ತು ಎಂಬುದನ್ನು ನಾನು ನೋಡಿದ್ದೇನೆ ಎಂದು ಮಾಜಿ ಸಚಿವ ಯೋಗೇಶ್ವರ್‌(CP Yogeeshwara) ಹೆಸರೇಳದೆ ಎಚ್‌ಡಿಕೆ ವಾಗ್ದಾಳಿ ನಡೆಸಿದರು.
 

Latest Videos
Follow Us:
Download App:
  • android
  • ios