ಸರ್ಕಾರವೇ ಸೇವಾ ಕೇಂದ್ರ ಸ್ಥಾಪಿಸಿ ಪಾನ್‌ಕಾರ್ಡ್‌ಗೆ ಆಧಾರ್‌ ಸಂಖ್ಯೆ ಉಚಿತವಾಗಿ ಲಿಂಕ್‌ ಮಾಡಬೇಕೆಂದು ರಾಜ್ಯ ರೈತ ಸಂಘದ (ವಾಸುದೇವ ಮೇಟಿ ಬಣ) ತಾಲೂಕು ಘಟಕದಿಂಧ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹಿರೇಕೆರೂರು (ಏ.1) : ಸರ್ಕಾರವೇ ಸೇವಾ ಕೇಂದ್ರ ಸ್ಥಾಪಿಸಿ ಪಾನ್‌ಕಾರ್ಡ್‌ಗೆ ಆಧಾರ್‌ ಸಂಖ್ಯೆ ಉಚಿತವಾಗಿ ಲಿಂಕ್‌ ಮಾಡಬೇಕೆಂದು ರಾಜ್ಯ ರೈತ ಸಂಘದ (ವಾಸುದೇವ ಮೇಟಿ ಬಣ) ತಾಲೂಕು ಘಟಕದಿಂಧ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘದ ರಾಜ್ಯ ಸಂಚಾಲಕ ಹನುಮಂತಪ್ಪ ದಿವೀಗಿಹಳ್ಳಿ ಮಾತನಾಡಿ, ಸರ್ಕಾರ ಪಾನ್‌ಕಾರ್ಡ್‌ಗೆ ಆಧಾರ್‌ ಸಂಖ್ಯೆ ಜೋಡಿಸಲು . 1000 ದಂಡ ವಿಧಿಸಿರುವುದು ಅವೈಜ್ಞಾನಿಕವಾಗಿದೆ. ಇದು ಬಡವರಿಗೆ, ಕೂಲಿಕಾರ್ಮಿಕರಿಗೆ ಹೊರೆ ಆಗಲಿದೆ ಎಂದರು.

ಪ್ಯಾನ್‌ - ಆಧಾರ್‌ ಲಿಂಕ್‌ಗೆ ಶುಲ್ಕ ರದ್ದುಪಡಿಸಲು ಆಗ್ರಹ

ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಆಧಾರ್‌ ಕಾರ್ಡ್‌(Adhar card)ನಲ್ಲಿ ವಿಳಾಸ, ಹೆಸರು, ಜನ್ಮ ದಿನಾಂಕ, ಮೊಬೈಲ್‌ ಸಂಖ್ಯೆ ಮುಂತಾದ ವಿವರಗಳು ತಪ್ಪಾಗಿ ನಮೂದಾಗಿದೆ. ಇದನ್ನು ಸರಿಪಡಿಸಿಕೊಳ್ಳುವುದೆ ದೊಡ್ಡ ಸಾಹಸವಾಗಿದೆ. ಇದಕ್ಕಾಗಿ ಕೂಲಿ ಬಿಟ್ಟು ದಿನಗಟ್ಟಲೆ ಅಲೆದರೂ ಆಧಾರ್‌ ಕಾರ್ಡ್‌ ಸರಿಯಾಗಿಲ್ಲ. ಈಗ ಪಾನ್‌ಕಾರ್ಡ್‌ಗೆ ಲಿಂಕ್‌ ಮಾಡಬೇಕೆಂದರೆ ಕಂಪ್ಯೂಟರ್‌ ಸೆಂಟರ್‌(Internet) ಮೊರೆ ಹೋಗಬೇಕಾಗಿದೆ. ದಂಡದ ರೂಪದಲ್ಲಿ . 1000 ಮತ್ತು ಸೇವಾ ಶುಲ್ಕ . 200 ಭರಿಸಬೇಕಾಗಿದೆ. ಸಾಮಾನ್ಯರಿಗೆ ಮಾಹಿತಿ ಕೊರತೆಯಿಂದಾಗಿ ಲಿಂಕ್‌ ಮಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಕುಸುಮಾ ಅಸಾದಿ, ಮಲ್ಲಮ್ಮ ಹುಲ್ಲಿನಕೊಪ್ಪ, ಬಸವರಾಜ ಕೋಡಿಹಳ್ಳಿ, ಕಾವ್ಯ ಬತ್ತಿಕೊಪ್ಪ, ವಿರೂಪಾಕ್ಷಪ್ಪ ಕಾಟೇನಹಳ್ಳಿ, ಹೂವಪ್ಪ ಹುಲ್ಲಿನಕೊಪ್ಪ, ಗುರುರಾಜ ಕಡೇಮನಿ, ರವಿ ಮಾಳಗೇರ, ಸಿದ್ದಪ್ಪ ಮಡಿವಾಳರ, ರಾಜು ಜವನವರ, ಕವಿತಾ ಜವನವರ, ರುದ್ರಪ್ಪ ಕಾಟೇನಹಳ್ಳಿ, ಹಾಲಪ್ಪ ಜಾಡರ ಇದ್ದರು.

Breaking: ಪಾನ್‌-ಆಧಾರ್‌ ಲಿಂಕ್‌ ಅವಧಿ ವಿಸ್ತರಣೆ, ಜೂನ್‌ 30 ಅಂತಿಮ ದಿನ!