ಬೆಳೆ ಹಾನಿಗೆ ಸರ್ಕಾರ ಪರಿಹಾರ ಕೊಡಲಿ: ಎಚ್.ಡಿ.ರೇವಣ್ಣ
ಹಾಸನ ಜಿಲ್ಲೆಯಲ್ಲಿ ನಾಶವಾಗಿರುವ ೧.೫೪ ಲಕ್ಷ ಹೆಕ್ಟೇರ್ ಭತ್ತ, ರಾಗಿ, ಜೋಳ ಹಾಗೂ ಇತರೆ ಕೃಷಿ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಸಲಹೆ ನೀಡಿದ ಶಾಸಕ ಎಚ್.ಡಿ. ರೇವಣ್ಣ

ಹೊಳೆನರಸೀಪುರ(ನ.02): ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ರೈತರ ಜೀವನಾಡಿಯಾಗಿದ್ದು, ಮಳೆ ಇಲ್ಲದ ಕಾರಣದಿಂದ ಜಿಲ್ಲೆಯಲ್ಲಿ ನಾಶವಾಗಿರುವ ೧.೫೪ ಲಕ್ಷ ಹೆಕ್ಟೇರ್ ಭತ್ತ, ರಾಗಿ, ಜೋಳ ಹಾಗೂ ಇತರೆ ಕೃಷಿ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಶಾಸಕ ಎಚ್.ಡಿ. ರೇವಣ್ಣ ಸಲಹೆ ನೀಡಿದರು.
ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಬುಧವಾರ ಆಯೋಜನೆ ಮಾಡಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೨೦೧೮/೧೯ ನೇ ಸಾಲಿನಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆದಂತೆ, ಸ್ಪೆಷಲ್ ತರಗತಿಗಳನ್ನು ತೆಗೆದುಕೊಂಡು ತಾಲೂಕು ಪ್ರಥಮ ಸ್ಥಾನ ಪಡೆಯಲು ಅನುವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ೧೦೫೦ ಹೆಚ್ಚು ಪ್ರಾಥಮಿಕ ಶಾಲೆ ಹಾಗೂ ೮೪ ಪ್ರೌಢಶಾಲೆಯೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಕುಸಿದು ಬೀಳುವ ಸಂಭವವಿದ್ದು, ಇದರ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದರು.
ಕಾಂಗ್ರೆಸ್‌ನಲ್ಲಿ ಮತ್ತೆ ಬಾಂಬ್ ಸಿಡಿಸಿದ ಸಚಿವ ರಾಜಣ್ಣ: ಡಿಕೆಶಿ ಸೇರಿ 2 ಡಜನ್ ಜನರು ಸಿಎಂ ಆಗಲು ಅರ್ಹರಿದ್ದಾರೆ!
ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ವೈದ್ಯರಾದ ಡಾ. ಸೆಲ್ವಕುಮಾರ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಬಿಸಿಎಂ ಇಲಾಖೆಯ ಕಲ್ಯಾಣಾಧಿಕಾರಿ ಮಂಜುನಾಥ್ ಹಾಗೂ ಪಡುವಲಹಿಪ್ಪೆ ಗ್ರಾಮದ ಸುಮುದಾಯ ಆರೋಗ್ಯ ಕೇಂದ್ರದ ವೈದ್ಯರ ಕರ್ತವ್ಯವನ್ನು ಶ್ಲಾಘಿಸಿದರು. ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ರಾಷ್ಟ್ರಧ್ವಜ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಶೃತಿ ಪ್ರಧಾನ ಭಾಷಣ ಮಾಡಿದರು.
ವಿವಿಧ ಕೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಪಾಲಕ ಎಚ್.ಆರ್. ನಿಂಗೇಗೌಡ, ಪೌರ ಕಾರ್ಮಿಕರಾದ ನೂರಮ್ಮ, ಅಗ್ನಿ ಶಾಮಕ ಠಾಣೆಯ ಚಾಲಕ ರಂಗಸ್ವಾಮಿ, ಶೋಬಾನೆ ಹಾಡುಗಾರರಾದ ಭಾಗ್ಯಮ್ಮ, ರತ್ನಮ್ಮ, ಹೇಮಾ ಹಾಗೂ ತಿಮ್ಮಮ್ಮ, ಮಹೇಂದ್ರ ಬಿ, ಮಂಜುನಾಥ್, ಪ್ರಸಾದ್, ಪಿಎಸ್ಸೈ ರಂಗಸ್ವಾಮಿ, ಹೊನ್ನಶೆಟ್ಟಿ, ಡಾ. ಸೆಲ್ವಕುಮಾರ್, ರೋಟರಿ ಸಂಸ್ಥೆಯ ಎಚ್.ಆರ್.ಶಿವಕುಮಾರ್, ರಮೇಶ್, ಮಹಾದೇವಪ್ಪ ಎಂ.ವಿ., ಶಾಂತ ಬಿ.ಎಸ್, ಬಸವರಾಜು, ಸನ್ಮಾನಿಸಿ, ಗೌರವಿಸಲಾಯಿತು.
ಚುನಾವಣಾ ಅಕ್ರಮ ಆರೋಪ: ಎಚ್‌ಡಿ ರೇವಣ್ಣಗೆ ಹೈಕೋರ್ಟ್ ಸಮನ್ಸ್
ಪುರಸಭೆ ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ಸುಧಾನಳಿನಿ, ಸದಸ್ಯರಾದ ಶಿವಣ್ಣ, ಎಚ್.ಸಿ.ಪ್ರಸನ್ನ ಹಾಗೂ ಎ.ಜಗನ್ನಾಥ್, ಡಿವೈಎಸ್‌ಪಿ ಅಶೋಕ್, ತಾ.ಪಂ. ಇಒ ಗೋಪಾಲ್ ಪಿ.ಆರ್., ವೃತ್ತ ನಿರೀಕ್ಷಕ ಪ್ರದೀಪ್ ಬಿ.ಆರ್., ಕೃಷಿ ಇಲಾಖೆಯ ಅಧಿಕಾರಿ ಸಪ್ನಾ, ಉಪ ತಹಸೀಲ್ದಾರ್ ರೂಪೇಶ್, ಶಿರಸ್ತೇದಾರ್ ಲೋಕೇಶ್, ಸಾಹಿತಿ ಅಣ್ಣಾಜಪ್ಪ, ತಾ. ಕಸಾಪ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಪುಣ್ಯವತಿ, ಸುಜಾತಅಲಿ, ಇತರರು ಇದ್ದರು.
ಪಟ್ಟಣದ ಸೋಷಿಯಲ್ ಕ್ಲಬ್ ಆವರಣದಲ್ಲಿ ಅಧ್ಯಕ್ಷ ಕೆ.ಎಂ.ಹೊನ್ನಪ್ಪ ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿ ಕನ್ನಡ ನಾಡು, ನುಡಿ, ಜಲ ಹಾಗೂ ಭೂಮಿ ರಕ್ಷಣೆಗೆ ಸದಾಕಾಲ ನಾವುಗಳು ಸಿದ್ಧವಾಗಿರಬೇಕು ಎಂದು ಕರೆ ಕೊಟ್ಟರು. ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.
ಬಯಲುರಂಗ ಮಂದಿರ ಆವರಣದಲ್ಲಿ ವಿದ್ಯಾರ್ಥಿಗಳು ಸತತ ಎರಡು ಗಂಟೆ ಸುಡುಬಿಸಿಲಿನಲ್ಲಿ ಕುಳಿತಿದ್ದರು. ನೀರು ಕುಡಿಯಲು ವಿದ್ಯಾರ್ಥಿಗಳು ಕುಳಿತ ಸ್ಥಳದಿಂದ ಎದ್ದರೆ ಶಿಕ್ಷಕರು ರೇಗುತ್ತಿದ್ದರು, ಇದು ವಿದ್ಯಾರ್ಥಿಗಳು ಬಿಸಿಲಿನ ಬೇಗೆಗೆ ಸಿಲುಕಿ ಹೈರಾಣವಾದರು. ಜತೆಗೆ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಯಿತು.