Asianet Suvarna News Asianet Suvarna News

ಸಮಾಜದ ಸರ್ವರಿಗೂ ಶಿಕ್ಷಣ ಸಂಸ್ಥೆ ಅನುಕೂಲವಾಗಲಿ: ಸಚಿವ ಎಂಟಿಬಿ ನಾಗರಾಜ್‌

ಪ್ರಸ್ತುತ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣ ಆಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕನಕದಾಸರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡುವ ಮೂಲಕ ಸರ್ವ ಧರ್ಮಕ್ಕೂ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ತ್ವರಿತವಾಗಿ ಆಗಲಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. 

Let the educational institution benefit everyone in the society says Minister MTB Nagaraj gvd
Author
First Published Dec 19, 2022, 9:45 PM IST

ಹೊಸಕೋಟೆ (ಡಿ.19): ಪ್ರಸ್ತುತ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣ ಆಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕನಕದಾಸರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡುವ ಮೂಲಕ ಸರ್ವ ಧರ್ಮಕ್ಕೂ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ತ್ವರಿತವಾಗಿ ಆಗಲಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ನಗರದಲ್ಲಿ ತಾಲೂಕು ಕುರುಬರ ಸಂಘ ಅಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡುವ ದೃಷ್ಟಿಯಿಂದ ಸರ್ಕಾರದಿಂದ ನಾಲ್ಕು ಎಕರೆ ಜಾಗ ಮಂಜೂರು ಮಾಡಿಸಿದ್ದು, 40 ಲಕ್ಷ ಅನುದಾನ ನೀಡಿದೆ. ವೈಯಕ್ತಿಕವಾಗಿ 2 ಕೋಟಿ ಅನುದಾನ ನೀಡುವ ಮೂಲಕ ಶಿಕ್ಷಣ ಸಂಸ್ಥೆ ನಿರ್ಮಿಸಲಿದ್ದೇವೆ. 

ನಾವು ನಿರ್ಮಾಣ ಮಾಡುವ ಶಿಕ್ಷಣ ಸಂಸ್ಥೆ ಕೇವಲ ಕುರುಬ ಸಮುದಾಯಕ್ಕೆ ಅಷ್ಟೇ ಅಲ್ಲ. ಸಮಾಜದ ಸರ್ವಧರ್ಮಕ್ಕೂ ಸಲ್ಲುವ ಸಂಸ್ಥೆಯಾಗಲಿದೆ. ದೇಶದಲ್ಲಿ ಕುರುಬರ ಸಮುದಾಯ 12 ಕೋಟಿ, ರಾಜ್ಯದಲ್ಲಿ 50 ಲಕ್ಷ, ತಾಲೂಕಿನಲ್ಲಿ ಸುಮಾರು 40 ಸಾವಿರ ಜನಸಂಖ್ಯೆ ಹೊಂದಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಹೊಂದಬೇಕು. ನಾನು ಶಾಸಕನಾಗಿ, ಸಚಿವನಾಗಿ ತಾಲೂಕಿನಲ್ಲಿ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದರು. 

ನಾವು ಮಲಗಿಕೊಂಡಿದ್ದರೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಸಚಿವ ಎಂಟಿಬಿ ನಾಗರಾಜ್‌

ಹೊಸದುರ್ಗ ಕಾಗಿನೆಲೆ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಬದುಕಿಗೆ ಬೇಕಾಗಿರುವುದು ಹೃದಯದಲ್ಲಿ ಭಕ್ತಿ ಹಾಗೂ ಪ್ರೀತಿ, ಆದರೆ ಪ್ರಸ್ತುತ ಸಮಾಜದಲ್ಲಿ ವ್ಯವಸ್ಥೆ ಅಧೋಗತಿಗೆ ತಲುಪಿದ್ದು ಜಾತಿ ವ್ಯವಸ್ಥೆಯ ಮೇಲೆ ಬದುಕು ರೂಪುಗೊಳ್ಳುತ್ತಿದೆ.  ಶತಮಾನಗಳ ಹಿಂದೆಯೇ ಭಕ್ತ ಕನಕದಾಸರು ತಮ್ಮ ಭಕ್ತಿ ಮಾರ್ಗದ ಮೂಲಕ ಶ್ರೀಕೃಷ್ಣನ ದರ್ಶನ ಪಡೆದವರಾಗಿ, ಕುಲಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯನ್ನು ಬಲ್ಲಿರಾ ಎಂಬ ಸಂದೇಶವನ್ನು ಜಗತ್ತಿಗೆ ಕೊಟ್ಟಿದ್ದಾರೆ. ಆದ್ದರಿಂದ ಕನಕದಾಸರ ಆದರ್ಶ ಯುವಕರಿಗೆ ದಾರಿದೀಪವಾಗಿದೆ ಎಂದರು. 

ಆರ್ಥಿಕ ಸದೃಢತೆಗೆ ಸ್ವದೇಶಿ ಉತ್ಪನ್ನ ಬಳಕೆ ಹೆಚ್ಚಾಗಬೇಕು: ಸಚಿವ ಎಂಟಿಬಿ ನಾಗರಾಜ್‌

ಗಮನ ಸೆಳೆದ ಮೆರವಣಿಗೆ: ಕನಕ ಜಯಂತಿ ಪ್ರಯುಕ್ತ ತಾಲೂಕಿನ ವಿವಿಧ ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಕನಕದಾಸರ ಭಾವಚಿತ್ರಗಳ ಪಲ್ಲಕ್ಕಿಗಳನ್ನು ನಗರದ ಕೆಇಬಿ ವೃತ್ತದಿಂದ ಪ್ರಾರಂಭಗೊಂಡು ರಥಬೀದಿಯಲ್ಲಿ ಡೊಳ್ಳುಕುಣಿತ, ಪೂರ್ಣಕುಂಭದ ಜೊತೆ ಮೆರವಣಿಗೆ ಮಾಡಲಾಯಿತು. ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌, ತಾಲೂಕು ಕುರುಬರ ಸಂಘದ ಅಧ್ಯಕ್ಷ ರಘುವೀರ್‌, ಖಜಾಂಚಿ ರಾಜಣ್ಣ, ಕಾರ್ಯದರ್ಶಿ ಲಿಂಗಾಪುರ ಮಂಜು, ಮಾಜಿ ಅಧ್ಯಕ್ಷ ಅಬಕಾರಿ ಶ್ರೀನಿವಾಸಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್‌, ಟೌನ್‌ ಅಧ್ಯಕ್ಷ ಡಾ.ಸಿ.ಜಯರಾಜ್‌, ಕುರುಬ ಸಮುದಾಯದ ಮುಖಂಡರಾದ ಚೌಡಪ್ಪ, ದಶರಥ್‌, ಕೆಂಪಣ್ಣ, ಹುಲ್ಲೂರಪ್ಪ, ಕಾಶಿ ಚಂದ್ರಶೇಖರ್‌, ಭೀರಪ್ಪ ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು.

Follow Us:
Download App:
  • android
  • ios