ಎಬಿ​ವಿಪಿ ಮುಖಂಡ ಪ್ರತೀ​ಕ್‌​ಗೌ​ಡ ಕೃತ್ಯ ಖಂಡಿಸಿ ತಾಲೂಕು ಎನ್‌ಎಸ್‌ಯುಐ, ಯುವ ಕಾಂಗ್ರೆಸ್‌ ಮೆರ​ವ​ಣಿಗೆ, ವಿದ್ಯಾ​ರ್ಥಿ​ನಿ​ಯರ ನಗ್ನ ವಿಡಿ​ಯೋ​ಗಳ ಬ್ಲಾಕ್‌​ಮೇಲ್‌ ಖಂಡಿಸಿ ಪ್ರತಿ​ಭ​ಟ​ನೆ​ಯಲ್ಲಿ ಕಿಮ್ಮನೆ ರತ್ನಾ​ಕರ್‌ ಆಗ್ರಹ. 

ತೀರ್ಥಹಳ್ಳಿ(ಜೂ.22): ಎಬಿವಿಪಿ ಸಂಘಟನೆಯ ಪ್ರತೀಕ್‌ ಗೌಡ ವಿದ್ಯಾರ್ಥಿನಿಯರ ನಗ್ನ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಬ್ಲಾಕ್‌ ಮೈಲ್‌ ಮಾಡಿರುವ ಕೃತ್ಯವನ್ನು ಶಾಸಕ ಆರಗ ಜ್ಞಾನೇಂದ್ರ ಸಾರ್ವಜನಿಕವಾಗಿ ಖಂಡಿಸಿ, ಕ್ಷಮೆಯನ್ನೂ ಕೇಳಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆಗ್ರಹಿಸಿದರು.

ಪ್ರತೀ​ಕ್‌​ಗೌ​ಡ ನಡೆ​ಸಿ​ದ ಕೃತ್ಯವನ್ನು ಖಂಡಿಸಿ ತಾಲೂಕು ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ಬುಧವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವ​ರು, ತಾಲೂಕಿನ ಜನತೆಗೆ ಅವಮಾನವಾಗುವಂತೆ ನಡೆದಿರುವ ಕೃತ್ಯವನ್ನು ಕ್ಷೇತ್ರದ ಪ್ರತಿನಿಧಿಯಾಗಿ ಶಾಸಕರು ಮೊದಲಿಗೆ ಖಂಡಿಸದಿರುವುದು ಖಂಡನೀಯ ಎಂದರು.

SHIVAMOGGA: ಮಲೆನಾಡಿನ ಚಿನ್ನದ ಹುಡುಗಿ ಈಕೆ ಯೋಗ ಸಂಧ್ಯಾ

ಬಿಜೆಪಿ ಅಂಗಪಕ್ಷವಾದ ಎಬಿವಿಪಿ ಮುಖಂಡ ಪ್ರತೀಕ್‌ನನ್ನು ಆರಗ ಜ್ಞಾನೇಂದ್ರ ಕಳೆದ ಚುನಾವಣೆಯಲ್ಲಿ ಬಳಸಿಕೊಂಡಿದ್ದರು. ಅಲ್ಲದೇ, ಆತನೊಂದಿಗೆ ಆತ ಓದುತ್ತಿದ್ದ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಮತಯಾಚನೆ ಮಾಡಿರುವ ಕಾರಣ ಈ ಘಟನೆಯನ್ನು ಖಂಡಿಸುವ ನೈತಿಕತೆಯನ್ನೇ ಅವರು ಕಳೆದುಕೊಂಡಿದ್ದಾರೆ ಎಂದೂ ದೂರಿದರು.

ನಂದಿತಾ ಸಾವಿನ ಸುಳ್ಳು ಪ್ರಕರಣ ಮತ್ತು ಪಿಎಸ್‌ಐ ಮುಂತಾದ ಹಗರಣದಲ್ಲಿ ಗಳಿಸಿದ ಭ್ರಷ್ಟಾಚಾರದ ಹಣದಲ್ಲಿ ಎರಡು ಚುನಾವಣೆಯನ್ನು ಗೆದ್ದಿರುವ ಶಾಸಕರು ಕಾಂಗ್ರೆಸ್‌ ಸರ್ಕಾರ ನೀಡಿರುವ ಭರವಸೆಯನ್ನು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ಎಂದರು.

ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್‌.ಎಂ. ಮಂಜುನಾಥಗೌಡ, ಎಬಿವಿಪಿ ಮುಖಂಡ ಮಾಡಿರುವ ಈ ಹೇಯ ಕೃತ್ಯದಿಂದ ತಾಲೂಕಿನ ಜನತೆ ತಲೆತಗ್ಗಿಸುವಂತಾಗಿದೆ. ಆರೋಪಿಯ ಇಡೀ ಕುಟುಂಬ ಕೂಡ ಕಳೆದ ಚುನಾವಣೆಯಲ್ಲಿ ಶಾಸಕರ ಪರವಾಗಿ ಕೆಲಸ ಮಾಡಿದೆ. ದೇಶಭಕ್ತಿ ಹಿಂದುತ್ವ ಸಂಪ್ರದಾಯಗಳ ಬಗ್ಗೆ ಮಾತನಾಡುವ ಶಾಸಕ ಆರಗ ಜ್ಞಾನೇಂದ್ರ ಇಂಥ ವ್ಯಕ್ತಿಯ ಜೊತೆ ಕಾಲೇಜಿನ ಒಳಗೆ ಹೋಗಿ ವಿದ್ಯಾರ್ಥಿಗಳ ಮತ ಕೇಳಲು ಅವಕಾಶ ನೀಡಿದ ಕಾಲೇಜು ಪ್ರಾಂಶುಪಾಲರಿಗೂ ನಾಚಿಕೆ ಆಗಬೇಕು ಎಂದರು.

ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರತೀಕ್‌ ಗೌಡ ಮಾಡಿರುವ ಈ ಕೃತ್ಯದಿಂದ ತಾಲೂಕಿನ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಘಟನೆಯಿಂದ ಬೇಸತ್ತ ಒಂದೆರಡು ಕುಟುಂಬಗಳು ಬೇರೆಡೆಗೆ ವಲಸೆ ಹೋಗುವ ಕುರಿತಂತೆ ಚಿಂತನೆ ನಡೆಸಿರುವ ಉದಾಹರಣೆಯೂ ಇದೆ ಎಂದರು.

ದರ್ಗಾದೊಳಗೊಂದು ದೇವಾಲಯ; ಇದು ದಕ್ಷಿಣ ಭಾರತದ ಸೌಹಾರ್ದ ಧಾರ್ಮಿಕ ಕೇಂದ್ರ

ತಾಲೂಕು ಎನ್‌ಎಸ್‌ಯುಐ ಕಾರ್ಯದರ್ಶಿ ಸುಜಿತ್‌ ಮಾತನಾಡಿದರು. ತಾಲೂಕು ಎನ್‌ಎಸ್‌ಯುಐ ಅಧ್ಯಕ್ಷ ಸುಜಿತ್‌, ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪಿ.ರಾಘವೇಂದ್ರ, ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಮುಡುಬಾ ರಾಘವೇಂದ್ರ, ಪಪಂ ಅಧ್ಯಕ್ಷೆ ಸುಶೀಲಾ ಶೆಟ್ಟಿ, ಬಾಳೇಹಳ್ಳಿ ಪ್ರಭಾಕರ್‌, ಟಿ.ಎಲ್‌.ಸುಂದರೇಶ್‌, ಬಿ.ಎಸ್‌.ಎಲ್ಲಪ್ಪ, ವೆಂಕಟೇಶ್‌ ಹೆಗ್ಡೆ, ಆದರ್ಶ ಹುಂಚದಕಟ್ಟೆಮುಂತಾದವರು ಇದ್ದರು.

ತೀರ್ಥಹಳ್ಳಿ ಪಟ್ಟಣದಲ್ಲಿ ಈಚೆಗೆ ಬಿಜೆಪಿ ವತಿಯಿಂದ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಆ ಪಕ್ಷದ ಮಾಜಿ ತಾಪಂ ಸದಸ್ಯನೋರ್ವ ಸರ್ಕಾರ ಅಕ್ಕಿ ಕೊಡದಿದ್ರೆ ಕಾಲಿನಲ್ಲಿರುವ ಚಪ್ಪಲಿ ಕೈಗೆ ಬರುತ್ತೆ ಎಂದು ಹೇಳಿರುವುದು ಉದ್ದಟತನದಿಂದ ಕೂಡಿದೆ. ಶಾಸಕರು ತಮ್ಮ ಸಮ್ಮುಖದಲ್ಲೇ ಹೇಳಿರುವ ಈ ಮಾತನ್ನು ಅನುಮೋದನೆ ಮಾಡಿರುವುದು ಬಿಜೆಪಿ ಸಂಸ್ಕೃತಿಯಾಗಿದೆ ಅಂತ ಕಾಂಗ್ರೆ​​ಸ್‌ ಮುಖಂಡ ಆರ್‌.​ಎಂ.​ಮಂಜು​ನಾ​ಥ​ಗೌ​ಡ ತಿಳಿಸಿದ್ದಾರೆ.