ಬಿಜೆಪಿಗೆ ಜನರಿಂದ ಪಾಠ: ಲೋಕೇಶ್ವರ

ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಧರ್ಮ ಸಂಘರ್ಷ, ಕಮೀಷನ್‌ ದಂಧೆ ಸೇರಿದಂತೆ ಜನವಿರೋಧಿ ನೀತಿಯಿಂದ ರೈತರು, ಬಡ, ಮಧ್ಯಮ ವರ್ಗದ ಜನರ ಕಷ್ಟಗಳನ್ನು ಅನುಭವಿಸುವಂತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಜನರೇ ತಕ್ಕಪಾಠ ಕಲಿಸಲಿದ್ದಾರೆಂದು ಕಾಂಗ್ರೆಸ್‌ ಮುಖಂಡ ಹಾಗೂ ಟಿಕೆಟ್‌ ಆಕಾಂಕ್ಷಿ ಲೋಕೇಶ್ವರ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Lesson from people for BJP  Lokeshwar snr

ತಿಪಟೂರು :  ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಧರ್ಮ ಸಂಘರ್ಷ, ಕಮೀಷನ್‌ ದಂಧೆ ಸೇರಿದಂತೆ ಜನವಿರೋಧಿ ನೀತಿಯಿಂದ ರೈತರು, ಬಡ, ಮಧ್ಯಮ ವರ್ಗದ ಜನರ ಕಷ್ಟಗಳನ್ನು ಅನುಭವಿಸುವಂತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಜನರೇ ತಕ್ಕಪಾಠ ಕಲಿಸಲಿದ್ದಾರೆಂದು ಕಾಂಗ್ರೆಸ್‌ ಮುಖಂಡ ಹಾಗೂ ಟಿಕೆಟ್‌ ಆಕಾಂಕ್ಷಿ ಲೋಕೇಶ್ವರ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಗಡಬನಹಳ್ಳಿಯಲ್ಲಿ ಪಕ್ಷ ಸಂಘಟನೆ ಹಾಗೂ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಮಾತನಾಡಿದರು. ನೊಣವಿನಕೆರೆ ಹಾಗೂ ಕಿಬ್ಬನಹಳ್ಳಿ ಹೋಬಳಿಗಳಲ್ಲಿ ನನ್ನ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಹೈಕಮಾಂಡ್‌ ತಿಳಿಸಿದ್ದು, ಹಳ್ಳಿ ಹಳ್ಳಿಗಳಲ್ಲಿ ಬೂತ ಮಟ್ಟದಿಂದಲೂ ಪ್ರಚಾರ ಕೈಗೊಂಡು ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ. ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ನನಗೊಂದು ಅವಕಾಶ ಕಲ್ಪಿಸಿಕೊಂಡುವ ಮೂಲಕ ನಿಮ್ಮಗಳ ಸೇವೆ ಮಾಡಲು ಅನುವು ಮಾಡಿಕೊಡಬೇಕೆಂದು ಲೋಕೇಶ್ವರ ಮನವಿ ಮಾಡಿದರು.

ಈ ವೇಳೆ ಲೋಕೇಶ್ವರ ಅಭಿಮಾನಿ ಬಳಗದ ಕಾರ್ಯಕರ್ತರು, ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

ಫೋಟೋ 24-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಗಡಬನಹಳ್ಳಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಗ್ಯಾರಂಟಿ ಕಾರ್ಡ್‌ಗಳನ್ನು ಮಹಿಳೆಯರಿಗೆ ವಿತರಣೆ ಮಾಡುತ್ತಿರುವ ಕಾಂಗ್ರೆಸ್‌ ಮುಖಂಡ ಹಾಗೂ ಟಿಕೆಟ್‌ ಆಕಾಂಕ್ಷಿ ಲೋಕೇಶ್ವರ.

ಚುನಾವಣೆಗೆ ಭರ್ಜರಿ ತಯಾರಿ

ತುಮಕೂರು :  ಬಿಜೆಪಿ ತುಮಕೂರು ಸಂಘಟನಾತ್ಮಕ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಂಡ ಜಯ ಪಡೆಯಲು ಕೇಂದ್ರ, ರಾಜ್ಯದ ಪ್ರಮುಖ ದಿಗ್ಗಜ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಆಗಮಿಸುತ್ತಿದ್ದು, ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಈ ಬಾರಿ ಕರ್ನಾಟಕ ವಿಧಾನಸಭೆ - 2023ರ ಚುನಾವಣೆ ಹೈ-ವೋಲ್ಟೇಜ್‌ ಚುನಾವಣೆಯಾಗಿರುವುದರಿಂದ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ್ಲೂ ಭರ್ಜರಿ ಗೆಲುವಿಗೆ ಭಾರೀ ರಣತಂತ್ರವನ್ನು ಹೆಣೆದಿದೆ.

ಬಿಜೆಪಿ ಅಭ್ಯರ್ಥಿಗಳ ಭಾರೀ ಅಂತರದ ಗೆಲುವಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಜನಪರ ಮತ್ತು ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಮತದಾರರಿಗೆ ತಲುಪುವಂತೆ ಬೂತ್‌ ಮಟ್ಟದಿಂದ ಕಾರ್ಯಕರ್ತರನ್ನು ಹುರಿದುಂಬಿಸಿ, ಮನೆ-ಮನ ಮುಟ್ಟುವ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಕಾರ್ಯೋಮುಖವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಎಸ್‌.ರವಿಶಂಕರ್‌ ಹೆಬ್ಬಾಕ ಸುದ್ದಿಗೋಷ್ಠಿಯಲ್ಲಿ ಹೇಳಿದರು

ಬಿಜೆಪಿಯು ಈಗಾಗಲೇ ಬೂತ್‌ ವಿಜಯ ಅಭಿಯಾನ ಹಾಗೂ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮಗಳನ್ನು ಎಲ್ಲಾ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರ ಪರಿಶ್ರಮದಿಂದ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಎರಡೂ ಕಾರ್ಯಕ್ರಮಗಳು ರಾಜ್ಯದ 58186 ಬೂತ್‌ಗಳಲ್ಲಿನ ಕಾರ್ಯಕರ್ತರನ್ನು ಚುನಾವಣಾ ಕಾರ್ಯಕ್ಕೆ ಸಜ್ಜಾಗಿ ತೊಡಗಿಸಿಕೊಂಡು ಕಾರ್ಯಕರ್ತರ ಕ್ಷಮತೆ ಹಾಗೂ ಚಟುವಟಿಕೆಗಳ ವೇಗವನ್ನೂ ಹೆಚ್ಚಿಸಿದೆ. ಇದರಿಂದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಭರ್ಜರಿ ಗೆಲುವಿಗೆ ಅನುಕೂಲವಾಗುವಂತೆ ಫಲಾನುಭವಿಗಳ ಸಮಾವೇಶ, ವಿಜಯ ಸಂಕಲ್ಪ ಯಾತ್ರೆ ರೋಡ್‌ ಶೋ, ಮೋರ್ಚಾಗಳ ಸಮಾವೇಶ , ಪ್ರಗತಿ ರಥ ವಾಹನ (ಎಲ್‌.ಇ.ಡಿ ವಿಡಿಯೋಗಳು) ಹಾಗೂ ಜನಧ್ವನಿಯಾಗಿ ಪ್ರಣಾಳಿಕೆ ಸಲಹಾ ಅಭಿಯಾನವನ್ನು ಎಲ್ಲ ವರ್ಗ, ಸಮುದಾಯದ ಪ್ರಮುಖರು, ನಾಗರಿಕರು, ಮತದಾರರು ಭಾಗವಹಿಸಲು ರಣತಂತ್ರ ರೂಪಿಸಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ಸಹ ಉಸ್ತುವಾರಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಮತ್ತು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್‌ ಮಾಂಡವೀಯ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಹಾಗೂ ಜಗದೀಶ್‌ ಶೆಟ್ಟರ್‌, ಪ್ರಮುಖರಾದ ಆರ್‌.ಅಶೋಕ್‌, ಗೋವಿಂದ ಕಾಳಜೋಳ, ಕೆ.ಎಸ್‌.ಈಶ್ವರಪ್ಪ, ಬಿ.ವೈ.ವಿಜಯೇಂದ್ರ, ವಿ.ಸೋಮಣ್ಣ, ಆರಗ ಜ್ಞಾನೇಂದ್ರ, ಸಿ.ಅಶ್ವತ್‌್ಥನಾರಾಯಣ್‌, ಜೆ.ಸಿ.ಮಾಧುಸ್ವಾಮಿ, ಬಿ.ಎಸ್‌.ನಾಗೇಶ್‌ ಮತ್ತು ಜಿಲ್ಲೆಯ ಸಂಸದರು, ಶಾಸಕರು ಮುಂತಾದ ಪ್ರಭಾವಿ ನಾಯಕರು ಭಾಗವಹಿಸಲಿದ್ದಾರೆಂದರು.

Latest Videos
Follow Us:
Download App:
  • android
  • ios