Mysuru: ತಿ.ನರಸೀಪುರದಲ್ಲಿ ಬೋನಿಗೆ ಬಿದ್ದ ಮೊದಲ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ತಾಲ್ಲೂಕಿನಲ್ಲಿ ಮೊದಲ ಚಿರತೆ ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಇರಿಸಿದ್ದ ಬೋನಿಗೆ ಬಿದ್ದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮುತ್ತತ್ತಿ ಗ್ರಾಮದಲ್ಲಿ ಶ್ವಾನದ ಮೇಲೆ ದಾಳಿ ಮಾಡಿದ್ದ 3 ವರ್ಷದ ಗಂಡು ಚಿರತೆ, ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
 

leopard trapped in to the cage in mysuru district gvd

ತಿ.ನರಸೀಪುರ (ಡಿ.22): ತಾಲ್ಲೂಕಿನಲ್ಲಿ ಮೊದಲ ಚಿರತೆ ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಇರಿಸಿದ್ದ ಬೋನಿಗೆ ಬಿದ್ದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮುತ್ತತ್ತಿ ಗ್ರಾಮದಲ್ಲಿ ಶ್ವಾನದ ಮೇಲೆ ದಾಳಿ ಮಾಡಿದ್ದ 3 ವರ್ಷದ ಗಂಡು ಚಿರತೆ, ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದು, ಮುತ್ತತ್ತಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. 

ಇನ್ನು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮುತ್ತತ್ತಿ ಗ್ರಾಮಸ್ಥರು ಮನವಿ ಮಾಡಿದ್ದು, ಅದರಂತೆ ದಿಲೀಪ್ ಎಂಬುವರ ತೋಟದಲ್ಲಿ  ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದರು. ಇನ್ನು ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಈಗಾಗಲೇ ಇಬ್ಬರ ಸಾವು, ಹಲವರನ್ನು ಚಿರತೆ ಗಾಯಗೊಳಿಸಿದೆ.

Uttara Kannada: ಹೊನ್ನಾವರದಲ್ಲಿ ಚಿರತೆ ಕಾಟ: ಆತಂಕದಲ್ಲಿ ಜನರು

ಮುಂದುವರೆದ ಚಿರತೆ ದಾಳಿ: ತಾಲೂಕಿನಲ್ಲಿ ನರ ಭಕ್ಷಕ ಚಿರತೆ ದಾಳಿ ಮುಂದುವರೆದಿದ್ದು, ಜಮೀನಿಗೆ ಹೋಗಿದ್ದ ವೇಳೆ ರೈತನ ಮೇಲೆ ಚಿರತೆ ದಾಳಿ ನಡೆಸಿದ್ದು, ಆತ ಪ್ರಾಣಾಪಾಯದಿಂದ ಪಾರಾದ ಘಟನೆ ಬನ್ನೂರು ಹೋಬಳಿಯ ನುಗ್ಗೆನಹಳ್ಳಿಯಲ್ಲಿ ಜರುಗಿದೆ. ಗ್ರಾಮದ ಸತೀಶ್‌ ತಮ್ಮ ಜಮೀನಿಗೆ ಹೋಗಿದ್ದ ವೇಳೆ ಚಿರತೆ ದಾಳಿ ಮಾಡಿದ್ದು, ಚಿರತೆ ಬಾಯಿಂದ ತಪ್ಪಿಸಿಕೊಂಡು ಊರಿಗೆ ಬಂದಿದ್ದಾರೆ, ಗಾಯಗೊಂಡಿದ್ದ ಸತೀಶ್‌ ಅವರನ್ನು ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ಕರೆತಂದು ಆನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ರೈತ ಮುಖಂಡ ನಾರಾಯಣ್ ಈ ಬಗ್ಗೆ ಮಾತನಾಡಿ, ಚಿರತೆ ದಾಳಿ ನಡೆದ ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಸತೀಶ್‌ ಅವರನ್ನು ಘಟನೆ ಬಗ್ಗೆ ಕೇಳಿದೆ ಅವರು ಗದ್ದೆ ಬಳಿಸಿಕೊಂಡು ಬರುವಾಗ ಚಿರತೆ ನನ್ನ ಮೇಲೆ ಏಗರಿ ಬಂತು ಕೈಯಲ್ಲಿ ಮೊಬೈಲ್ ಹಿಡಿದಿದ್ದೆ ಅದರಿಂದಲೇ ಅದರ ತಲೆಗೆ ಗುದ್ದಿ ನನ್ನ ಕುತ್ತಿಗೆ ಅದಕ್ಕೆ ಸಿಗದಂತೆ ತಳ್ಳಿದೆ, ಕೆಳಕ್ಕೆ ಬಿದ್ದ ಚಿರತೆ ಓಡಿ ಹೋಯಿತು ನಾನು ಸಹ ಗಾಬರಿಯಿಂದ ಊರಿಗೆ ಓಡಿ ಬಂದೆ ಎಂದು ತಿಳಿಸಿದರು ಎಂದು ಮಾಹಿತಿ ನೀಡಿದರು.

Chitradurga: ಚಿರತೆ ಪ್ರತ್ಯಕ್ಷ, ಕುರುಡಿಹಳ್ಳಿ ಗ್ರಾಮದ ಜನರಲ್ಲಿ ಮೂಡಿದ ಆತಂಕ

ಈ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಸರ್ವೆ ಮತ್ತು ಕಬ್ಬು ಬೆಳೆದಿರುವುದರಿಂದ ಈ ಪ್ರದೇಶ ಕಾಡಿನಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ವೈಜ್ಞಾನಿಕ ತಂತ್ರಗಾರಿಕೆ ಬಳಸಿ ಚಿರತೆ ಸೆರೆಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಚಿರತೆ ಸಿಗುತ್ತಿಲ್ಲ, ರೈತರು ಜಮೀನುಗಳಿಗೆ ಹೋಗಲಾಗದೆ ಫಸಲು ಹಾಳಾಗುತ್ತಿವೆ, ಅರಣ್ಯ ಇಲಾಖೆ ಚಿರತೆ ಹಿಡಿಯಲು ಮತ್ತಷ್ಟು ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios