ಚಾಮರಾಜನಗರದಲ್ಲಿ ಚಿರತೆ ಸೆರೆಗೆ ಲೆಫರ್ಡ್ ಟಾಸ್ಕ್ ಫೋರ್ಸ್ ಕೂಂಬಿಂಗ್
ಚಾಮರಾಜನಗರದಲ್ಲಿ ಚಿರತೆ ಸಂಚಾರದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಲೆಫರ್ಡ್ ಟಾಸ್ಕ್ ಫೋರ್ಸ್ ಕರೆಸಿ ಕೂಂಬಿಂಗ್ ನಡೆಸ್ತಿದೆ.
ವರದಿ: ಪುಟ್ಟರಾಜು. ಆರ್. ಸಿ. ಏಷ್ಯಾನೆಟ್ ಸುವರ್ಣನ್ಯೂಸ್
ಚಾಮರಾಜನಗರ (ಜು.27): ಕಗ್ಗಲಿಗುಂದಿ ಗ್ರಾಮದಲ್ಲಿ ಬಾಲಕಿಯ ಮೇಲೆ ಅಟ್ಯಾಕ್ ಮಾಡಿ ಕೊಂದಿದ್ದ ಚಿರತೆ ಇದೀಗ ಮಲ್ಲಿಗಹಳ್ಳಿ ಗ್ರಾಮದ ಬಾಲಕನ ಮೇಲೆ ಅಟ್ಯಾಕ್ ಮಾಡಿದ್ದು ಗ್ರಾಮಸ್ಥರು ಚಿರತೆ ಸಂಚಾರದಿಂದ ಬೆಚ್ಚಿಬಿದ್ದಿದ್ದಾರೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಲೆಫರ್ಡ್ ಟಾಸ್ಕ್ ಫೋರ್ಸ್ ಕರೆಸಿ ಕೂಂಬಿಂಗ್ ನಡೆಸ್ತಿದೆ. ಗ್ರಾಮಸ್ಥರು ಹಾಗೂ ಶಾಲೆಯ ಮಕ್ಕಳಿಗೆ ಧೈರ್ಯ ತುಂಬಲೂ ಫಾರೆಸ್ಟ್ ಗಾರ್ಡ್ ನೇಮಿಸಿ ಶಾಲಾ ಮಕ್ಕಳಿಗೆ ರಕ್ಷಣೆ ಕೊಡ್ತಿದೆ. ಚಿರತೆ ಕ್ಯಾಮೆರಾ ಟ್ರ್ಯಾಪ್ ಸಿಕ್ಕಿದ್ದು, ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಹರಸಾಹಸ ಮಾಡ್ತಿದ್ದಾರೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಭಯ ಭೀತರಾಗಿ ಒಂದೆಡೆ ಗುಂಪು ಕಟ್ಟಿ ನಿಂತಿರುವ ಗ್ರಾಮಸ್ಥರು. ಮತ್ತೊಂದೆಡೆ ಶಾಲೆಗೆ ಹೋಗುವ ವಿದ್ಯಾರ್ಥಿಗಳನ್ನ ಎಸ್ಕಾರ್ಟ್ ಮಾಡುತ್ತಿರುವ ಫಾರೆಸ್ಟ್ ಗಾರ್ಡ್ ಗಳು.. ಕೈಯಲ್ಲಿ ಲಾಠಿ ಹಿಡಿದು ಗಿಡ ಗಂಟಿಗಳನ್ನ ತಡಕಾಡುತ್ತಿರುವ ಅರಣ್ಯಾಧಿಕಾರಿಗಳು. ಗ್ರಾಮದ ಹೊರ ವಲಯದಲ್ಲಿ ಬೋನಿಟ್ಟು ಅದರಲ್ಲಿ ನಾಯಿಯನ್ನು ಕಟ್ಟಿ ಕಾದು ಕುಳಿತ ಸಿಬ್ಬಂದಿ.
ಗಮನಿಸಿ, ಆಗುಂಬೆ ಘಾಟ್ ನಲ್ಲಿ ಜು. 27ರಿಂದ ಸೆ. 15ರವರೆಗೆ ವಾಹನಗಳ ಸಂಚಾರ ನಿಷೇಧ
ಈ ಎಲ್ಲಾ ದೃಶ್ಯ ಕಾಣ ಸಿಕ್ಕಿದ್ದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಲ್ಲಿಗಹಳ್ಳಿ ಗ್ರಾಮದಲ್ಲಿ. ನಿನ್ನೆ ಬಾಲಕ ಹರ್ಷನ ಮೇಲೆ ದಾಳಿ ನಡೆಸಿ ಎಸ್ಕೇಪ್ ಆಗಿದ್ದ ಚಿರತೆಗಾಗಿ ಅರಣ್ಯಾಧಿಕಾರಿಗಳು ಕೂಂಬಿಂಗ್ ನಡೆಸಿದ್ರು. ಗ್ರಾಮದ ಹೊರವಲಯದಲ್ಲಿ ಬೋನನ್ನಿಟ್ಟು ಚಿರತೆಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಆದ್ರೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಚಿರತೆ ಗ್ರಾಮದ ಸುತ್ತಮುತ್ತಲೇ ಓಡಾಡ್ತಿದೆ.ನಮ್ಮ ಕಣ್ಣೆದುರಿಗೆ ನಾಯಿಯ ಮೇಲೆ ಅಟ್ಯಾಕ್ ಮಾಡ್ತು ಅಂತಾರೆ. ಇದರಿಂದ ಗ್ರಾಮಸ್ಥರು ಚಿರತೆಯ ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನೂ ಆಗಿದ್ದಿಷ್ಟೇ ಕಳೆದ ಎರೆಡು ದಿನಗಳಿಂದ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಚಿರತೆ ಕಾಣಿಸಿ ಕೊಳ್ಳುತ್ತಿತ್ತು. ನಿನ್ನೆ 9 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಬಾಲಕ ಪ್ರಾಣಪಾಯದಿಂದ ಪಾರಾಗಿದ್ದ. ಈ ಹಿನ್ನಲೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಇಂದು ನುರಿತ ಲೆಪರ್ಡ್ ಟಾಸ್ಕ್ ಫೋರ್ಸ್ ನೊಂದಿಗೆ 70 ಮಂದಿಯ ತಂಡ ಫೀಲ್ಡಿಗಿಳಿದು ಕೂಂಬಿಂಗ್ ಕಾರ್ಯಾಚರಣೆ ನಡೆಸಿತು. ಕ್ಯಾಮರಗಳನ್ನ ಅಳವಡಿಸಿ, 6 ಕಡೆ ಬೋನನ್ನ ಇಟ್ಟು ಕಾರ್ಯಾಚರಣೆ ನಡೆಸಿತು. ಸತತ 8 ಗಂಟೆಗಳ ಸುದೀರ್ಘ ಕೂಂಬಿಂಗ್ ನಡೆಸ್ತಿದ್ದಾರೆ.ಕಗ್ಗಲೀಗುಂದಿ ಗ್ರಾಮದಲ್ಲಿ ಬಾಲಕಿಯ ಸಾವಿಗೆ ಕಾರಣವಾಗಿದ್ದ ಚಿರತೆಯೆ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
WCCF ಸೇರ್ಪಡೆಗೊಂಡ ವಿಶ್ವದ 40 ನಗರಗಳಲ್ಲಿ ಸ್ಥಾನ ಪಡೆದ ದೇಶದ ಏಕೈಕ ನಗರ ಬೆಂಗಳೂರು!
ಒಟ್ನಲ್ಲಿ ಕಳೆದ 15 ದಿನದ ಹಿಂದೆ ಕಗ್ಗಲಿಗುಂದಿ ಗ್ರಾಮದಲ್ಲಿ 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿತ್ತು ಚಿಕಿತ್ಸೆ ಪಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ಲು ಅಂದು ದಾಳಿ ನಡೆಸಿದ ಚಿರತೆ ಇದೆ ಎಂಬ ಶಂಕೆ ಕೂಡ ಇದ್ದು ಶತಾಯ ಗತಾಯ ಚಿರತೆಯನ್ನ ಸೆರೆ ಹಿಡಿಯಲೇ ಬೇಕೆಂದು ಅರಣ್ಯಾಧಿಕಾರಿಗಳು ಪಣ ತೊಟ್ಟಿದ್ದಾರೆ. ಇನ್ನು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು ಕತ್ತಲಾದ ಬಳಿಕ ಮನೆಯಿಂದ ಆಚೆ ಬರಲು ಭಯ ಪಡುತ್ತಿದ್ದಾರೆ. ಅಲ್ಲದೇ ಚಿರತೆ ಭಯಕ್ಕೆ ಶಾಲೆಗೆ ಒಂದು ದಿನ ರಜೆ ಬೇರೆ ಕೊಟ್ಟಿದ್ದಾರೆ. ಒಟ್ಟಾರೆ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷದಿಂದ ಮತ್ತೆ ಚಾಮರಾಜನಗರ ಜಿಲ್ಲೆ ಸುದ್ದಿಯಾಗಿದಂತು ನಿಜಕ್ಕೂ ದುರಂತವೇ ಸರಿ.