Asianet Suvarna News Asianet Suvarna News

Chitradurga: ಚಂದ್ರವಳ್ಳಿ ಪಕ್ಕದ‌ ಗುಡ್ಡದಲ್ಲಿ ಚಿರತೆ ಹಾವಳಿ: ‌ಹಸು ಕೊಂದು ಪರಾರಿ

ಬೆಟ್ಟ ಗುಡ್ಡಗಳು ಅಂದ್ಮೇಲೆ ಕಾಡು ಪ್ರಾಣಿಗಳು ಇರುವುದು ಕಾಮನ್. ಆದ್ರೆ ಏಳು ಸುತ್ತಿನ ಕಲ್ಲಿನ ಕೋಟೆ ಹಿಂಭಾಗದಲ್ಲಿರುವ ಚಂದ್ರವಳ್ಳಿ ಪಕ್ಕದಲ್ಲಿರುವ ಗುಡ್ಡದಲ್ಲಿ ಚಿರತೆ ಒಂದು ಹಸುವಿನ ಮೇಲೆ ದಾಳಿ ಮಾಡಿ ಪರಾರಿ ಆಗಿರುವುದು ಜನರ ನಿದ್ದೆಗೆಡಿಸಿದೆ. 

leopard kills cattle in chitradurga district gvd
Author
First Published Jul 23, 2023, 5:09 PM IST

ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜು.23): ಬೆಟ್ಟ ಗುಡ್ಡಗಳು ಅಂದ್ಮೇಲೆ ಕಾಡು ಪ್ರಾಣಿಗಳು ಇರುವುದು ಕಾಮನ್. ಆದ್ರೆ ಏಳು ಸುತ್ತಿನ ಕಲ್ಲಿನ ಕೋಟೆ ಹಿಂಭಾಗದಲ್ಲಿರುವ ಚಂದ್ರವಳ್ಳಿ ಪಕ್ಕದಲ್ಲಿರುವ ಗುಡ್ಡದಲ್ಲಿ ಚಿರತೆ ಒಂದು ಹಸುವಿನ ಮೇಲೆ ದಾಳಿ ಮಾಡಿ ಪರಾರಿ ಆಗಿರುವುದು ಜನರ ನಿದ್ದೆಗೆಡಿಸಿದೆ. ಜನರ ಮುಂದೆಯೇ ಮೂಖ ಪ್ರಾಣಿಯನ್ನು ಹೊತ್ತಯ್ದಿರೋ‌ ಚಿರತೆಯ ಭಯಾಕನ ದೃಶ್ಯ ವಾಯು ವಿಹಾರಿಗಳಲ್ಲಿ ಆತಂಕ ಮೂಡಿಸಿದೆ. ಈ ಕುರಿತಾದ ವರದಿ ಇಲ್ಲಿದೆ. ಚಿರತೆ ದಾಳಿಯಿಂದ ಸಾವನ್ನಪ್ಪಿರೋ ಜಾನುವಾರು, ಮತ್ತೊಂದೆಡೆ ಚಿರತೆಯ ಹಾವಳಿಯಿಂದ ಆತಂಕದಲ್ಲಿಯೇ ಗುಡ್ಡ ಬೆಟ್ಟ ಪರಿಶೀಲನೆ ಮಾಡ್ತಿರೋ ಜನರು. 

ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ‌ ಕಲ್ಲಿನಕೋಟೆ ಹಿಂಭಾಗದ‌‌ ಚಂದ್ರವಳ್ಳಿ ಬಳಿ. ಕಳೆದ ಒಂದು ವಾರದಿಂದ ವಾಯು ವಿಹಾರಿಗಳ‌ ಕಣ್ಣಿಗೆ ಚಿರತೆ ಹಾಗಾಗ ಕಾಣಿಸಿಕೊಳ್ಳುತ್ತಿತ್ತಂತೆ. ಬೆಟ್ಟ, ಗುಡ್ಡ ಅಂದ್ಮೇಲೆ ಚಿರತೆ, ಕರಡಿಗಳು ಇರುವುದು ಸಹಜ ಎಂದು ಜನರು ಸುಮ್ಮನಾಗಿದ್ದಾರೆ. ಆದ್ರೆ ಇಂದು ಏಕಾಏಕಿ‌ ಬೆಳಗಿನ ಸಮಯದಲ್ಲಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡ್ತಿರೋ ದೃಶ್ಯಗಳನ್ನು ಸ್ಥಳೀಯರು ಕಣ್ಣಾರೆ‌ ಕಂಡು ಭಯಭೀತರಾಗಿದ್ದಾರೆ.‌‌‌  ಆ ವೇಳೆ ಜನರು ಎಷ್ಟೇ‌‌ ಕೂಗಾಡಿದ್ರು ಕೂಡ ಆ ಮೂಖ‌ ಪ್ರಾಣಿಯ ರಕ್ಷಿಸಲಿ ಆಗಲಿಲ್ಲ. ಅಷ್ಟೊತ್ತಿಗಾಗಲೇ‌ ಚಿರತೆ ಮೂಖ ಪ್ರಾಣಿಯ ಜೀವ ತೆಗೆದಿತ್ತು. 

ಯು.ಟಿ.ಖಾದರ್‌ ಸಭಾ​ಧ್ಯಕ್ಷ ಪೀಠಕ್ಕೆ ಯೋಗ್ಯ​ರ​ಲ್ಲ: ಈಶ್ವ​ರಪ್ಪ

ಅಷ್ಟಕ್ಕೆ ಸುಮ್ಮನಾಗದ ಜನರು ಗುಂಪಾಗಿ ಜೋರಾಗಿ ಸದ್ದು ಮಾಡುತ್ತಾ ಬೆಟ್ಟದ ಕಡೆ‌‌ ಹೋಗಿದ್ದಾರೆ. ಅಷ್ಟೊತ್ತಿಗೆ ಚಿರತೆ ಅಲ್ಲಿಂದ ಕಾಲು ಕಿತ್ತಿತ್ತು,‌ಆದ್ರೆ ಹಸುವಿನ ಪ್ರಾಣಿ ‌ಪಕ್ಷಿ ಹಾರಿ‌ ಹೋಗಿತ್ತು ಎಂದು ಸ್ಥಳೀಯರು ತಿಳಿಸಿದರು. ಚಂದ್ರವಳ್ಳಿ ಅಂದ್ಮೇಲೆ ನಿತ್ಯ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಿಗಳು ಆಗಮಿಸೋದು ಸರ್ವೆ ಸಾಮಾನ್ಯ. ಆದ್ರೆ ಚಿರತೆ ಹಾಗಾಗ ಕಂಡು ಬಂದಾಗ ಕೆಲವರು ಸ್ಥಳೀಯ ಅರಣ್ಯ ಇಲಾಖೆ‌ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಜನರ ಮೇಲೆ ಯಾವುದೇ ಅನಾಹುತ ಆಗುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ್ರು ಯಾರೂ ತಲೆ‌ ಕೆಡಿಸಿಕೊಂಡಿಲ್ಲ. 

ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವಂತೆ ನಾನು ಹೇಳಿಲ್ಲ: ಸುನಿಲ್‌ ಬೋಸ್‌

ಇದೆಲ್ಲದರ ಪರಿಣಾಮ ಇಂದು ಒಂದು ಮೂಕ ಜಾನುವಾರು ಚಿರತೆ ದಾಳಿಗೆ ಬಲಿಯಾಗಿದೆ. ಇನ್ನಾದ್ರು ಮನುಷ್ಯರ ಮೇಲೆ ದಾಳಿ ಅಥವಾ ಅನಾಹುತ ಆಗುವ ಮುನ್ನ ಅಧಿಕಾರಿಗಳು ಅಲರ್ಟ್ ಆಗಲಿ ಎಂದು ಸ್ಥಳೀಯ ವಾಕರ್ಸ್ ಗಳ ಆಗ್ರಹ. ಅದೇನೆ‌ ಇರ್ಲಿ ಕಾಡು ಪ್ರಾಣಿಗಳು ಯಾವಾಗ ಏನೇನ್ ಅನಾಹುತ ಮಾಡ್ತಾವೆ ಎಂದು ಯಾರಿಗೂ ಊಹಿಸಲು ಅಸಾಧ್ಯ.‌ ಜನಬಿಡ ಪ್ರದೇಶಗಳಲ್ಲಿಯೂ ಈ ರೀತಿ ಅಟ್ಯಾಕ್ ಮಾಡಿದಾಗ ಅರಣ್ಯ ಇಲಾಖೆ ಜಾಗೃತ ವಹಿಸಿ ಜನರ ರಕ್ಷಣೆಗೆ ಮುಂದಾಗಬೇಕಿದೆ.

Follow Us:
Download App:
  • android
  • ios