ಮೈಸೂರು: ಬೋನಿಗೆ ಬಿದ್ದ ಗಂಡು ಚಿರತೆ, ನಿಟ್ಟುಸಿರು ಬಿಟ್ಟ ಜನತೆ..!

ಮುತ್ತತ್ತಿ ಗ್ರಾಮದಲ್ಲಿ ಇಲ್ಲಿಯವರೆಗೂ ಒಟ್ಟು ಏಳು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ, ದಿಲೀಪ್‌ ಎಂಬುವರ ತೋಟದಲ್ಲಿ ಐದು ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು ಹಾಗೂ ಇನ್ನಾಯತ್‌ ಹುಸೇನ್‌ ಎಂಬವರ ತೋಟದಲ್ಲಿ ಜು. 11ರಂದು ಎರಡು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿತ್ತು, ಶನಿವಾರ ಎರಡು ವರ್ಷದ ಗಂಡು ಚಿರತೆ ಬೋನಿಗೆ ಬೀಳುವ ಮೂಲಕ ಇವರ ತೋಟದಲ್ಲಿ ಎರಡು ಚಿರತೆಗಳು ಸೆರೆಯಾಗಿವೆ.

Leopard Fell to Cage at T Narasipura in Mysuru grg

ಟಿ. ನರಸೀಪುರ(ಜು.23): ತಾಲೂಕಿನ ಮುತ್ತತ್ತಿ ಗ್ರಾಮದ ಇನ್ನಾಯತ್‌ ಹುಸೇನ್‌ ಎಂಬವರ ಮಾವಿನ ತೋಟದಲ್ಲಿ ಹಲವು ದಿನಗಳ ಹಿಂದೆ ಇಟ್ಟಿದ್ದ ಬೋನಿನಲ್ಲಿ ಗುರುವಾರ ರಾತ್ರಿ ಎರಡು ವರ್ಷದ ಗಂಡು ಚಿರತೆ ಸೆರೆಯಾಗಿದೆ.

ಮುತ್ತತ್ತಿ ಗ್ರಾಮದಲ್ಲಿ ಚಿರತೆ ಓಡಾಡುತ್ತಿದೆ ಎಂಬ ಗ್ರಾಮಸ್ಥರ ದೂರಿನ ಅನ್ವಯ ಬೋನು ಇರಿಸಲಾಗಿತ್ತು. ಹುಸೇನ್‌ ತೋಟದ ಪಕ್ಕದ ಜಮೀನಿನ ಮಾಲೀಕ ದಿಲೀಪ್‌ ಎಂಬವರು ಬೆಳಗ್ಗೆ ಜಮೀನಿಗೆ ಬಂದಾಗ ಬೋನಿಗೆ ಚಿರತೆ ಬಿದ್ದಿರುವುದನ್ನು ಗಮನಿಸಿ, ಅರಣ್ಯ ಇಲಾಖೆಯವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ, ಚಿರತೆಯನ್ನು ತಮ್ಮ ವಶಕ್ಕೆ ಪಡೆದು, ಪಟ್ಟಣದ ವಲಯ ಅರಣ್ಯ ಅಧಿಕಾರಿಗಳ ಕಚೇರಿಗೆ ತಂದಿದ್ದು, ಮೈಸೂರಿನ ಪಶು ವೈದ್ಯರಿಂದ ತಪಾಸಣೆ ನಡೆಸಿ, ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ಆದೇಶದ ಮೇರೆಗೆ ಅರಣ್ಯಕ್ಕೆ ಬಿಡಲಾಗುವುದು ಎಂದು ಉಪ ವಲಯ ಅರಣ್ಯ ಅಧಿಕಾರಿ ಮಂಜುನಾಥ್‌ ತಿಳಿಸಿದ್ದಾರೆ.

ಪ್ರೀತಿ ಮಾಡೋದ್‌ ತಪ್ಪೇನಿಲ್ಲಾ.. ಆದ್ರೆ, ಪ್ರಿಯಕರ ಕೈಕೊಟ್ಟ ಅಂತ ಸಾಯೋದ್‌ ತಪ್ಪಲ್ವಾ!

ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ಇಲ್ಲಿಯವರೆಗೂ ಒಟ್ಟು ಏಳು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ, ದಿಲೀಪ್‌ ಎಂಬುವರ ತೋಟದಲ್ಲಿ ಐದು ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು ಹಾಗೂ ಇನ್ನಾಯತ್‌ ಹುಸೇನ್‌ ಎಂಬವರ ತೋಟದಲ್ಲಿ ಜು. 11ರಂದು ಎರಡು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿತ್ತು, ಶನಿವಾರ ಎರಡು ವರ್ಷದ ಗಂಡು ಚಿರತೆ ಬೋನಿಗೆ ಬೀಳುವ ಮೂಲಕ ಇವರ ತೋಟದಲ್ಲಿ ಎರಡು ಚಿರತೆಗಳು ಸೆರೆಯಾಗಿವೆ.

ಮತ್ತೆ ಈ ಸ್ಥಳದಲ್ಲಿ ಬೋನ್‌ನನ್ನು ಇಡಲಾಗಿದೆ, ಮುತ್ತತ್ತಿಯ ಗ್ರಾಮಸ್ಥರು ಕತ್ತಲಾದ ಮೇಲೆ ಜಮೀನ ಬಳಿ ತಿರುಳಲು ಭಯಭೀತರಾಗಿದ್ದಾರೆ, ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿಗಳಾದ ಉಮೇಶ್‌, ನಾಗರಾಜು, ಅರಣ್ಯ ಇಲಾಖೆಯ ನಾಗರಾಜು, ಲೋಕೇಶ್‌ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿದ್ದರು.

Latest Videos
Follow Us:
Download App:
  • android
  • ios