ಹೂವಿನಹಡಗಲಿ: ಆಹಾರ ಅರಸಿ ಬಂದು ಪಂಪ್‌ಹೌಸ್‌ನಲ್ಲಿ ಸಿಲುಕಿದ್ದ ಚಿರತೆ ಸೆರೆ

ಪಂಪ್‌ಹೌಸ್‌ನಲ್ಲಿ ಸಿಲುಕಿಕೊಂಡಿದ್ದ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗುಜನೂರು ಗ್ರಾಮಸ್ಥರು.

Leopard Catch at Huvina Hadagali in Vijayanagara grg

ವಿಜಯನಗರ(ಮಾ.01):  ಆಹಾರ ಹುಡುಕಿ ಕೊಂಡು ಬಂದ ಚಿರತೆಯೊಂದು ಪಂಪ್ ಹೌಸ್‌ನಲ್ಲಿ ಸಿಲುಕಿಕೊಂಡು ರಾತ್ರಿಯಿಡಿ ಪರದಾಡಿದ ಘಟನೆ ಜಿಲ್ಲೆಯ ಹೂವಿನಹಡಗಲಿ ಸಿಂಗಟಾಲೂರು ಏತನೀರಾವರಿ ಘಟಕದಲ್ಲಿ ನಡೆದಿದೆ. ಪಂಪ್‌ಹೌಸ್‌ನಲ್ಲಿ ಸಿಲುಕಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗುಜನೂರು ಗ್ರಾಮಸ್ಥರು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.

ಘಟನೆ ವಿವರ ರಾತ್ರಿಯ ವೇಳೆ ಆಹಾರ ಹುಡುಕಿಕೊಂಡು ಹುಲಿಗುಡ್ಡದ ಬಳಿ ಬಂದಿದ್ದ ಚಿರತೆ ಸಮೀಪದ ನೀರೆತ್ತುವ ಘಟಕದೊಳಗೆ ನುಗ್ಗಿದೆ ನಂತರ ಘಟಕದಿಂದ ಹೊರಬರಲಾಗದೆ ಗಾಬರಿಗೊಂಡು ಘರ್ಜಿಸಲು ಪ್ರಾರಂಭಿಸಿದೆ. ಈ ವೇಳೆ ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಸಿಬ್ಬಂದಿ ಚಿರತೆ ಬಂದಿರುವುದನ್ನು ಗಮನಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಸ್ಥಳದಲ್ಲಿ ಬೋನ್ ಇರಿಸಿ ಚಿರತೆ ಹಿಡಿಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಜನರು ಓಡಾಡುವ ಶಬ್ದಕ್ಕೆ ಚಿರತೆ ಗಾಬರಿಗೊಂಡು ಘಟಕದ ಕೆಳಭಾಗದ ಸಂದುಗಳಲ್ಲಿ ಅವಿತು ಕುಳಿತಿದೆ. ಬೆಳಗಿನ ಜಾವದವರೆಗೂ ಹೊರಬರಲಾಗದೇ ಪರದಾಡಿದೆ.

ಕಳುವಾದ ನಾಯಿ ಹುಡುಕಿ ಕೊಡುವಂತೆ ದೂರು, ನಗರಸಭೆ ಸಿಬ್ಬಂದಿ ವರ್ತನೆಗೆ ಶ್ವಾನ ಪ್ರಿಯರ ಆಕ್ರೋಶ

ಇನ್ನೂ ಚಿರತೆ ಪ್ರತ್ಯಕ್ಷವಾದ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಲ ಗ್ರಾಮಗಳ ಜನರು ಸ್ಥಳಕ್ಕೆ ಆಗಮಿಸಿದ್ದಾರೆ. ಜನ ಸಂದಣಿ ಹೆಚ್ಚಾದ ಕಾರಣಕ್ಕಾಗಿ ಗಾಬರಿಗೊಂಡಿದ್ದ ಚಿರತೆ ನೀರೆತ್ತುವ ಘಟಕದ ಸಂದುಗಳ ಮೂಲಕ ಹೊರಬಂದು ಪಕ್ಕದ ಹೊಲಗಳಲ್ಲಿ ಓಡಾಡಿ ತಪ್ಪಿಸಿಕೊಳ್ಳಲು ಪ್ರಯತ್ನಸಿದೆ. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಗುಜನೂರು ಗ್ರಾಮಸ್ಥರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದ್ದಾರೆ.

Latest Videos
Follow Us:
Download App:
  • android
  • ios