ಕಳುವಾದ ನಾಯಿ ಹುಡುಕಿ ಕೊಡುವಂತೆ ದೂರು, ನಗರಸಭೆ ಸಿಬ್ಬಂದಿ ವರ್ತನೆಗೆ ಶ್ವಾನ ಪ್ರಿಯರ ಆಕ್ರೋಶ

ನಾನು ಸಾಕಿದ ಎರಡು ಹೆಣ್ಣು ನಾಯಿಗಳು ಕಳೆದು ಹೋಗಿವೆ ಹುಡುಕಿ ಕೊಡಬೇಕು. ಅವುಗಳನ್ನು ಒಯ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೀಗೆಂದು ಹೊಸಪೇಟೆ ಎಂ.ಜೆ. ನಗರದ 4ನೇ ಕ್ರಾಸ್‌ ನಿವಾಸಿ ಶ್ರೀದೇವಿ ಎನ್‌.ಪಿ. ಅವರು ಬಡಾವಣೆ ಪೊಲೀಸ್‌ ಠಾಣೆಗೆ  ದೂರು ಸಲ್ಲಿಸಿದ್ದಾರೆ.

dog missing complaint in Vijayanagara gow

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಹೊಸಪೇಟೆ (ಫೆ.28): ಪೊಲೀಸರಿಗೆ ಬರುವ ದೂರುಗಳು ಹೇಗಿರುತ್ತವೆ ಅಂದರೆ  ಅದನ್ನು ಗಂಭೀರವಾಗಿ ಪರಿಗಣಿಸೋ ಹಾಗಿಲ್ಲ ಬಿಡೋ ಹಾಗಿಲ್ಲ. ಯಾಕಂದ್ರೆ ಸಮಸ್ಯೆ ಸಣ್ಣದಿರುತ್ತದೆ ಅದಕ್ಕೆ ಪರಿಹಾರ ಹುಡುಕಿಕೊಳ್ಳುವಲ್ಲಿ ಮಾತ್ರ ಸಾರ್ವಜನಿಕರು‌ ಪೊಲೀಸರ ಮೊರೆ ಹೋಗ್ತಾರೆ.  ಅದಕ್ಕೆ ಪೊಲೀಸರು ಇಕ್ಕಟ್ಟಿಗೆ ಸಿಲುಕುವುದು ಸಾಮಾನ್ಯದ ವಿಷಯವಾಗಿದೆ. ನಾನು ಸಾಕಿದ ಎರಡು ಹೆಣ್ಣು ನಾಯಿಗಳು ಕಳೆದು ಹೋಗಿವೆ ಹುಡುಕಿ ಕೊಡಬೇಕು. ಅವುಗಳನ್ನು ಒಯ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೀಗೆಂದು ಹೊಸಪೇಟೆ ಎಂ.ಜೆ. ನಗರದ 4ನೇ ಕ್ರಾಸ್‌ ನಿವಾಸಿ ಶ್ರೀದೇವಿ ಎನ್‌.ಪಿ. ಅವರು ಬಡಾವಣೆ ಪೊಲೀಸ್‌ ಠಾಣೆಗೆ  ದೂರು ಸಲ್ಲಿಸಿದ್ದಾರೆ.

ಕ್ಷಣಕಾಲ ಗೊಂದಲಕ್ಕಿಡಾದ ಪೊಲೀಸರು:
ಹೀಗೆ ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ಬಂದು ನಾಯಿ ಕಳೆದಿದೆ ಎಂದು ದೂರು‌ ಕೊಟ್ಟಾಗ ಪೊಲೀಸರ ಒಂದಷ್ಟು ಗೊಂದಲಕ್ಕಿಡಾಗಿ ಅಲ್ಲಿ ಎಲ್ಲೋ‌ ಇರಬೇಕು ಮೊದಲು ಹುಡುಕಿ ಎಂದು ಹೇಳಿ‌ ಕಳುಹಿಸಿದ್ದಾರೆ ನಂತರ ಮತ್ತೊಮ್ಮೆ ಠಾಣೆಗೆ ಬಂದಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೂರು ಸ್ವೀಕಾರ ಮಾಡಿದ್ದಾರೆ.

ಶ್ರೀದೇವಿ ಅವರು ನೀಡಿದ ದೂರಿನ ಪ್ರಕಾರ ಫೆ.22ರ ರಾತ್ರಿ 10.30ರ ಸುಮಾರಿಗೆ ಎರಡು ನಾಯಿಗಳು ಕಾಣೆಯಾಗಿವೆ. ಎಂದಿನಂತೆ ಎರಡು ನಾಯಿಗಳನ್ನು ಮೂತ್ರ ವಿಸರ್ಜಿಸಲು ಮನೆಯಿಂದ ಹೊರಗೆ ಬಿಟ್ಟಿದ್ದೇನು. ಅರ್ಧಗಂಟೆ ಕಳೆದರೂ ಅವು ವಾಪಸ್‌ ಬರಲಿಲ್ಲ. ಈ ಕುರಿತು ನೆರೆಮನೆಯವರನ್ನು ವಿಚಾರಿಸಿದಾಗ, ಕೆಲವರು ಬಂದು ಬಿಳಿ ಬಣ್ಣದ ವ್ಯಾನ್‌ನಲ್ಲಿ ನಾಯಿಗಳನ್ನು ಒಯ್ದಿದ್ದಾರೆ ಎಂದು ತಿಳಿಸಿದರು. ತಕ್ಷಣ, ಕೌನ್ಸಿಲರ್‌ ಕೋತಿ ಮಂಜುನಾಥ್‌ ಅವರನ್ನು ಸಂಪರ್ಕಿಸಿದಾಗ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ನಗರಸಭೆಯವರು ಕೊಂಡೊಯ್ದಿದ್ದಾರೆ ಎಂದರಂತೆ.

ತುಮಕೂರು: ಅದೃಷ್ಟಕ್ಕಾಗಿ ಕೋಳಿ ಫಾರಂನಲ್ಲಿ ನರಿ ಸಾಕಿ ಜೈಲು ಸೇರಿದ..!

ಸಂತಾನ ಹರಣ ಚಿಕಿತ್ಸೆಯಾದ ನಾಯಿಯನ್ನು ಕರೆದುಕೊಂಡು ಹೋಗಿದ್ದಾರೆ:
ಇನ್ನೂ ‌ಈಗಾಗಲೇ ಶ್ರೀದೇವಿ ಅವರು ತಮ್ಮ  ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ  ಮಾಡಿಸಿದ್ದಾರೆ. ಆದ್ರೇ ಈ‌ ಬಗ್ಗೆ ಪರಿಶೀಲನೆ ಮಾಡದೇ ನಗರಸಭೆಯವರು ಬಲವಂತವಾಗಿ ನಾಯಿಗಳನ್ನು ಹಿಡಿದುಕೊಂಡು ಹೋಗಿದ್ದಾರೆಂದು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಗಳನ್ನು ತೆಗೆದುಕೊಂಡು ಹೋಗುವಾಗ ಸ್ಥಳೀಯ ನಗರಸಭೆ ಸದಸ್ಯ ಕೋತಿ ಮಂಜುನಾಥ್‌ ಅಲ್ಲೇ ಇದ್ದರು.

ಪ್ರತ್ಯೇಕ ಪ್ರಕರಣದಲ್ಲಿ ಶಿಕ್ಷೆಯಾದರೂ ಏಕಕಾಲಕ್ಕೆ ಜಾರಿ: ಹೈಕೋರ್ಟ್‌

ಕೆಲವರು ತಡೆಯಲು ಪ್ರಯತ್ನಿಸಿದಾಗ, ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ, ನಾಯಿಗಳನ್ನು ಕರೆತರುತ್ತಾರೆ ಎಂದು ತಿಳಿಸಿದ್ದಾರೆ. ಕರೆದುಕೊಂಡು ಹೋಗಿದ್ದಾರೆ.  ಆದ್ರೇ ಈ ಬಗ್ಗೆ ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ, ಪರಿಸರ ಎಂಜಿನಿಯರ್‌ ಆರತಿ ಅವರನ್ನು ವಿಚಾರಿಸಿದಾಗ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಕೋತಿ ಮಂಜುನಾಥ್‌ ವಿರುದ್ಧ ಕ್ರಮಕೈಗೊಳ್ಳಬೇಕು. ಎರಡು ನಾಯಿಗಳನ್ನು ಮರಳಿ ಪಡೆಯಲು ಸಹಾಯ ಮಾಡಬೇಕೆಂದು ಶ್ರೀದೇವಿ ದೂರಿನಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios