ನರಸೀಪುರ: ನಾಲ್ವರನ್ನು ಕೊಂದಿದ್ದ ನರಭಕ್ಷಕ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಜನತೆ

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ನೆರೆಗ್ಯಾತನಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ, ಚಿರತೆಯನ್ನು ಸ್ಥಳದಲ್ಲೇ ಕೊಲ್ಲುವಂತೆ ಗ್ರಾಮಸ್ಥರಿಂದ ಪ್ರತಿಭಟನೆ. 

Leopard Captured at T Narasipura in Mysuru grg

ಟಿ.ನರಸೀಪುರ(ಜ.27):  ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಸೋಸಲೆ ಹೋಬಳಿಯಲ್ಲಿ ನಾಲ್ವರ ಪ್ರಾಣಹಾನಿಗೆ ಕಾರಣವಾಗಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಗುರುವಾರ ಮುಂಜಾನೆ ನೆರೆಗ್ಯಾತನಹಳ್ಳಿ ಗ್ರಾಮದ ಸತ್ಯಪ್ಪ ಅವರ ತೋಟದ ಬಳಿ ಇಟ್ಟಿದ್ದ ಬೋನಿಗೆ 6 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ. ಅರಣ್ಯ ಅಧಿಕಾರಿಗಳು ಚಿರತೆಯನ್ನು ಬೇರೆಡೆ ಸಾಗಿಸಲು ಪ್ರಯತ್ನ ಪಟ್ಟಾಗ ಗ್ರಾಮಸ್ಥರು ತಡೆದು ಚಿರತೆಯನ್ನು ಸ್ಥಳದಲ್ಲೇ ಕೊಲ್ಲುವಂತೆ ಒತ್ತಾಯಿಸಿದರು. ಚಿರತೆಯನ್ನು ಕೊಂಡೊಯ್ಯುತ್ತಿದ್ದ ವಾಹನವನ್ನು ಸುತ್ತುವರಿದು ಅಡ್ಡ ಮಲಗಿ ಪ್ರತಿಭಟಿಸಿದರು.

ಈ ವೇಳೆ, ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ, ಸೆರೆ ಸಿಕ್ಕ ಚಿರತೆಯನ್ನು ಬೇರೆಡೆಗೆ ಸಾಗಿಸಿದರು. ಸೆರೆ ಸಿಕ್ಕ ಚಿರತೆಯನ್ನು ಬನ್ನೇರುಘಟ್ಟಮೃಗಾಲಯಕ್ಕೆ ಬಿಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು: ತಿ.ನರಸೀಪುರದಲ್ಲಿ ನಿಲ್ಲದ ಚಿರತೆ ಉಪಟಳ, ಆತಂಕದಲ್ಲಿ ಜನತೆ..!

ಕಳೆದ 3 ತಿಂಗಳಲ್ಲಿ ನಾಲ್ವರು ಚಿರತೆ ದಾಳಿಗೆ ಬಲಿಯಾಗಿದ್ದರು. ಜ.21ರಂದು ಹೊರಳಹಳ್ಳಿಯ ಜಯಂತ್‌ (11), ಜ.20ರಂದು ಕನ್ನಾಯಕನಹಳ್ಳಿಯ ಸಿದ್ದಮ್ಮ (60), ಅ.30ರಂದು ಉಕ್ಕಲಗೆರೆ ಮಂಜುನಾಥ್‌, ಡಿ.1ರಂದು ಎಂ.ಕೆಬ್ಬೆಹುಂಡಿಯ ಮೇಘನಾ ಎಂಬುವರನ್ನು ಚಿರತೆ ಆಹುತಿ ಪಡೆದಿತ್ತು.

Latest Videos
Follow Us:
Download App:
  • android
  • ios