Asianet Suvarna News Asianet Suvarna News

ತುಮಕೂರು: ದಾಳಿ ಮಾಡಿದ್ದ ಚಿರತೆಯ ಬೆದರಿಸಿ ಓಡಿಸಿ ಮಗು ಉಳಿಸಿಕೊಂಡ ತಂದೆ..!

7 ವರ್ಷದ ಬಾಲಕಿ ಲೇಖನ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಎಗರಿ ಹೊತ್ತೊಯ್ಯಲು ಮುಂದಾದ ವೇಳೆ ಸಮೀಪದಲ್ಲೇ ಇದ್ದ ತಂದೆ ರಾಕೇಶ್‌ ಜೋರಾಗಿ ಕೂಗಿಕೊಂಡು ದೊಣ್ಣೆಯೊಂದಿಗೆ ಚಿರತೆಗೆ ಬೆದರಿಸಿದ್ದಾರೆ. ಕೂಡಲೇ ಚಿರತೆ, ಮಗುವನ್ನು ಬಿಟ್ಟು ಓಡಿ ಹೋಗಿದೆ.

Leopard Attack on Child in Tumakuru grg
Author
First Published Nov 8, 2023, 6:30 AM IST

ತುಮಕೂರು(ನ.08): ಮಗುವಿನ ಮೇಲೆ ದಾಳಿ ಮಾಡಿ ಹೊತ್ತೊಯಲು ಯತ್ನಿಸಿದ ಚಿರತೆಯನ್ನು ಬೆದರಿಸಿ ಮಗುವನ್ನು ಉಳಿಸಿಕೊಂಡ ಘಟನೆ ತುಮಕೂರು ತಾಲೂಕು ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ. 

7 ವರ್ಷದ ಬಾಲಕಿ ಲೇಖನ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಎಗರಿ ಹೊತ್ತೊಯ್ಯಲು ಮುಂದಾದ ವೇಳೆ ಸಮೀಪದಲ್ಲೇ ಇದ್ದ ತಂದೆ ರಾಕೇಶ್‌ ಜೋರಾಗಿ ಕೂಗಿಕೊಂಡು ದೊಣ್ಣೆಯೊಂದಿಗೆ ಚಿರತೆಗೆ ಬೆದರಿಸಿದ್ದಾರೆ. ಕೂಡಲೇ ಚಿರತೆ, ಮಗುವನ್ನು ಬಿಟ್ಟು ಓಡಿ ಹೋಗಿದೆ.

ಚಿರತೆ ಕೊಂದರೆ ಅಧಿಕಾರಿಗಳ ಮೇಲೆ ಕ್ರಮ ಇಲ್ವಾ? ಬೇರೆ ಯಾರಾದ್ರೂ ಕೊಂದರೆ ಏನು ಹೇಳತ್ತೆ ಕಾನೂನು?

ಚಿರತೆಯ ದಾಳಿಯಿಂದಾಗಿ ಮಗುವಿನ ಕೈ ಕಾಲು ಪರಚಿದ ಗಾಯಗಲಾಗಿವೆ. ಚಿರತೆ ದಾಳಿಯಲ್ಲಿ ಬಾಲಕಿ ಲೇಖನ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Follow Us:
Download App:
  • android
  • ios