Mysuru : 'ಶಾಸಕರಾದವರು ಕೇವಲ ರಾಜಕೀಯ ಹೇಳಿಕೆ ನೀಡುತ್ತಾ ಕೆಲಸ ಮಾಡಿಲ್ಲ'

ಹತ್ತು ವರ್ಷ ಶಾಸಕರಾಗಿ ಕೆಲಸ ಮಾಡಿರುವ ಎಂ.ಕೆ. ಸೋಮಶೇಖರ್‌ ಅವರು ಒಂದೇ ಒಂದು ಮನೆಯನ್ನು ಯಾರಿಗೂ ಕೊಡದೇ, ಒಂದು ಒಂದು ಮನೆ ಕಟ್ಟಲು ಆಗದೇ, ಒಂದೇ ಒಂದು ಎಕರೆ ಭೂಮಿಯನ್ನು ಪಡೆಯಲಾಗದೆ ಈಗ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ನಗರ ಪಾಲಿಕೆ ಮಾಜಿ ಸದಸ್ಯೆ ಮತ್ತು ಕೆ.ಆರ್‌. ಕ್ಷೇತ್ರ ಆಶ್ರಯ ಸಮಿತಿ ಸದಸ್ಯೆ ವಿದ್ಯಾ ಅರಸ್‌ ಆರೋಪಿಸಿದರು.

Legislators have not worked merely  Only making political statements snr

 ಮೈಸೂರು (ನ.08):  ಹತ್ತು ವರ್ಷ ಶಾಸಕರಾಗಿ ಕೆಲಸ ಮಾಡಿರುವ ಎಂ.ಕೆ. ಸೋಮಶೇಖರ್‌ ಅವರು ಒಂದೇ ಒಂದು ಮನೆಯನ್ನು ಯಾರಿಗೂ ಕೊಡದೇ, ಒಂದು ಒಂದು ಮನೆ ಕಟ್ಟಲು ಆಗದೇ, ಒಂದೇ ಒಂದು ಎಕರೆ ಭೂಮಿಯನ್ನು ಪಡೆಯಲಾಗದೆ ಈಗ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ನಗರ ಪಾಲಿಕೆ ಮಾಜಿ ಸದಸ್ಯೆ ಮತ್ತು ಕೆ.ಆರ್‌. ಕ್ಷೇತ್ರ ಆಶ್ರಯ ಸಮಿತಿ ಸದಸ್ಯೆ ವಿದ್ಯಾ ಅರಸ್‌ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆಶ್ರಯ ಮನೆ ಯೋಜನೆಯಡಿ ವೈಯಕ್ತಿಕ ಮನೆ ನಿರ್ಮಾಣಕ್ಕೆ . 35,000 ನೀಡುವ ವ್ಯವಸ್ಥೆ ಇತ್ತು. ಆದರೆ ಅಷ್ಟುಹಣದಲ್ಲಿ ಮನೆಗಳನ್ನು ಈಗ ನಿರ್ಮಿಸಿಕೊಡಲಾಗದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಹೊರತುಪಡಿಸಿ ಉಳಿಕೆ ಹಣವನ್ನು ಫಲಾನುಭವಿಗಳೇ ಕಟ್ಟಬೇಕು ಎಂದು ಆದೇಶ ಮಾಡಿದ್ದು ಇವರೇ. ಇಷ್ಟೆಲ್ಲಾ ವ್ಯವಸ್ಥೆ ಮಾಡಿ ಜಾರಿಗೆ ತರಲು ಹೊರಟಿರುವುದು ನಮ್ಮ ನಿರ್ಧಾರವಲ್ಲ. ಬದಲಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಸೋಮಶೇಖರ್‌ ಅವರೇ ಆಶ್ರಯ ಸಮಿತಿ ಸಭೆಯಿಂದ ರೆಸಲ್ಯೂಷನ್‌ ಮಾಡಿ, ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯುವ ಜೊತೆಗೆ ಕೇಂದ್ರ ಸರ್ಕಾರದಿಂದಲೂ ಅನುಮೋದನೆ ಪಡೆಯದಿರುವ ಯೋಜನೆಯನ್ನು ನಾವು ನುಸ್ಠಾನಗೊಳಿಸುತ್ತಿದ್ದೇವೆಯೇ ಹೊರತು ಬೇರೇನೂ ಇಲ್ಲ ಎಂದು ತಿಳಿಸಿದರು.

ಶಾಸಕ ಎಸ್‌.ಎ. ರಾಮದಾಸ್‌ ಅವರು ಬೇರೆ ಬೇರೆ ಯೋಜನೆಯನ್ನು ಬೇರೆ ಬೇರೆ ಯೋಜನೆಯನ್ನು ಬೇರೆ ಬೇರೆ ಜಾಗದಲ್ಲಿ ಮತ್ತು ವಿವಿಧ ಹಂತಗಳಲ್ಲಿ ಜಾರಿಗೆ ತರುತ್ತಿದ್ದು, ಇದರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಆದ್ದರಿಂದ ಅನಗತ್ಯವಾಗಿ ರಾಜಕೀಯ ಮಾಡಿ ಅಲ್ಲಿರುವ ಫಲಾನುಭವಿಗಳಿಗೆ ತಪ್ಪು ತಿಳುವಳಿ ತರುವುದು ಸೂಕ್ತವಲ. ಯಾವುದೇ ಪಕ್ಷದ ವಿಚಾರವನ್ನು ಮೆರತು ಒಟ್ಟಾಗಿ ಕೆಲಸ ಮಾಡಿ ಸ್ವಂತ ಸೂರಿಲ್ಲದೆ ಕಟ್ಟಕಡೆಯ ವ್ಯಕ್ತಿಗೆ ಮನೆ ಕೊಡುವ ಉದ್ದೇಶವನ್ನು ಈಡೇರಿಸೋಣ. ಅನಗತ್ಯ ಗೊಂದಲ ನಿರ್ಮಾಣ ಸರಿಯಲ್ಲ ಎಂದು ಅವರು ವಿವರಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಸೋಮಶೇಖರ್‌ ಅವರು ಮಾತನಾಡುತ್ತ, ಈಗಿನ ಶಾಸಕರು ಕಳೆದ ನಾಲ್ಕೂವರೆ ವರ್ಷದಲ್ಲಿ ಒಂದೇ ಒಂದು ಎಕರೆ ಭೂಮಿಯನ್ನು ತಂದಿದ್ದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ. ಆದರ ಶಾಸಕ ರಾಮದಾಸ್‌ ಅವರು ಈಗಾಗಲೇ ಆಶ್ರಯ ಮನೆ ನಿರ್ಮಿಸಲು ಪಡೆದ ಭೂಮಿಯನ್ನು ಹೊರತುಪಡಿಸಿ ಈಗಿನ ಅವಧಿಯಲ್ಲಿ ಮೊದಲ ಹಂತದಲ್ಲಿ ನಾಚನಹಳ್ಳಿ ಪಾಳ್ಯದ ಬಳಿ ಸುಮಾರು 15 ಎಕರೆ 37 ಗುಂಟೆ ಜಾಗ ಪಡೆದಿದ್ದಾರೆ. ಅಲ್ಲದೆ 2ನೇ ಹಂತಕ್ಕೆ ಅವಶ್ಯವಿರುವ ಭೂಮಿ ಮಂಜೂರು ಮಾಡಿಕೊಡಬೇಕು ಎಂಬ ಪ್ರಸ್ತಾವನೆಯನ್ನು ಸಿಎಂ ಮತ್ತು ವಸತಿ ಸಚಿವರಿಗೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಅಲ್ಲದೆ 50 ಎಕರೆ ಪ್ರದೇಶವನ್ನು ಆಶ್ರಯ ಸಮಿತಿ ಪಡೆದುಕೊಂಡಿದ್ದು, ನಮಗೆ ಅಗತ್ಯವಿರುವ ಮನೆ ಕಟ್ಟಲು ಬೇಕಾದ ಭೂಮಿ ಲಭ್ಯವಿದೆ. ಆದ್ದರಿಂದ ಸೋಮಶೇಖರ್‌ ಅವರು ರಾಜಕೀಯದಲ್ಲಿ ಇದ್ದರೇನು? ನಿವೃತ್ತರಾದರೇನು? ಅದು ನಮಗೆ ಮುಖ್ಯವಲ್ಲ. ತಾವೂ ಏನು ಮಾಡಿದ್ದೀರೋ ಅದರಂತೆ ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರೋ ಅಥವಾ ಇಲ್ಲವೋ ಎಂಬುದನ್ನು ಸಮಾಜ ನೋಡುವುದು ಎಂಬುದರ ಅರಿವು ತಮಗೆ ಇರಲಿ ಎಂದು ಅವರು ಕೋರಿದ್ದಾರೆ.

ಕಡತ ನಾಪತ್ತೆ ಹೇಗೆ?:

ಜಿ2 ಮನೆ ನಿರ್ಮಿಸಲು ಫಲಾನುಭವಿಗಳಿಂದ ಪಡೆಯಲಾದ ಅಫಿಡವಿಟ್‌ ಮತ್ತು ಹೊಸದಾಗಿ ಸಲ್ಲಿಸಿರುವ ಅರ್ಜಿ ಹಾಗೂ 600 ಕಡತ ಕಾಣೆಯಾದ ಬಗ್ಗೆ ಈಗಾಗಲೇ ನಗರ ಪಾಲಿಕೆ ಆಯುಕ್ತರು ಕೆ.ಆರ್‌. ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದಾಖಲೆಯನ್ನು ಯಾರು ತೆಗೆದುಕೊಂಡು ಹೋಗಿದ್ದಾರೋ ಇನ್ನೂ ಗೊತ್ತಿಲ್ಲ. ಇದು ಯಾರ ಅವಧಿಯಲ್ಲೂ ಆಗಬಾರದೆಂಬುದು ನಮ್ಮ ಮನವಿ. ಈ ಹಿನ್ನೆಲೆಯಲ್ಲಿ ಕಾಣೆಯಾದ ದಾಖಲೆಯನ್ನು ಪಡೆದುಕೊಳ್ಳಲು ಪತ್ರಿಕೆಗಳಲ್ಲಿ ಮತ್ತು ಫಲಾನುಭವಿಗಳಿಗೆ ತಿಳುವಳಿ ಪತ್ರ ನೀಡುವ ಮೂಲಕ ಸೂಕ್ತ ದಾಖಲೆ ಪಡೆದುಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಹೇಮಂತಕುಮಾರ್‌, ಬಿ. ಗೌರಿ, ಹನ್ಸರಾಜ್‌ ಇದ್ದರು.

Latest Videos
Follow Us:
Download App:
  • android
  • ios